Advertisement

ಪ್ರಧಾನಿ ಮೋದಿ ಅರುಣಾಚಲ ಪ್ರದೇಶ ಭೇಟಿ : ಚೀನದ ಪ್ರಬಲ ಆಕ್ಷೇಪ

10:27 AM Feb 09, 2019 | Team Udayavani |

ಬೀಜಿಂಗ್‌ : ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನ ಪ್ರಬಲವಾಗಿ ಆಕ್ಷೇಪಿಸಿದೆ. 

Advertisement

‘ನಾವಿನ್ನೂ ಸೂಕ್ಷ್ಮ ಸಂವೇದನೆಯ ಗಡಿ ರಾಜ್ಯ ಅರುಣಾಚಲಕ್ಕೆ ಮಾನ್ಯತೆ ನೀಡಿಲ್ಲ; ಆದುದರಿಂದ ಭಾರತೀಯ ನಾಯಕರು ಅಲ್ಲಿಗೆ ಹೋಗಕೂಡದು; ಹೋದಲ್ಲಿ ಉಭಯ ದೇಶಗಳ ನಡುವಿನ ಗಡಿ ವಿವಾದವು ಇನ್ನಷ್ಟು ಸಂಕೀರ್ಣ ರೂಪ ಪಡೆಯುವುದು’ ಎಂದು ಚೀನ ಎಚ್ಚರಿಸಿದೆ. 

ಪ್ರಧಾನಿ ಮೋದಿ ಅವರು ಇಂದು ಶನಿವಾರ ಅರುಣಾಚಲ ಪ್ರದೇಶದಲ್ಲಿ 4,500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ನನ್ನ ಸರಕಾರ ಈ ಈಶಾನ್ಯ ಗಡಿ ರಾಜ್ಯದೊಂದಿಗೆ ಸಂಪರ್ಕವನ್ನು ಸುಧಾರಿಸುವುದಕ್ಕೆ ಅತ್ಯಧಿಕ ಮಹತ್ವ ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next