Advertisement

ವೀಡಿಯೋ ವಾರ್‌ ; ‘Once Upon A Virus‌’ವೀಡಿಯೊ ಮೂಲಕ ದೊಡ್ಡಣ್ಣನಿಗೆ ಚೀನ ಗುದ್ದು

02:04 AM May 04, 2020 | Hari Prasad |

ಅಮೆರಿಕ ವಿರುದ್ಧ ಚೀನ ವೀಡಿಯೋ ವಾರ್‌ ಆರಂಭಿಸಿದೆ. ಕೊವಿಡ್ ಬಗ್ಗೆ ಚೀನ ಎಷ್ಟೇ ಎಚ್ಚರಿಕೆ ನೀಡುತ್ತಾ ಬಂದರೂ, ಅಮೆರಿಕ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಹೇಳುವ ಆ್ಯನಿಮೇಟೆಡ್‌ ವೀಡಿಯೊವನ್ನು ಫ್ರಾನ್ಸ್‌ನಲ್ಲಿರುವ ಚೀನ ರಾಯಭಾರಿ ಕಚೇರಿ ಟ್ವೀಟ್‌ ಮಾಡಿದೆ.

Advertisement

;ಒನ್ಸ್‌ ಅಪಾನ್‌ ಎ ವೈರಸ್‌’ ಎನ್ನುವ ವೀಡಿಯೊದಲ್ಲಿ, ಚೀನದ ವ್ಯಕ್ತಿ ಮತ್ತು ಅಮೆರಿಕದ ಸ್ವಾತಂತ್ರ್ಯ ದೇವತೆ ಸಂಭಾಷಿಸುತ್ತಾರೆ. ಜನವರಿಯಲ್ಲಿ ಚೀನವು ವೈರಸ್‌ ಕುರಿತು ಮಾಹಿತಿ ನೀಡಿದಾಗ, ಅಮೆರಿಕ ಅದನ್ನು ಸ್ವೀಕರಿಸಲಿಲ್ಲ.

‘ನಮ್ಮಲ್ಲಿ ಹೊಸ ವೈರಸ್‌ ಹಬ್ಬುತ್ತಿದೆ’ ಎಂದು ಚೀನ ಹೇಳಿದಾಗ, ‘ಅದಕ್ಕೇನೀಗ?’ ಎಂದು ಅಮೆರಿಕ ಕೇಳಿತು. ವೈರಸ್‌ ತುಂಬಾ ಡೇಂಜರ್‌ ಇದೆ’ ಎಂದಾಗ, ಅಮೆರಿಕ “ಅದು ಫ್ಲ್ಯೂ’ ಎಂದು ರಾಗ ಎಳೆಯಿತು.

‘ಮಾಸ್ಕ್ ಹಾಕ್ಕೊಳ್ಳಿ’ ಎಂದಾಗ, ಅಮೆರಿಕ “ನಾವು ಮಾಸ್ಕ್ ಹಾಕಿಕೊಳ್ಳೋದಿಲ್ಲ’ ಅಂತ ದರ್ಪ ತೋರಿತು. ಚೀನವು ‘ಲಾಕ್‌ಡೌನ್‌ ಮಾಡಿದ್ದೇವೆ’ ಎಂದಾಗ, ಅಮೆರಿಕ “ಅನಾಗರಿಕ ನಡೆ. ಚೀನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿತು. ಹೀಗೆ, ಅಮೆರಿಕದ ಉದ್ಧಟತನದ ಮಾತುಗಳನ್ನು ಚೀನ ಈ ವೀಡಿಯೋದ ಉದ್ದಕ್ಕೂ ಕಿಚಾಯಿಸಿದೆ.

ಮುಂದುವರಿದ ‘ಟ್ರಂಪಾರೋಪ’
ಮಾರಣಾಂತಿಕ ಕೋವಿಡ್ ವೈರಸ್‌ ಹುಟ್ಟಿದ್ದು ಚೀನದ ವುಹಾನ್‌ ನಗರದ ವೈರಾಲಜಿ ಲ್ಯಾಬ್‌ನಿಂದ. ಅಲ್ಲಿನ ಪ್ರಯೋಗಾಲಯ ದಿಂದ ಸೋರಿಕೆಯಾದ ವೈರಸ್‌ ವಿಶ್ವಾದ್ಯಂತ ಅನಾಹುತ ಸೃಷ್ಟಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರಿದ್ದಾರೆ.

Advertisement

ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚೀನದ ಬೇಜವಾಬ್ದಾರಿತನದಿಂದ ಜಗತ್ತೇ ಬೆಲೆ ತೆರಬೇಕಾಗಿ ಬಂದಿದೆ ಎಂದರು. ಈ ಬಗ್ಗೆ ಸಾಕ್ಷ್ಯವಿದೆಯೇ ಎಂದು ಪ್ರಶ್ನಿಸಿದಾಗ ‘ಇದೆ. ಆದರೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next