Advertisement

ಅರುಣಾಚಲ ಪ್ರದೇಶಕ್ಕೆ ಅಮಿತ್ ಶಾ ಭೇಟಿ ನೀಡಬಾರದು..: ಚೀನಾ ಮೊಂಡುವಾದ

04:56 PM Apr 10, 2023 | Team Udayavani |

ನವದೆಹಲಿ: ಅರುಣಾಚಲ ಪ್ರದೇಶಕ್ಕೆ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯನ್ನು ಚೀನಾ ಸ್ಪಷ್ಟವಾಗಿ ವಿರೋಧಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಅವರ ಚಟುವಟಿಕೆಗಳು ಬೀಜಿಂಗ್‌ ನ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಕಳೆದ ವಾರ, ಅರುಣಾಚಲ ಪ್ರದೇಶದ ಕೆಲವು ಸ್ಥಳಗಳನ್ನು ಚೀನಾ ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ‘ಮರುನಾಮಕರಣ’ ಮಾಡಿದೆ.

ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಕ್ತಾರ ವಾಂಗ್ ವೆನ್‌ಬಿನ್, “ಝಂಗ್ನಾನ್ ಚೀನಾದ ಪ್ರದೇಶವಾಗಿದೆ” ಎಂದು ಹೇಳಿದರು.

ಜಂಗ್ನಾನ್‌ ಗೆ ಭಾರತೀಯ ಅಧಿಕಾರಿಯ ಭೇಟಿಯು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ. ಗಡಿ ಪರಿಸ್ಥಿತಿಯ ಶಾಂತಿ ಮತ್ತು ನೆಮ್ಮದಿಗೆ ಅನುಕೂಲಕರವಾಗಿಲ್ಲ ಎಂದಿದೆ.

ಇದನ್ನೂ ಓದಿ:ಶಿವಾಜಿ ಸುರತ್ಕಲ್‌ 2 ರೆಗ್ಯುಲರ್‌ ಸ್ಕ್ರಿಪ್ಟ್  ಅಲ್ಲ… ನಿರ್ದೇಶಕ ಆಕಾಶ್‌ ಶ್ರೀವತ್ಸ ಮಾತು

Advertisement

ಶಾ ಅವರು ಏಪ್ರಿಲ್ 10 ಮತ್ತು 11 ರಂದು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ಭಾರತ-ಚೀನಾ ಗಡಿಯಲ್ಲಿರುವ ಕಿಬಿಥೂ ಎಂಬ ಹಳ್ಳಿಯಲ್ಲಿ ‘ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ’ ಅನ್ನು ಪ್ರಾರಂಭಿಸಲಿದ್ದಾರೆ.

ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಯಾವಾಗಲೂ ಸಮರ್ಥಿಸಿಕೊಂಡಿದೆ. ಪ್ರದೇಶಗಳನ್ನು ಮರುನಾಮಕರಣ ಮಾಡುವ ಮೂಲಕ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಚೀನಾದ ಪ್ರಯತ್ನಗಳನ್ನು ಯುನೈಟೆಡ್ ಸ್ಟೇಟ್ಸ್ ಬಲವಾಗಿ ವಿರೋಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next