Advertisement

ನಿಯಮ ಮೀರಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ : “ಅಲಿಬಾಬಾ’ಗೆ 20 ಸಾವಿರ ಕೋಟಿ ರೂ. ದಂಡ

10:12 PM Apr 10, 2021 | Team Udayavani |

ಬೀಜಿಂಗ್‌: ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಜ್ಯಾಕ್‌ ಮಾ ಮಾಲೀಕತ್ವದ ಅಲಿಬಾಬಾ ಇ-ಮಾರುಕಟ್ಟೆ ಕಂಪನಿ ಸೇರಿದಂತೆ ಚೀನಾದ ದೈತ್ಯ ತಂತ್ರಜ್ಞಾನಾಧಾರಿತ ಕಂಪನಿಗಳು, ಅಲ್ಲಿನ ಸರ್ಕಾರದ ವಕ್ರದೃಷ್ಟಿಗೆ ಬಿದ್ದಿದೆ. ನಿಯಮಮೀರಿ ಆನ್‌ಲೈನ್‌ ಮಾರುಕಟ್ಟೆ ತಾಣ ಅಲಿಬಾಬಾ ಏಕಸ್ವಾಮ್ಯ ಸಾಧಿಸಿದೆ ಎಂದು ಹೇಳಿರುವ ಸರ್ಕಾರಿ ತನಿಖಾಸಂಸ್ಥೆ, ಆ ಕಂಪನಿಯ ಮೇಲೆ 20,776 ಕೋಟಿ ರೂ. ದಂಡ ಹೇರಿದೆ.

Advertisement

ಅಲಿಬಾಬಾ 2019ರಲ್ಲಿ ಮಾರಾಟ ಮಾಡಿರುವ ವಸ್ತುಗಳ ಒಟ್ಟು ಮೌಲ್ಯದ ಶೇ.4ರಷ್ಟನ್ನು ಈಗ ದಂಡದ ರೂಪದಲ್ಲಿ ತೆರಬೇಕಾಗಿದೆ! ಅಲಿಬಾಬಾದ ಆ್ಯಪ್‌ಗ್ಳ ಮೂಲಕ ಯಾವುದೇ ವ್ಯಾಪಾರಿ ವಸ್ತುಗಳನ್ನು ಮಾರಬೇಕಾದರೆ, ಆತ ಇನ್ನಾವುದೇ ಆ್ಯಪ್‌ಗ್ಳಲ್ಲಿ ತನ್ನ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿರಬಾರದು. ಈ ರೀತಿಯ ನಿಯಮಗಳ ಮೂಲಕ ಅಲಿಬಾಬಾ ಏಕಸ್ವಾಮ್ಯ ಸಾಧಿಸಿದೆ.

ಇದನ್ನೂ ಓದಿ :ಉತ್ಪನ್ನ – ಸೇವೆಗಳಿಗೆ ನಕಲಿ ವಿಮರ್ಶೆ :16ಸಾವಿರ ಗ್ರೂಪ್‌ ಡಿಲೀಟ್ ಮಾಡಿದ‌ Facebook inc

ಇದು ಚೀನಾದ ಮಾರುಕಟ್ಟೆ ನಿಯಮಗಳಿಗೆ ವಿರುದ್ಧ ಎನ್ನುವುದು ಸರ್ಕಾರದ ವಾದ. ವಸ್ತುಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸರ್ಕಾರವನ್ನು ಮೀರಿ ಅಲ್ಲಿನ ತಂತ್ರಜ್ಞಾನಾಧಾರಿತ ಕಂಪನಿಗಳು ಬೆಳೆಯುತ್ತಿವೆ. ಅವುಗಳ ಜನಪ್ರಿಯತೆಯಿಂದ ಕಂಗಾಲಾಗಿರುವ ಸರ್ಕಾರ, ಇಂತಹ ಕಂಪನಿಗಳನ್ನು ಮಟ್ಟಹಾಕಲು ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಚೀನಾ ಸರ್ಕಾರದ ಹಲವು ನಡೆಗಳನ್ನು ಕಳೆದವರ್ಷ ಅಕ್ಟೋಬರ್‌ನಲ್ಲಿ ಅಲಿಬಾಬಾ ಸಹಸಂಸ್ಥಾಪಕ ಜ್ಯಾಕ್‌ ಮಾ ವಿರೋಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next