Advertisement
ಹೌದು, “ಎಲ್ಲೆಲ್ಲೂ ಗೂಢಚಾರಿಕೆ ನಡೆಯುತ್ತಿದೆ, ಎಚ್ಚರದಿಂದಿರಿ. ಬೇಹುಗಾರರನ್ನು ಹಿಡಿಯಲು ನಮಗೆ ನೆರವಾಗಿ’ ಎಂದು ದೇಶವಾಸಿಗಳಿಗೆ ಚೀನಾ ಸರ್ಕಾರ ಕರೆ ನೀಡಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ತೂರಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ನುಸುಳಿಕೊಂಡು, ವಿದ್ಯಾರ್ಥಿಗಳನ್ನು ಸುತ್ತುವರಿದುಕೊಂಡು ನಮ್ಮ ದೇಶವನ್ನು ದುರ್ಬಲಗೊಳಿಸಲು ಗೂಢಚಾರರು ಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಸಫಲವಾಗದಂತೆ ನೋಡಿಕೊಳ್ಳಿ ಎಂದು ಚೀನಾ ಸೂಚಿಸಿದೆ.
ಪಶುವೈದ್ಯಕೀಯಕ್ಕೆ ಸಂಬಂಧಿಸಿದ ಔಷಧ ಕ್ಷೇತ್ರ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಸರ್ಕಾರದ ರಹಸ್ಯಗಳು ಹೊರಜಗತ್ತಿಗೆ ತಿಳಿಯದಂತೆ ನೋಡಿಕೊಳ್ಳಿ. ಚೀನಾದ ಬೇಹುಗಾರಿಕೆ ನಿಗ್ರಹ ಕಾನೂನನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಬಳಸುವುದು ಹೇಗೆ ಎಂಬ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿ, ಹೈಸ್ಪೀಡ್ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಫೋಟೋ, ವಿಡಿಯೋಗಳನ್ನು ಸೆರೆಹಿಡಿಯುವಾಗ ಎಚ್ಚರಿಕೆ ವಹಿಸಿ. ಯಾವುದೇ ಸೂಕ್ಷ್ಮ ಮಾಹಿತಿಗಳು ನಿಮ್ಮ ಕ್ಯಾಮೆರಾಗಳಲ್ಲಿ ಸೆರೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಲಾಗುತ್ತಿದೆ. ದೇಶದ ರಾಷ್ಟ್ರೀಯ ಭದ್ರತಾ ಕಾನೂನನ್ನು ಉಲ್ಲಂ ಸುವುದು ಕಂಡುಬಂದರೆ ಕೂಡಲೇ ಮಾಹಿತಿ ನೀಡಿ. ನೋಡಿಯೂ ಮಾಹಿತಿ ನೀಡದಿದ್ದರೆ ನಿಮಗೆ ಜೈಲು ಖಚಿತ ಎಂಬ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಸರ್ಕಾರದ ಗೌಪ್ಯ ಸಂರಕ್ಷಣೆಗೆ ಸಂಬಂಧಿಸಿದ ಪ್ರಾಧಿಕಾರವು ರಹಸ್ಯಗಳನ್ನು ಕಾಪಿಡುವುದು ಹೇಗೆ ಎಂಬ ಬಗ್ಗೆ ಆನ್‌ಲೈನ್ ಕೋರ್ಸ್ ಅನ್ನೂ ಆರಂಭಿಸಿದೆ. ಚೀನಾದ ಹಲವು ವಿವಿಗಳು ಮತ್ತು ಕಂಪನಿಗಳು ಈ ಕೋರ್ಸ್ ಮಾಡುವಂತೆ ತಮ್ಮ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಆದೇಶಿಸಿವೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ತಂಡವನ್ನು ರೂಪಿಸಿ, ಅವರಿಗೆ ಸಾಗರೋತ್ತರ ವೆಬ್‌ಸೈಟ್‌ಗಳನ್ನು ಬಳಸುವವರ ಮೇಲೆ ಕಣ್ಣಿಡುವ ಮತ್ತು ಅವರ ಬಗ್ಗೆ ಮಾಹಿತಿ ಒದಗಿಸುವ ಟಾಸ್ಕ್ ವಹಿಸಲಾಗಿದೆ.