Advertisement
ಹೊಸದಿಲ್ಲಿ, ಡಿ. 7: ಚೀನದಲ್ಲಿ ಕೆಲವು ದಿನಗಳ ಹಿಂದೆ ಸದ್ದು ಮಾಡಿದ್ದ ನ್ಯುಮೋ ನಿಯಾ ಮಾದರಿಯ ಸೋಂಕು ದೇಶವನ್ನು ಪ್ರವೇಶಿಸಿದೆಯೇ? ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐ ಎಂಎಸ್)ಗೆ ಬಂದಿದ್ದ ಏಳು ಮಾದರಿಗಳು ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾ ಹೊಂದಿರುವುದು ಕಂಡುಬಂದಿರುವುದರಿಂದ ಈ ಆತಂಕ ಮೂಡಿದೆ.ಪ್ರಸಕ್ತ ವರ್ಷದ ಎಪ್ರಿಲ್ ಮತ್ತು ಸೆಪ್ಟಂಬರ್ ನಲ್ಲಿ ಹೊಸದಿಲ್ಲಿಯ ಏಮ್ಸ್‌ನಲ್ಲಿ ಈ ಪರೀಕ್ಷಾ ವರದಿಗಳು ಪಾಸಿಟಿವ್ ಆಗಿದ್ದವು. ಹೊಸದಿಲ್ಲಿ ಏಮ್ಸ್‌ನಲ್ಲಿ ಒಟ್ಟು ಆರು ತಿಂಗಳುಗಳ ಅವಧಿ ಯಲ್ಲಿ 1.49 ಲಕ್ಷ ಮಂದಿಯ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಪೈಕಿ ಏಳು ಪಾಸಿಟಿವ್ ಆಗಿವೆ. 6 ಪ್ರಕರಣಗಳಲ್ಲಿ ಐಜಿಎಂ ಎಲಿಸಾ ಟೆಸ್ಟ್ ಮೂಲಕ ವೈರಾಣು ಪತ್ತೆಹಚ್ಚಲಾಗಿದ್ದರೆ, ಮತ್ತೂಂದು ಪ್ರಕರಣವನ್ನು ಪಿಸಿಆರ್ ವಿಧಾನದ ಮೂಲಕ ದೃಢಪಡಿಸ ಲಾಗಿದೆ ಎಂದು “ದ ಲ್ಯಾನ್ಸೆಟ್’ನ ಸಂಶೋಧನ ಲೇಖನದಲ್ಲಿ ಉಲ್ಲೇಖೀಸಲಾಗಿದೆ.
ಆದರೆ, ಈ 7 ಪ್ರಕರಣಗಳಿಗೂ ಚೀನದ ನ್ಯುಮೋನಿಯಾ ಮಾದರಿಯ ಪ್ರಕರಣ ಗಳಿಗೂ ಸಂಬಂಧವೇ ಇಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ. ಆರು ತಿಂಗಳ ಸು ದೀರ್ಘ ಅವ ಧಿ ಯಲ್ಲಿ ಕಂಡುಬಂದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಆಗಿದೆ. ಹೀಗಾಗಿ ದೇಶವಾಸಿಗಳು ಭೀತಿಗೆ ಒಳಗಾಗಬೇಕಾಗುವ ಅಗತ್ಯ ಇಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.