Advertisement

ಎಸ್‌ಸಿಓ ಸೇನಾ ಕವಾಯತು: ಭಾರತ-ಪಾಕ್‌ ಸಹಭಾಗಿತ್ವಕ್ಕೆ ಚೀನ ಸ್ವಾಗತ

03:34 PM Aug 27, 2018 | Team Udayavani |

ಬೀಜಿಂಗ್‌ : ಉಗ್ರ ನಿಗ್ರಹಕ್ಕಾಗಿ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಓ) ಅಡಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ಥಾನದ ಸೇನೆಗಳು ಬೃಹತ್‌ ಕವಾಯತಿನಲ್ಲಿ  ಭಾಗವಹಿಸುತ್ತಿರುವುದನ್ನು ಚೀನ ಸ್ವಾಗತಿಸಿದೆ. 

Advertisement

ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂವಾದ ಮತ್ತು ಸಹಕಾರ ವೃದ್ಧಿ, ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಎಸ್‌ಸಿಓ ಸೇನಾ ಕವಾಯತು ಪೂರಕವಾಗುವುದೆಂಬ ವಿಶ್ವಾಸವನ್ನು ಚೀನ ವ್ಯಕ್ತಪಡಿಸಿದೆ.

ಎಸ್‌ಸಿಓ ಸೇನಾ ಕವಾಯತು ಕಾರ್ಯಕ್ರಮವು ರಶ್ಯದ ಚೆಬಾರ್‌ಕುಲ್‌ ಪಟ್ಟಣದಲ್ಲಿ ಆ.22ರಿಂದ ಆರಂಭಗೊಂಡು ಆ.29ರ ವರೆಗೆ ನಡೆಯಲಿದ್ದು ಇದರಿಂದ ಸದಸ್ಯ ರಾಷ್ಟ್ರಗಳ ನಡುವಿನ ಪರಸ್ಪರ ಸಹಕಾರದಿಂದ  ಉಗ್ರ ನಿಗ್ರಹ ಕಾರ್ಯಾಚರಣೆಗೆ ಹೆಚ್ಚಿನ ಬಲ ದೊರಕಲಿದೆ ಎಂದು ಚೀನ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next