ಬೀಜಿಂಗ್/ಹೊಸದಿಲ್ಲಿ: ಅರುಣಾಚಲ ಪ್ರದೇಶವನ್ನು ಭಾರತಕ್ಕೆ ಸೇರಿರುವ ರಾಜ್ಯ ಎಂದು ಅಂಗೀಕರಿಸಿಲ್ಲ ಎಂದು ಚೀನ ಹೇಳಿರುವಂತೆಯೇ, ಅದು ಡೊಕ್ಲಾಮ್ ಮಾದರಿ ಉದ್ಧಟತನ ಮೆರೆದ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ತಿಂಗಳ 22ರಂದು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಿಂದ 200 ಮೀಟರ್ ದೂರದ ವರೆಗೆ ರಸ್ತೆ ನಿರ್ಮಾಣ ಯಂತ್ರಗಳೊಂದಿಗೆ ಅತಿಕ್ರಮ ಪ್ರವೇಶ ಮಾಡಿರುವ ಪ್ರಸಂಗ ಈಗ ಬೆಳಕಿಗೆ ಬಂದಿದೆ. ಆದರೆ, ಈ ಬಗ್ಗೆ ಭಾರತೀಯ ಸೇನೆ ಸ್ಪಷ್ಟನೆ ನೀಡಿಲ್ಲ. ಕುತೂಹಲದ ವಿಚಾರ ವೆಂದರೆ, ಡೊಕ್ಲಾಮ್ ಪ್ರಸಂಗದ ನಂತರ, ಮೊದಲ ಬಾರಿಗೆ ಡಿ. 22ರಂದು ಭಾರತದ ರಾಷ್ಟ್ರೀ ಯ ಭದ್ರತಾ ಸಲಹೆಗಾರ ಅಜಿತ್ ಧೋ ವಲ್ ಹಾಗೂ ಚೀನದ ರಾಜತಾಂತ್ರಿಕ ಅಧಿಕಾರಿ ಯಂಗ್ ಜೈಚಿ ನಡುವೆ ನವದೆಹಲಿ ಯಲ್ಲಿ ನಡೆದಿದ್ದ ಮಾತುಕತೆ ವೇಳೆಯಲ್ಲೇ ಅತ್ತ ಅರು ಣಾಚಲ ಪ್ರದೇಶದಲ್ಲಿ ಗಡಿ ಉಲ್ಲಂಘನೆ ಯಾಗಿದೆ ಎಂದು ಅಧಿಕೃತ ಮೂಲಗಳೇ ತಿಳಿಸಿವೆ.
ಎಲ್ಲಿ ಬಂದಿದ್ದರು?: ಅರುಣಾಚಲ ಪ್ರದೇಶದ ಬಿಶಿಂಗ್ ಹಳ್ಳಿ ಚೀನ ಗಡಿ ಭಾಗಕ್ಕೆ ಹತ್ತಿರದ ಲ್ಲಿರುವ ಭಾರತದ ಕೊನೆಯ ಹಳ್ಳಿ. ಇಲ್ಲಿಂದ ಭಾರತದ ಕಡೆಗೆ ಬರಬೇಕಾದರೆ ಸಿಗುವ ಮತ್ತೂಂ ದು ಹಳ್ಳಿ ಟ್ಯುಟಿಂಗ್. ಅಲ್ಲಿಂದ ಮುಂದಕ್ಕೆ ಪೆಕಾಂಗ್ ಹಾಗೂ ಸಿಂಗಿಂಗ್ ಎಂಬ ಹಳ್ಳಿಗಳು ಸಿಗುತ್ತವೆ. ಈ ಎಲ್ಲವೂ ಅಪ್ಪರ್ ಸಿಯಾಂಗ್ ಜಿಲ್ಲೆಗೆ ಸೇರಿವೆ.
