Advertisement

ಗಡಿ ಸಿಬಂದಿಯ ಸಭೆಗೆ ಆಹ್ವಾನ ನೀಡದ ಚೀನ

06:15 AM Oct 02, 2017 | |

ಬೀಜಿಂಗ್‌/ಹೊಸದಿಲ್ಲಿ: ಗಡಿಯಲ್ಲಿ ಪದೇ ಪದೆ ಕ್ಯಾತೆ ತೆಗೆಯುವ ಚೀನವು ಇದೀಗ ಮತ್ತೂಮ್ಮೆ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಆರಂಭಿಸಿದೆ. ಪ್ರತಿ ವರ್ಷ ನಡೆಯುವ ಗಡಿ ಭದ್ರತಾ ಸಿಬಂದಿ ಸಭೆ(ಬಿಪಿಎಂ)ಗೆ ಈ ವರ್ಷ ಚೀನವು ಭಾರತಕ್ಕೆ ಆಹ್ವಾನವನ್ನೇ ನೀಡಿಲ್ಲ. ಹೀಗಾಗಿ, ಸಭೆಯು ರದ್ದಾಗಿದೆ.

Advertisement

ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 5 ಸ್ಥಳಗಳಲ್ಲಿ ಈ ಸಭೆ ನಡೆಸಲಾಗುತ್ತದೆ. ಈ ಹಿಂದೆ ನಡೆದ ಸಭೆಗಳಲ್ಲಿ ಎರಡೂ ದೇಶಗಳ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿ ಕೊಳ್ಳುತ್ತಾರೆ. ಡೋಕ್ಲಾಂ ವಿವಾದ ಇತ್ಯರ್ಥವಾದ ಬಳಿಕ ಸದ್ಯದಲ್ಲೇ ಈ ವಾರ್ಷಿಕ ಸಭೆ ನಡೆಯಬೇಕಿತ್ತು. ಆದರೆ, ಚೀನವು ಭಾರತಕ್ಕೆ ಆಹ್ವಾನ ನೀಡದೇ ಉದ್ಧಟತನ ತೋರಿದೆ.

ಅರುಣಾಚಲ ಗಡಿಯಲ್ಲೇ ಹಾದುಹೋದ ಎಕ್ಸ್‌ಪ್ರೆಸ್‌ವೇ: ಟಿಬೆಟ್‌ ರಾಜಧಾನಿ ಲಾಸಾ ಹಾಗೂ ಚೀನ ನಡುವಿನ ಸಂಪರ್ಕ ಸೇತುವಾಗ ಲಿರುವ 409 ಕಿ.ಮೀ. ಹೆದ್ದಾರಿಗೆ ಚೀನ ಭಾನು ವಾರ ಚಾಲನೆ ನೀಡಿ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಿದೆ. ರಾಜತಾಂತ್ರಿಕವಾಗಿಯೂ ಮಹತ್ವ ಕಂಡುಕೊಂಡಿರುವ 37,800 ಕೋಟಿ ರೂ. ವೆಚ್ಚದ ಈ ಹೆದ್ದಾರಿಯನ್ನು ಚೀನ ನಿರ್ಮಿಸಿದ್ದು, ಅರುಣಾಚಲ ಪ್ರದೇಶದ ಗಡಿ ಯಲ್ಲೇ ಹಾದುಹೋಗಿದೆ.

ಟಿಬೆಟ್‌ ಹಾಗೂ ಚೀನದ ಪ್ರಮುಖ ಎರಡು ನಗರಗಳ ಸಂಪರ್ಕ ಸಾಧಿಸುವ ಈ ಹೆದ್ದಾರಿ ವಿಶೇಷವಾಗಿ ಪ್ರವಾಸಿಗರಿಗೆ ಅನುಕೂಲ ಕರ ವಾಗಲಿದೆ. ಅಷ್ಟೇ ಅಲ್ಲ, ಲಾಸಾದಿಂದ ನಯಿಂಗಿ ನಡುವಿನ ದೂರವನ್ನು ಪ್ರತಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಿದರೆ, 5 ಗಂಟೆ ಯಲ್ಲಿ ತಲುಪಬಹು ದಾಗಿದೆ. ಚೀನ ಈ ಹೆದ್ದಾರಿ ನಿರ್ಮಾಣ ಮಾಡಿರುವುದರ ಹಿಂದೆ ಇನ್ನೊಂದು ಕಾರಣವಿದ್ದು, ಇಲ್ಲಿನ ಸೇನಾಪಡೆಗೆ ಇನ್ಮುಂದೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಇನ್ನಷ್ಟು ಸಲೀಸಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next