Advertisement

ಚೀನ ಡಾಂಗ್‌ಫೆಂಗ್‌ ತಂತ್ರ

06:00 AM Nov 21, 2017 | Team Udayavani |

ಬೀಜಿಂಗ್‌: ವಿಶ್ವದ ಯಾವುದೇ ಪ್ರದೇಶದ ಮೇಲಾದರೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಅಣ್ವಸ್ತ್ರ ಕ್ಷಿಪಣಿಯನ್ನು ಚೀನ ಸೇನೆ ಮುಂದಿನ ವರ್ಷ ಸೇರ್ಪಡೆಗೊಳಿಸಲಿದೆ ಎನ್ನಲಾಗಿದೆ. ಇಂದು ಮುಂದಿನ ತಲೆಮಾರಿನ ಅತಿ ದೀರ್ಘ‌ ದೂರದ ಕ್ಷಿಪಣಿಯಾಗಿರಲಿದೆ ಎಂದು ಚೀನ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಡಾಂಗ್‌ಫೆಂಗ್‌ 41 ಎಂದು ನಾಮಕರಣ ಮಾಡಲಾಗಿದ್ದು, ಮ್ಯಾಚ್‌ 10ಕ್ಕಿಂತ ಹೆಚ್ಚು ವೇಗ ಹೊಂದಿರಲಿದೆ. 2012 ರಿಂದಲೇ ಇದರ ಅಭಿವೃದ್ಧಿ ನಡೆಸಲಾಗುತ್ತಿದ್ದು, ಎಂಟು ಬಾರಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ. 

Advertisement

ಇದು ಮೂರು ಹಂತದ ಘನ ಇಂಧನ ಬಳಕೆ ಸಾಮರ್ಥ್ಯ ಹೊಂದಿದ್ದು, 12,000 ಕಿ.ಮೀ ಚಲಿಸಬಲ್ಲದು. ಹೀಗಾಗಿ ಚೀನದಿಂದ ವಿಶ್ವದ ಯಾವುದೇ ಭಾಗದ ಮೇಲೂ ಇದು ದಾಳಿ ನಡೆಸಬಲ್ಲದಾಗಿದೆ. ಇದರಲ್ಲಿ ಕೇವಲ ಒಂದಲ್ಲ, 10 ಅಣ್ವಸ್ತ್ರಗಳನ್ನು ಅಳವಡಿ ಸಬಹುದು. ಈ ಪ್ರತಿಯೊಂದನ್ನೂ ವಿವಿಧ ದಿಕ್ಕಿಗೆ ಉಡಾಯಿಸಬಹುದು. ಹೀಗಾಗಿ ಬಹುತೇಕ ಇಡೀ ವಿಶ್ವವನ್ನು ಇದು ನಾಶಗೊಳಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಮೂಲಗಳ ಪ್ರಕಾರ ಈ ಕ್ಷಿಪಣಿಯನ್ನು ಅಮೆರಿಕವನ್ನು ಗಮನದಲ್ಲಿಟ್ಟು ಕೊಂಡು ರೂಪಿಸಲಾಗಿದ್ದು, ಅಮೆರಿಕ ಮತ್ತು ಯುರೋಪ್‌ನ ಬಹುತೇಕ ಭಾಗವನ್ನು ಇದು ತಲುಪಲ್ಲದು.

ನವೆಂಬರ್‌ ಆರಂಭದಲ್ಲಿ ಪಶ್ಚಿಮ ಮರುಭೂಮಿಯಲ್ಲಿ ಪ್ರಯೋಗ ನಡೆಸಲಾಗಿದ್ದು, ನಿರೀಕ್ಷಿತ ಫ‌ಲಿತಾಂಶ ನೀಡಿಲ್ಲ ಎಂದು ಹೇಳಲಾಗಿದೆ. ಏಪ್ರಿಲ್‌ನಲ್ಲಿ ಇಂಥದ್ದೊಂದು ಕ್ಷಿಪಣಿ ಪರೀಕ್ಷೆ ನಡೆಸಿರುವುದರ ಬಗ್ಗೆ ಅಮೆರಿಕದ ಸ್ಯಾಟಲೈಟ ಟ್ರ್ಯಾಕಿಂಗ್‌ ಸಿಸ್ಟಂ ಕೂಡ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next