ವಾಷಿಂಗ್ಟನ್: ಏಷ್ಯಾ ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯತೆಯನ್ನು ಮೆರೆಯುವ ಉದ್ದೇಶದಿಂದ ಚೀನಾ ದೇಶ ಸಂಪೂರ್ಣ ರೋಬೋಮಯವಾದ ಸೈನ್ಯವೊಂದನ್ನು ಕಟ್ಟುವಲ್ಲಿ ನಿರತವಾಗಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆಯ ಅಧಿಕಾರಿ ಡ್ಯಾನ್ ಟೇಲರ್ ತಿಳಿಸಿದ್ದಾರೆ. ರಕ್ಷಣಾ ಗುಪ್ತಚರ ಇಲಾಖೆಯ ತಜ್ಞರೂ ಆಗಿರುವ ಅವರು, “ಚೀನಾಕ್ಕೆ ಜಗತ್ತಿನ ಅತಿ ದೊಡ್ಡ ಶಕ್ತಿಶಾಲಿ ರಾಷ್ಟ್ರವೆಂಬ ಹೆಗ್ಗಳಿಕೆ ತರುವ ಉತ್ಸಾಹದಲ್ಲಿ ಅಲ್ಲಿನ ಸರಕಾರ ಕಾರ್ಯತತ್ಪರವಾಗಿದೆ. ಈ ನಿಟ್ಟಿನಲ್ಲಿ ಸರಕಾರ ತಯಾರಿಸುತ್ತಿರುವ ರೋಬೋಗಳ ಸೈನ್ಯವು, ನೆಲದ ಮೇಲಷ್ಟೇ ಅಲ್ಲದೆ ವಾಯು ಹಾಗೂ ನೀರಿನಲ್ಲೂ ಯುದ್ಧ ಮಾಡುವ ಛಾತಿಯನ್ನು ಹೊಂದಿರಲಿದೆ’ ಎಂದಿದ್ದಾರೆ. “ಈಗಾಗಲೇ ವಾಯು ಕ್ಷಿಪಣಿ ಹಾಗೂ ಜಲಾಂತರ್ಗಾಮಿ ತಂತ್ರಜ್ಞಾನಗಳಲ್ಲಿ ಮಂಚೂಣಿ ಯಲ್ಲಿರುವ ಚೀನಾ, ತ್ವರಿತವಾಗಿ ರೋಬೋ ಸೈನ್ಯವನ್ನು ಸೃಷ್ಟಿ ಸುತ್ತಿದ್ದು, ಇದರಿಂದ ಜಗತ್ತಿನ ಮಹಾ ಬಲಶಾಲಿ ರಾಷ್ಟ್ರವಾಗಲಿದೆ’ ಎಂದು ಹೇಳಿರುವ ಡ್ಯಾನ್, ಕಳೆದೊಂದು ದಶಕದಿಂದ ತನ್ನ ಚಿಂತನೆಗಳನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲು ಚೀನಾ ಸರಕಾರ, “ಪೀಪಲ್ಸ್ ಲಿಬರೇಷನ್ ಆರ್ಮಿ’ಯನ್ನು (ಪಿಎಲ್‌ಎ) ಬಳಸಿಕೊಳ್ಳುತ್ತಿದೆ.