Advertisement
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆಯ ಸಾಧ್ಯಾಸಾಧ್ಯತೆ ಅಧ್ಯಯನ ನಡೆಸಿರುವ ಚೀನಾ ಅಧಿಕಾರಿಗಳು ಈಗ ಭಾರತಕ್ಕೆ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ. 492 ಕಿ.ಮೀ ಉದ್ದದ ಈ ಮಾರ್ಗವನ್ನು ಉನ್ನತ ದರ್ಜೆಗೇರಿಸಿ ಹೈಸ್ಪೀಡ್ ರೈಲು ಓಡಿಸುವ ಸಂಬಂಧ ಚೀನಾ 2016ರ ನವೆಂಬರ್‌ನಲ್ಲೇ ಅಂತಿಮ ವರದಿ ಸಲ್ಲಿಸಿತ್ತು. ನಂತರ ಅಧಿಕಾರಿಗಳೊಂದಿಗೆ ಮುಖಾಮುಖೀ ಚರ್ಚೆಗೆ ಆಗ್ರಹಿಸಿತ್ತು. ಆದರೆ ಇದಕ್ಕೆ ದಿನಾಂಕ ನಿಗದಿಯಾಗಿರಲಿಲ್ಲ.
Related Articles
ಮುಂಬೈ- ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗೂ ಚೀನಾ ಆಸಕ್ತಿ ತೋರಿತ್ತಾದರೂ, ಕೊನೆಗೆ ಈ ಯೋಜನೆ ಜಪಾನ್‌ಗೆ ಲಭ್ಯವಾಗಿದೆ. ಮುಂಬೈ-ದೆಹಲಿ ಬುಲೆಟ್ ಯೋಜನೆಗೆ ಈಗಾಗಲೇ ಚೀನಾ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಯೋಜನೆ ಇನ್ನೂ ಅಂತಿಮಗೊಂಡಿಲ್ಲ. ರೈಲ್ವೆ ಇಂಜಿನಿಯರ್‌ಗಳಿಗೆ ಚೀನಾ ತರಬೇತಿ ನೀಡುತ್ತಿದೆ ಮತ್ತು ಚೀನಾ ಸಹಕಾರದಲ್ಲಿ ಭಾರತ ಮೊದಲ ರೈಲ್ವೆ ವಿಶ್ವವಿದ್ಯಾಲಯವನ್ನೂ ಸ್ಥಾಪಿಸುತ್ತಿದೆ.
Advertisement
ಚೀನಾ ಗಡಿಯುದ್ಧಕ್ಕೂ ಸೇನಾ ಬಲ ಹಚ್ಚಳಸಿಕ್ಕಿಂ ಗಡಿ ಭಾಗ ಡೋಕ್ಲಾಂ ಪ್ರಸ್ಥಭೂಮಿ ಪ್ರದೇಶದಲ್ಲಿ ಚೀನಾದ ಕ್ಯಾತೆ ಪ್ರಹಸನದ ಬಳಿಕ ಭಾರತ ಈಗ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ. ಐಟಿಬಿಪಿಯ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ವಾಹನ ಸೌಲಭ್ಯ ಹೆಚ್ಚಿಸಲಾಗುತ್ತಿದೆ. ಮತ್ತೂಮ್ಮೆ ಡೋಕ್ಲಾಂನಲ್ಲಾದ ಪರಿಸ್ಥಿತಿಯನ್ನೇ ಎದುರಿಸಬೇಕಾಗಿ ಬಂದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಗಡಿಯುದ್ಧಕ್ಕೂ 250ಕ್ಕೂ ಹೆಚ್ಚು ನ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ), ಆಲ್ ಟೆರೇನ್ ವೆಹಿಕಲ್ (ಎಟಿವಿ), ಸ್ನೋ ಸ್ಕೂಟರ್‌ಗಳು ಹಾಗೂ ಎಕ್ಸ್‌ಕವೇಟರ್ ಹಾಗೂ ಒಂದಿಷ್ಟು ಮಧ್ಯಮ ಗಾತ್ರದ 4ವೀಲ್ ಪವರ್ ವಾಹನಗಳನ್ನು ನಿಯೋಜಿಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಚೀನಾ ಸೇನೆ ಏಕಾಏಕಿ ದಾಳಿಗೆ ಮುಂದಾದಲ್ಲಿ ಕ್ಷಣಾರ್ಧದಲ್ಲಿ ಸೇನೆ ನಿಯೋಜನೆ ಮಾಡಿಕೊಳ್ಳುವುದು, ಶಸ್ತ್ರಾಸ್ತ್ರ ಪೂರೈಕೆ ಮಾಡಿಕೊಳ್ಳುವುದು ಸೇರಿದಂತೆ ಎಲ್ಲವೂ ತ್ವರಿತವಾಗಿಯೇ ಆಗಬೇಕಾದ ಕಾರಣ ಈ ವ್ಯವಸ್ಥೆಗೆ ಭಾರತ ಮಹತ್ವದ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಬರೋಬ್ಬರಿ 3,488 ಕಿ.ಮೀ. ಉದ್ದದ ಗಡಿಯಲ್ಲಿ ಯುದ್ಧ ಪರಿಣತ ಹಾಗೂ ಪರ್ವತಾರೋಹಣ ತರಬೇತಿ ಪಡೆದ ಯೋಧರನ್ನೇ ನಿಯೋಜಿಸುವ ಉದ್ದೇಶವನ್ನೂ ಹೊಂದಲಾಗಿದೆ. ಈತನಕವೂ ಚೀನಾ-ಭಾರತ ಗಡಿಯುದ್ದಕ್ಕೂ ಗೃಹ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ ಮಾತ್ರ ಕಾರ್ಯಾಚರಿಸುತ್ತಿದ್ದು, ಇದೀಗ ಒಂದಿಷ್ಟು ವಾಹನ ವ್ಯವಸ್ಥೆಗೆ ಸಚಿವಾಲಯ ಮುಂದಾಗಿದೆ. ಕೆಲವೇ ತಿಂಗಳಲ್ಲಿ ಇವೆಲ್ಲವೂ ಗಡಿಯಲ್ಲೇ ಇರುವಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಗಡಿ ಪ್ರದೇಶ ಸುರಕ್ಷಿತವಾಗಿದೆ. ಭಾರತದ ಸಾಮರ್ಥ್ಯ ಏನು ಎನ್ನುವುದೂ ಚೀನಾಕ್ಕೆ ಈಗ ಗೊತ್ತಾಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವದಲ್ಲೇ ಒಂದು ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ.
– ರಾಜನಾಥ್ ಸಿಂಗ್, ಗೃಹ ಸಚಿವ