ಟಿಬೆಟ್‌ನಲ್ಲಿನ ಲಾಮಾ ಅರಮನೆ ಎಂದೇ ಖ್ಯಾತಿಪಡೆದ, ಪೊಟಾಲಾ ಪ್ಯಾಲೇಸ್ ಮೇಲ್ಭಾಗದಲ್ಲಿ ಸೋಮವಾರ, ಮಂಗಳವಾರ ಚೀನಾ ಸೇನೆಯ ಯುದ್ಧವಿಮಾನಗಳು ಹಾರಾಡಿದ್ದು, ಮಿಲಿಟರಿ ತಾಲೀಮು ನಡೆಸಿವೆ. ಈ ವೈಮಾನಿಕ ತಾಲೀಮಿನ ಚಿತ್ರಗಳು ಈಗ ಬಹಿರಂಗವಾಗಿವೆ.
Advertisement
ಅಮೆರಿಕಕ್ಕೆ ಗುಟುರು?: ಟಿಬೆಟನ್ನರ ಹಕ್ಕು ಎತ್ತಿಹಿಡಿಯುವ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗಷ್ಟೇ “ಟೆಬೆಟನ್ ನೀತಿ ಮತ್ತು ಬೆಂಬಲ ಕಾಯ್ದೆ-2020′ ಜಾರಿಮಾಡಿದ್ದರು. ಉತ್ತರಾಧಿಕಾರಿ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ನಡೆಸುವಂತಿಲ್ಲ, ಲ್ಹಾಸಾದಲ್ಲಿ ಅಮೆರಿಕ ರಾಯಭಾರಿ ಕಚೇರಿ ತೆರೆಯಲಿದೆ ಎನ್ನುವುದನ್ನು ಕಾಯ್ದೆ ಪ್ರತಿಪಾದಿಸಿತ್ತು. ಇದಕ್ಕೆ ವಿರೋಧ ಸೂಚಿಸಿ ಚೀನಾ ವೈಮಾನಿಕ ತಾಲೀಮು ನಡೆಸಿದೆ ಎನ್ನಲಾಗುತ್ತಿದೆ.
Related Articles
ಲಡಾಖ್‌ನ ಎಲ್‌ಎಸಿಯಲ್ಲಿನ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾ ವರ್ಷವಿಡೀ ಯತ್ನಿಸಿತ್ತು! 2020ರ ಗಡಿಬಿಕ್ಕಟ್ಟಿನ ಹಿನ್ನೋಟದ ಚಿತ್ರಣವನ್ನು ರಕ್ಷಣಾ ಸಚಿವಾಲಯ ಹೀಗೆ ವಿಶ್ಲೇಷಿಸಿದೆ. “ಗಾಲ್ವಾನ್‌ನಲ್ಲಿ ಅವರು ಸಾಂಪ್ರದಾಯಿಕವಲ್ಲದ ಆಯುಧಗಳಿಂದ ಬಿಕ್ಕಟ್ಟನ್ನು ಹೆಚ್ಚಿಸಿದ್ದರು. ಪಿಎಲ್‌ಎ ಸೈನಿಕರು ಕಲ್ಲುಗಳು, ಕಬ್ಬಿಣದ ಸರಳುಗಳು, ಮೊಳೆಯ ದೊಣ್ಣೆಗಳಿಂದ ಭಾರತೀಯ ಯೋಧರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದರು. ನಮ್ಮ ಯೋಧರು ಇದಕ್ಕೆ ತಕ್ಕ ಉತ್ತರವನ್ನೇ ನೀಡಿದ್ದರು’ ಎಂದು ತಿಳಿಸಿದೆ. ಎಲ್‌ಎಸಿ ಉದ್ದಕ್ಕೂ ಭೂಸೇನೆ, ವಾಯುಸೇನೆಯ ಬಲವರ್ಧನೆ, ಪ್ಯಾಂಗಾಂಗ್ ದಕ್ಷಿಣ ದಂಡೆ ಮೇಲೆ ಭಾರತೀಯ ಪಡೆಗಳು ಹಕ್ಕು ಸ್ಥಾಪಿಸಿದ ರೀತಿ, ಕಾರ್ಪ್ ಕಮಾಂಡರ್‌ಗಳ 8 ಸುತ್ತಿನ ಮಾತುಕತೆಯ ವಿವರಗಳನ್ನೂ ಇಲಾಖೆ ವಿಶ್ಲೇಷಿಸಿದೆ.
Advertisement