Advertisement

China ಮಾಸ್ಟರ್ : ಲಕ್ಷ್ಯ ಸೇನ್‌, ಶ್ರೀಕಾಂತ್‌ಗೆ ಸೋಲು

12:02 AM Nov 23, 2023 | Team Udayavani |

ಶೆಂಜೆನ್‌ (ಚೀನ): “ಚೀನ ಮಾಸ್ಟರ್ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಲಕ್ಷ್ಯ ಸೇನ್‌ ಮತ್ತು ಕೆ. ಶ್ರೀಕಾಂತ್‌ ಆರಂಭಿಕ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.

Advertisement

ವರ್ಷದ ಈ ಕೊನೆಯ “ಬಿಡಬ್ಲ್ಯುಎಫ್ 750′ ಪಂದ್ಯಾವಳಿಯಲ್ಲಿ ಲಕ್ಷ್ಯ ಸೇನ್‌ ಆತಿಥೇಯ ಚೀನದ 7ನೇ ಶ್ರೇಯಾಂಕಿತ ಆಟಗಾರ ಶಿ ಯುಕಿ ವಿರುದ್ಧ 19-21, 18-21 ಅಂತರದಿಂದ ಪರಾಭವಗೊಂಡರು. ವಿಶ್ವದ 17ನೇ ರ್‍ಯಾಂಕಿಂಗ್‌ ಆಟಗಾರನಾಗಿರುವ ಲಕ್ಷ್ಯ ಸೇನ್‌ ಈ ವರ್ಷ “ಕೆನಡಾ ಓಪನ್‌’ ಪ್ರಶಸ್ತಿ ಜಯಿಸಿದ್ದರು.

ವಿಶ್ವದ 24ನೇ ರ್‍ಯಾಂಕಿಂಗ್‌ ಶಟ್ಲರ್‌ ಆಗಿರುವ ಕೆ. ಶ್ರೀಕಾಂತ್‌ ಅವರನ್ನು ಥಾಯ್ಲೆಂಡ್‌ನ‌ ಕುನ್ಲಾವುತ್‌ ವಿತಿದ್ಸರ್ನ್ 21-15, 14-21, 21-13 ಅಂತರದಿಂದ ಮಣಿಸಿದರು. ಇದರೊಂದಿಗೆ ಶ್ರೀಕಾಂತ್‌ “ವರ್ಲ್ಡ್ ಟೂರ್‌ ಸೀಸನ್‌’ನ 3 ಪಂದ್ಯಾವಳಿಗಳಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದಂತಾಯಿತು. 4 ಸಲ ಕ್ವಾರ್ಟರ್‌ ಫೈನಲ್‌ ತಲುಪಿದ್ದಷ್ಟೇ 2023ರ ಋತುವಿನಲ್ಲಿ ಶ್ರೀಕಾಂತ್‌ ಸಾಧನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next