ಹೆಸರನ್ನೇಳಲು ಇಚ್ಛಿಸದ ಸ್ಥಳೀಯರು ನೀಡಿರುವ ಮಾಹಿತಿ ಉಲ್ಲೇಖೀಸಿರುವ ಪಿಟಿಐ ವರದಿಯ ಪ್ರಕಾರ, ಚೀನದ ಸೇನೆ ಭಾರತದ ಗಡಿ ದಾಟಿ ಸುಮಾರು 200 ಮೀಟರ್‌ಗಳಷ್ಟು ದೂರದವರೆಗೆ ನಡೆದು ಬಂದಿದೆ. ಇನ್ನೇನು ಬಿಶಿಂಗ್ ಹಳ್ಳಿಯ ಸಮೀಪಕ್ಕೆ ಬರುವ ಹೊತ್ತಿಗೆ ಭಾರತೀಯ ಸೇನೆ ಅವರನ್ನು ತಡೆದು ನಿಲ್ಲಿಸಿ, ಅವರು ತಂದಿದ್ದ ಜಿಸಿಬಿ ಮಾದರಿಯ ಯಂತ್ರ ಗಳು ಸೇರಿದಂತೆ ರಸ್ತೆ ನಿರ್ಮಾಣದ ಮತ್ತಷ್ಟು ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು ಕಳುಹಿಸಿದೆ. ಆದರೆ,ಇದೇ ಭಾಗದ ಜನರು ನೀಡಿರುವ ಮತ್ತೂಂದು ಮಾಹಿತಿ ಯನ್ನೂ ಉಲ್ಲೇಖೀಸಿರುವ ಪಿಟಿಐ, ಚೀನ ಸೈನಿಕರು ಬಿಶಿಂಗ್ ಹಳ್ಳಿಯನ್ನೂ ದಾಟಿ ಗೆಲಿಂಗ್ ಹಳ್ಳಿಯವರೆಗೂ ಬಂದಿದ್ದಾಗಿ ಹೇಳಿದೆ.
ಸೇನೆಯ ಮೌನ: ಈಶಾನ್ಯ ವಲಯದಲ್ಲಿನ ಸೇನಾ ಧಿ ಕಾರಿಗಳು ಈ ಪ್ರಕರಣವನ್ನು ಒಪ್ಪಿ ಕೊಂಡಿ ಯೂ ಇಲ್ಲ ಅಥವಾ ನಿರಾಕರಿಸಿಯೂ ಇಲ್ಲ ಎಂದು ಪಿಟಿಐ ಹೇಳಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಪ್ಪರ್ ಸಿಯಾಂಗ್ ಜಿಲ್ಲೆಯ ಜಿಲ್ಲಾಧಿಕಾರಿ ದುಲಿ ಕಾಮುxಕ್, “ಗಡಿಯಲ್ಲಿ ಚೀನ ಸೇನೆಯ ಅತಿಕ್ರಮಣದ ಬಗ್ಗೆ ನಮ್ಮ ಅಧಿಕಾರಿಗಳಿಂದ ಯಾವುದೇ ದೂರು ಬಂದಿಲ್ಲ. ಸೇನೆಯಿಂದಲೂ ಮಾಹಿತಿ ಇಲ್ಲ’ ಎಂದಿದ್ದಾರೆ.
ಅರುಣಾಚಲವನ್ನು ಒಪ್ಪಿಕೊಂಡಿಲ್ಲ: ಚೀನ
ಚೀನ ಸೈನಿಕರಿಂದ ಅರುಣಾಚಲ ಪ್ರದೇಶದಲ್ಲಿ ಗಡಿ ಉಲ್ಲಂಘನೆಯಾದ ಬಗ್ಗೆ ಭಾರತೀಯ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, “”ಅರುಣಾಚಲದ ಅಸ್ತಿತ್ವವನ್ನು ಚೀನ ಎಂದಿಗೂ ಒಪ್ಪಿಕೊಂಡಿಲ್ಲ. ಹಾಗಾಗಿ, ಇಲ್ಲಿನ ಗಡಿ ವಿಚಾರದಲ್ಲಿ ನಮ್ಮ ನಿಲುವು ಯಾವತ್ತಿಗೂ ಒಂದೇ ಆಗಿದೆ. ಆದರೆ, ಅರುಣಾಚಲ ಎಂಬ ಪ್ರದೇಶದಲ್ಲಿ ಗಡಿ ಉಲ್ಲಂಘನೆಯಾಗಿದೆ ಎಂಬ ವಿಚಾರ ನನಗೆ ಗೊತ್ತಿಲ್ಲ” ಎಂದಿದ್ದಾರೆ ಎಂದು ಪಿಟಿಐ ಹೇಳಿದೆ. ಅತ್ತ, ಇಂಡಿಯಾ ಟಿವಿ ತನ್ನದೇ ಸುದ್ದಿ ಮೂಲಗಳನ್ನು ಉಲ್ಲೇಖೀಸಿ ಮಾಡಿರುವ ವರದಿಯಲ್ಲಿ, ಚೀನ ಈ ಗಡಿ ಉಲ್ಲಂಘನೆ ಒಪ್ಪಿಕೊಂಡಿದೆಯಾದರೂ ರಸ್ತೆ ನಿರ್ಮಾಣ ಯಂತ್ರಗಳನ್ನು ಕೊಂಡೊಯ್ದಿರಲಿಲ್ಲ ಎಂದಿರುವುದಾಗಿ ತಿಳಿಸಿದೆ.