ಹೊಸದಿಲ್ಲಿ: ಭಾರತ ನೆಲಕ್ಕೆ ಪಾಕಿಸ್ಥಾನ ಪದೇ ಪದೆ ಡ್ರೋನ್ ಕಳುಹಿಸುವುದು ಹೊಸ ಅಂಶವಲ್ಲ. ಆದರೆ, ಅದಕ್ಕೆ ಚೀನ ಕೂಡ ನೆರವು ನೀಡುತ್ತಿದೆ ಎಂಬ ಗುಮಾನಿ ಈಗ ಖಚಿತವಾಗಿದೆ.
2022ರ ಡಿ. 25ರಂದು ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಬಿಎಸ್‌ಎಫ್ ಹೊಡೆದು ಉರುಳಿಸಿದ್ದ ಡ್ರೋನ್ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಚೀನದ ಶಾಂಘೈನಲ್ಲಿಯೇ ಅದನ್ನು ನಿರ್ಮಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
2022ರ ಸೆಪ್ಟೆಂಬರ್ 24, ಅದೇ ವರ್ಷದ ಡಿಸೆಂಬರ್ 25ರಂದು ಪಾಕಿಸ್ಥಾನದ ಪಂಜಾಬ್ ಪ್ರಾಂತದ ಖಾನೇವಾಲ್ ಜಿಲ್ಲೆಯಲ್ಲಿ 28 ಬಾರಿ ಹಾರಾಟ ನಡೆಸಿತ್ತು ಎಂಬ ಅಂಶವೂ ಪರೀಕ್ಷೆಯಿಂದ ಗೊತ್ತಾಗಿದೆ.
2022ರಲ್ಲಿ ಪಾಕಿಸ್ಥಾನದ ಕಡೆಯಿಂದ 22 ಡ್ರೋನ್‌ಗಳನ್ನು ದೇಶದ ನೆಲದೊಳಕ್ಕೆ ಕಳುಹಿಸಿ ಕೊಡಲಾಗಿತ್ತು.