Advertisement

ಬಡತನ ಮರೆಮಾಚುತ್ತಿದೆ ಚೀನ!

11:16 PM May 07, 2023 | Team Udayavani |

ಬೀಜಿಂಗ್‌: ಮಾಧ್ಯಮಗಳ ಮೇಲೆ ಚೀನ ಸರಕಾರದ ಕಡಿವಾಣದ ಹಿನ್ನೆಲೆಯಲ್ಲಿ ಆ ದೇಶದಲ್ಲಿ ನಾಗರಿಕರು ಅನುಭವಿಸುತ್ತಿರುವ ಬಡತನದ ಬಗ್ಗೆ ಜಗತ್ತಿಗೆ ತಿಳಿದಿಲ್ಲ. ತನ್ನ ನಕಾರಾತ್ಮಕ ಅಂಶಗಳನ್ನು ಚೀನ ಮರೆಮಾಚುತ್ತಾ ಬಂದಿದೆ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

Advertisement

ತನಗೆ ತಿಂಗಳಿಗೆ ಸಿಗುವ 14.50 ಡಾಲರ್‌ ನಿವೃತ್ತಿ ವೇತನದಿಂದ ಚೀನದ ಒಬ್ಬ ಹಿರಿಯ ನಾಗರಿಕ ಮಹಿಳೆಯು ಏನೆಲ್ಲ ದಿನಸಿ ಖರೀದಿಸಬಹುದು ಎಂಬ ವೀಡಿಯೋ ವೊಂದು ಇತ್ತೀಚೆಗೆ ಜಾಲತಾಣದಲ್ಲಿ ಹರಿದಾಡುತ್ತಿತ್ತು. ನಿವೃತ್ತಿ ವೇತನ ಬಿಟ್ಟರೆ ಆಕೆಗೆ ಯಾವುದೇ ಆದಾಯವಿಲ್ಲ. ಆದರೆ ಈ ವೀಡಿಯೋ ಅನ್ನು ಚೀನ ಅಧಿಕಾರಿಗಳು ಅನಂತರ ಡಿಲೀಟ್‌ ಮಾಡಿದ್ದಾರೆ.

ಒಬ್ಬ ವಿದ್ಯಾವಂತ ಯುವ ಗಾಯಕ, ಉದ್ಯೋಗವಿಲ್ಲದೇ ತನ್ನ ಆರ್ಥಿಕ ಪರಿಸ್ಥಿತಿ ಕುರಿತು ಗೀತೆ ರಚನೆ ಮಾಡಿ, ಹಾಡಿದ್ದಾನೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. “ನಾನು ಪ್ರತಿ ದಿನ ಮುಖ ತೊಳೆಯುತ್ತೇನೆ. ಆದರೆ ನನ್ನ ಮುಖಕ್ಕಿಂತ ನನ್ನ ಜೇಬು ಸ್ವತ್ಛವಾಗಿದೆ….” ಹೀಗೆ ತನ್ನ ಪದವಿಯ ಬಗ್ಗೆ ವ್ಯಂಗ್ಯವಾಗಿ ಹಾಡಿದ್ದಾನೆ. ಈ ಹಾಡನ್ನು ಚೀನ ನಿಷೇಧಿಸಿದೆ. ಅಲ್ಲದೇ ಆತನ ಸಾಮಾಜಿಕ ಜಾಲತಾಣ ಖಾತೆಯನ್ನು ಅಮಾನತಿನಲ್ಲಿಡಲಾಗಿದೆ.

ಇನ್ನೊಂದು ಘಟನೆಯಲ್ಲಿ ವಲಸೆ ಕಾರ್ಮಿಕನೊಬ್ಬನ ಕಷ್ಟದ ಜೀವನದ ಬಗ್ಗೆ ಹಾಗೂ ಕೊರೊನಾ ಸೋಂಕಿಗೆ ತುತ್ತಾಗಿ ಆತನ ದಯನೀಯ ಸ್ಥಿತಿ ಬಗ್ಗೆ ಎಲ್ಲೆಡೆ ಸಹಾನುಭೂತಿ ವ್ಯಕ್ತವಾಗಿತ್ತು. ಆದರೆ ಪತ್ರಕರ್ತರು ಈತನ್ನು ಭೇಟಿಯಾಗದಂತೆ ಚೀನ ಅಧಿಕಾರಿಗಳು ಆತನ ಮನೆಯ ಹೊರಗಡೆಯೇ ತಡೆದರು. ಚೀನ ತನ್ನ ಋಣಾತ್ಮಕ ಅಂಶಗಳನ್ನು ಮುಚ್ಚಿಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದಕ್ಕೆ ಈ ಎಲ್ಲ ಘಟನೆಗಳು ಸಾಕ್ಷಿಯಾಗಿವೆ. 2021ರಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, “ದೇಶ ಬಡತನ ಮುಕ್ತವಾಗಿದೆ’ ಎಂದು ಘೋಷಿಸಿದ್ದರು!

Advertisement

Udayavani is now on Telegram. Click here to join our channel and stay updated with the latest news.

Next