Advertisement

ಬೆಳಕಿಗಾಗಿ ಮತ್ತೂಬ್ಬ ಚಂದ್ರ

06:00 AM Oct 20, 2018 | |

ಬೀಜಿಂಗ್‌: ಪ್ರತಿ ಗಂಟೆಗೆ 1 ಸಾವಿರ ಕಿಮೀ ವೇಗದಲ್ಲಿ ಓಡುವ ರೈಲನ್ನು 2025ರ ಒಳಗಾಗಿ ಅಭಿವೃದ್ಧಿ ಪಡಿಸಲು ಚೀನಾ ಮುಂದಾಗಿದೆ. ಅದಕ್ಕಿಂತ ಐದು ವರ್ಷ ಮೊದಲೇ ಅಂದರೆ 2020ರ ವೇಳೆ ಭಾರತದ ನೆರೆಯ ರಾಷ್ಟ್ರ ಚಂದ್ರನಂಥ ಉಪಗ್ರಹವನ್ನು ನಭಕ್ಕೆ ಕಳುಹಿಸಲು ನಿರ್ಧರಿಸಿದೆ. ಅದರ ಉದ್ದೇಶವಿಷ್ಟೆ. ಇಂಧನಕ್ಕಾಗಿ. ಅದು ವಿಶ್ವದ ಅತ್ಯಂತ ದೊಡ್ಡ ಉಪಗ್ರಹ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆಯಂತೆ. 

Advertisement

ಚೀನಾದ ನೈಋತ್ಯ ಭಾಗದಲ್ಲಿರುವ ಚೆಂಗು ನಗರ ಚಂದ್ರನಂಥ ಉಪಗ್ರಹ ಉಡಾಯಿ ಸುವ ಬಗ್ಗೆ ಯೋಜನೆ ಹಾಕುತ್ತಿದೆ. ಭೂಮಿಯಿಂದ 500 ಕಿಮೀ ಎತ್ತರದಲ್ಲಿರುವ ಕಕ್ಷೆ ಯನ್ನು ಅದು ಸುತ್ತಲಿದೆ. ಈ ಯೋಜನೆ ಜಾರಿ ಮಾಡಿದ ಬಳಿಕ ವಿದ್ಯುತ್‌ಗಾಗಿ ಬಳಕೆಯಾಗುತ್ತಿರುವ ವಾರ್ಷಿಕ 20 ಕೋಟಿ ರೂ. (200 ಮಿಲಿಯನ್‌ ಡಾಲರ್‌) ಉಳಿ ತಾಯ ವಾಗಲಿದೆ ಎನ್ನುವುದು ತಜ್ಞರ ವಾದ.

ಚಂದ್ರನಂತೆಯೇ ಕಾಣುವ ಈ ಉಪಗ್ರಹ 10-80 ಕಿಮೀ ವ್ಯಾಪ್ತಿಯ ಭೂ ಪ್ರದೇಶಕ್ಕೆ ಬೆಳಕು ನೀಡಲಿದೆ. ಉಪಗ್ರಹದಿಂದ ಹೊರ ಸೂಸುವ ಬೆಳಕಿನಿಂದಾಗಿ ಚೀನಾದಲ್ಲಿ ಬೀದಿ ದೀಪಗಳ ಬಳಕೆಯೇ ಇಲ್ಲದಂತೆ ಆಗಲಿದೆ. ಒಂದು ವೇಳೆ 50 ಚದರ ಕಿಮೀ ವ್ಯಾಪ್ತಿಯ ಪ್ರದೇಶಕ್ಕೆ ಬೆಳಕು ನೀಡುತ್ತದೆ ಎಂದಾದರೆ 53.3 ಕೋಟಿ ರೂ. (1.2 ಬಿಲಿಯನ್‌ ಯಾನ್‌) ಪ್ರತಿ ವರ್ಷ ವಿದ್ಯುತ್‌ ವೆಚ್ಚ ಉಳಿತಾಯವಾಗುತ್ತದೆ. 

ಚೆಂಗುx ಏರೋಸ್ಪೇಸ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಮೈಕ್ರೋ ಇಲೆಕ್ಟ್ರಾನಿಕ್ಸ್‌ ಸಿಸ್ಟಮ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ ಕಾರ್ಪೊರೇಷನ್‌ ಸಂಸ್ಥೆಯ  ಅಧ್ಯಕ್ಷ ವ್ಯೂ ಚುನ್‌ಫೆಂಗ್‌ ಅ.10 ರಂದು ಈ ಘೋಷಣೆ ಮಾಡಿದ್ದರು. ಇದೇ ಮಾದರಿಯ ಯೋಜನೆಯನ್ನು 1999ರಲ್ಲಿ ರಷ್ಯಾ ಜಾರಿಗೊಳಿಸಲು ಮುಂದಾಗಿತ್ತು. ಆದರೆ ಅದು ಯಶಸ್ವಿಯಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next