Advertisement
ಸೆ. 8-9ರ ಮಧ್ಯರಾತ್ರಿ ಭಾರತದ ಯುದ್ಧ ವಿಮಾನಗಳಾದ ಸುಖೋಯ್, ಮಿಗ್ ಹಾಗೂ ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಸದಲ್ಲಿ ಹಾರಾಡಿ, ಏರ್ ಸಾರ್ಟಿಂಗ್‌ಗಳನ್ನು ನಡೆಸಿವೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಗುರುವಾರ ಭೇಟಿಯಾಗಲಿದ್ದು, ಅದಕ್ಕೂ ಮುನ್ನವೇ ಈ ಹೊಸ ಬೆಳವಣಿಗೆ ಪಾಂಗಾಂಗ್ ಸರೋವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಆತಂಕದ ಅಲೆ ಎಬ್ಬಿಸಿದೆ.
Related Articles
Advertisement
ಅಧಿಕಾರಿಗಳು ಹೇಳ್ಳೋದೇನು?: ಪಾಂಗಾಂಗ್ ಸರೋವರದ ಫಿಂಗರ್ 3 ಬಳಿಯಲ್ಲಿ ಈ ನಿರ್ಮಾಣ ಕಂಡುಬಂದಿದ್ದು ಸರೋವರದ ಈ ಬದಿಯಲ್ಲಿರುವ ಭಾರತದ ನೆಲೆಯಿಂದ ನೋಡಿದರೆ ಅದು ಗೋಚರಿಸುತ್ತದೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ. “”ಫಿಂಗರ್ 3 ಪ್ರಾಂತ್ಯದಲ್ಲಿ ಯುದ್ಧ ವಿಮಾನಗಳ ಹಾರಾಟದ ಮೂಲಕ ಚೀನಾ ಸೇನೆಯ ಹೊಸ ನಿರ್ಮಾಣ ತನ್ನ ಗಮನಕ್ಕೆ ಬಂದಿರುವುದನ್ನು ತಿಳಿಯಪಡಿಸಿದ್ದೇವೆ. ಅಲ್ಲದೆ, ಭಾರತ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಲು ಸನ್ನದ್ಧವಾಗಿದೆ” ಎಂಬ ಸಂದೇಶವನ್ನು ರವಾನಿಸಲಾಗಿದೆ’ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಯುದ್ಧ ವಿಮಾನಗಳ ಹಾರಾಟದ ಜೊತೆಯಲ್ಲೇ “”ಫಿಂಗರ್ 3 ಬಳಿ ಭಾರತೀಯ ಯೋಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಮತ್ತು ಚೀನ: 3 ದಶಕದ ಗಡಿ ಒಪ್ಪಂದಗಳು
ಚೀನಾದಿಂದ ಮತ್ತಷ್ಟು ಸೇನೆಲಡಾಖ್ನಲ್ಲಿ ಸೋಮವಾರ, ಮಂಗಳವಾರ ನಡೆದಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎರಡೂ ದೇಶಗಳ ನೈಜ ಗಡಿ ರೇಖೆಯಲ್ಲಿ ಚೀನಾ ಸರ್ಕಾರ ಮತ್ತಷ್ಟು ಸೇನಾ ಜಮಾವಣೆ ಮಾಡಿ ದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಗಡಿ ರೇಖೆಯ ಬಳಿ ಹೆಚ್ಚುವರಿ ಯೋಧರನ್ನು ಜಮಾವಣೆಗೊಳಿಸಿದೆ. ಸೋಮವಾರ, ಭಾರತಕ್ಕೆ ಸೇರಿದ ಮುಖ್ರಿ ವಲಯವನ್ನು ವಶಕ್ಕೆ ಪಡೆಯಲು ಚೀನಾ ಸೈನಿಕರು ವಿಫಲ ಯತ್ನ ನಡೆಸಿದ್ದಾರೆ. ಇಂಥ ಘಟನೆಗಳು ಮರುಕಳಿಸುವ ಸಾಧ್ಯತೆಗಳು ದಟ್ಟವಾಗಿವೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಈ ನಿಯೋಜನೆ ಮಾಡಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. ಇದನ್ನೂ ಓದಿ: ಚೀನಾ ಯುದ್ಧೋತ್ಸಾಹ, ಭಾರತದ ನಡೆಗೆ ದೊಡ್ಡಣ್ಣನ ಬಹುಪರಾಕ್! ಜೈಶಂಕರ್-ವಾಂಗ್ ಭೇಟಿ ಇಂದು
ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಕೊಆಪರೇಷನ್ ಆರ್ಗನೈಸೇಷನ್ (ಎಸ್‌ಸಿಒ) ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಸಮ್ಮೇಳನದ ಬಿಡುವಿನ ವೇಳೆಯಲ್ಲಿ ಭೇಟಿಯಾಗಲಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಆದರೆ, ಇದು ನೇರ ಭೇಟಿಯೇ ಅಥವಾ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ನಾಯಕರು ಒಟ್ಟಿಗೆ ಸೇರಿದಾಗ ಆಗುವ ಭೇಟಿಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪತ್ರಿಕೆ ತಿಳಿಸಿದೆ.