ರವಿವಾರ ನಡೆದ ಪುರುಷರ ಸಿಂಗಲ್ಸ್ ಪ್ರಶಸ್ತಿ ಕಾಳಗದಲ್ಲಿ ಕೆಂಟೊ ಮೊಮೊಟ ಥೈವಾನ್‌ನ ವರ್ಲ್ಡ್ ನಂ.2 ಆಟಗಾರ ಚೌ ಟೀನ್ ಚೆನ್ ವಿರುದ್ಧ ಭಾರೀ ಹೋರಾಟ ನಡೆಸಿ 21-15, 17-21, 21-18 ಅಂತರದಿಂದ ಗೆದ್ದು ಬಂದರು. ಕಳೆದ ವರ್ಷದ ಫೈನಲ್‌ನಲ್ಲೂ ಇವರಿಬ್ಬರೇ ಸೆಣಸಿದ್ದರು.
Advertisement
ಇದು ಕೆಂಟೊ ಮೊಮೊಟ ಪಾಲಾದ ಈ ವರ್ಷದ 10ನೇ ಬ್ಯಾಡ್ಮಿಂಟನ್ ಪ್ರಶಸ್ತಿ ಎಂಬುದೊಂದು ಹೆಗ್ಗಳಿಕೆ. ಇದರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಕೂಡ ಸೇರಿದೆ.
ವನಿತಾ ಸಿಂಗಲ್ಸ್ ಫೈನಲ್‌ನಲ್ಲಿ ಚೀನದ ಚೆನ್ ಯುಫಿ ಎದುರು ಜಪಾನಿನ ನಜೊಮಿ ಒಕುಹರಾ ಆಟ ಸಾಗಲಿಲ್ಲ. ಯುಫಿ 21-12, 21-18 ನೇರ ಗೇಮ್‌ಗಳಿಂದ ಗೆದ್ದು ಬಂದರು. ಇದು ಒಕುಹರಾ ಆಡಿದ ಈ ವರ್ಷದ 6ನೇ ಫೈನಲ್ ಆಗಿದ್ದು, ಆರರಲ್ಲೂ ಅವರು ಸೋಲನುಭವಿಸಿದ್ದಾರೆ!
ಈ ಕೂಟದಲ್ಲಿ ಭಾರತದ ಆಟಗಾರರು ನಿರಾಶಾದಾಯಕ ಪ್ರದರ್ಶನ ನೀಡಿ ಬೇಗನೇ ಹೊರಬಿದ್ದಿದ್ದರು.