Advertisement
2020ರ ಜೂನ್‌ನಲ್ಲಿ ಗಾಲ್ವಾನ್‌ನಲ್ಲಿ ಚೀನ ಸೇನೆ ಎಲ್‌ಎಸಿಯನ್ನು ದಾಟಿ ಭಾರತದ ಭೂಭಾಗದೊಳಗೆ ಅತಿಕ್ರಮಣ ಮಾಡಿ ಸೇನಾ ಶಿಬಿರಗಳನ್ನು ಸ್ಥಾಪಿಸುವ ಮೂಲಕ ಭಾರತದ ಭದ್ರತೆಗೆ ಅಪಾಯ ತಂದೊಡ್ಡಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕಾರ್ಯಾಚರಣೆ ನಡೆಸಿ ಚೀನಿ ಯೋಧರನ್ನು ಹಿಮ್ಮೆಟ್ಟಿಸಿದ್ದರು. ಇದಾದ ಬಳಿಕ ಎಲ್‌ಎಸಿಯುದ್ದಕ್ಕೂ ಚೀನ ತನ್ನ ಸೇನಾ ಪಡೆಗಳನ್ನು ನಿಯೋಜಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೂಡ ತನ್ನ ಭೂಭಾಗದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಪಡೆಗಳನ್ನು ನಿಯೋಜಿಸಿದ್ದೇ ಅಲ್ಲದೆ ಗಸ್ತನ್ನು ಹೆಚ್ಚಿಸಿತ್ತು.
Related Articles
Advertisement
ಎಲ್‌ಎಸಿ ವಿಚಾರದಲ್ಲಿ ಸುಖಾಸುಮ್ಮನೆ ತಗಾದೆ ತೆಗೆಯುತ್ತಲೇ ಬಂದಿದ್ದ ಚೀನದ ಪಾಲಿಗೆ ಈ ಬೆಳವಣಿಗೆ ಒಂದಿಷ್ಟು ಹಿನ್ನಡೆಯೇ ಸರಿ. ಅಷ್ಟು ಮಾತ್ರವಲ್ಲದೆ ಚೀನದ ವಿಸ್ತರಣಾವಾದಕ್ಕೆ ಬಲುದೊಡ್ಡ ಹೊಡೆತ ಬಿದ್ದಂತಾಗಿದೆ.ಎಲ್‌ಎಸಿಯಲ್ಲಿ ತನ್ನ ಭೂಪ್ರದೇಶವನ್ನು ದಾಟಿ ಎಲ್‌ಎಸಿಯಲ್ಲಿನ ಮಾನವ ರಹಿತ ಪ್ರದೇಶವನ್ನು ಕಬಳಿಸುವ ಸಂಚು ರೂಪಿಸಿ ತನ್ನ ಸೇನೆಯನ್ನು ಗಡಿಯತ್ತ ರವಾನಿಸಿದ್ದ ಚೀನಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ಹಿಂದೆ ಸರಿಯುವಂತೆ ಮಾಡಿತ್ತು. ಅಲ್ಲದೆ ಗಡಿಯಿಂದ ಸೇನಾ ವಾಪಸಾತಿ ವಿಚಾರದಲ್ಲಿಯೂ ಬಿಗು ನಿಲುವು ತಾಳುವ ಮೂಲಕ ಪರೋಕ್ಷವಾಗಿ ಭಾರತೀಯ ಸೇನೆಯ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸುತ್ತಲೇ ಬಂದಿತ್ತು. ಆದರೆ ಭಾರತ ಕಠಿನ ನಿಲುವು ತಾಳುವ ಚೀನ ಮೂಲಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿತ್ತು.