Advertisement

ಚೀನದಲ್ಲಿ ಮತ್ತೆ 11 ಹೊಸ ಸೋಂಕಿತರು ಪತ್ತೆ!

01:30 PM Jun 08, 2020 | sudhir |

ಬೀಜಿಂಗ್‌: ಚೀನದಲ್ಲಿ ಕೋವಿಡ್‌ ಹಾವಳಿ ಕಡಿಮೆಯಾಗಿ ಎಲ್ಲವರೂ ಸರಿಯಾಯಿತು ಎನ್ನುತ್ತಿರುವಾಗಲೇ ಮತ್ತೆ ಹೊಸ ಕೇಸುಗಳು ಪತ್ತೆಯಾಗತೊಡಗಿವೆ. ಒಟ್ಟು 11 ಹೊಸ ಪ್ರಕರಣಗಳು ಕಂಡು ಬಂದಿದ್ದು, ಇವುಗಳಲ್ಲಿ 5 ಪ್ರಕರಣಗಳಲ್ಲಿ ಜನರಿಗೆ ಕೋವಿಡ್‌ ರೀತಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಇದರೊಂದಿಗೆ ದೇಶದ ಕೋವಿಡ್‌ ಪೀಡಿತರ ಸಂಖ್ಯೆ 83036 ಆಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Advertisement

ಚೀನದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಶನಿವಾರ ಅಲ್ಲಿ ಯಾವುದೇ ಕೋವಿಡ್‌ ಸಂಬಂಧಿ ಸಾವುಗಳು ವರದಿಯಾಗಿಲ್ಲ.

ಸದ್ಯ ಹೊಸ ಪ್ರಕರಣಗಳು ಎಂದು ಪರಿಗಣಿಸಲಾಗಿರುವ 236 ಪ್ರಕರಣಗಳು ಕೋವಿಡ್‌ ರೀತಿ ರೋಗ ಲಕ್ಷಣಗಳನ್ನು ಹೊಂದಿವೆ. ಇದರಲ್ಲಿ 154 ಪ್ರಕರಣಗಳು ವುಹಾನ್‌ ಪ್ರದೇಶದಿಂದಲೇ ವರದಿಯಾಗಿವೆ. ಇವರೆಲ್ಲರನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು, ನಿಗಾ ವಹಿಸಲಾಗಿದೆ.

ಸದ್ಯ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್‌ ಕುರಿತಾಗಿ ಇನ್ನೂ 70 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸ ಪ್ರಕರಣಗಳು ಹೇಗೆ ಸೃಷ್ಟಿಯಾದವು? ಹೊರಗಿನಿಂದ ಬಂದವೇ ಅಥವಾ ಕಳೆದ ಬಾರಿಯಂತೆ ಇಲ್ಲೇ ಉದ್ಭವವಾಗಿ ಹರಡುತ್ತಿವೆಯೇ ಎಂಬುದನ್ನು ತಿಳಿಯಲು ಚೀನ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಅಲ್ಲದೇ ಸೋಂಕು ಪೀಡಿತರ ಪ್ರಥಮ ಮತ್ತು ದ್ವಿತೀಯ, ತೃತೀಯ ಹಂತದ ಸಂಪರ್ಕಗಳನ್ನು ಕಲೆ ಹಾಕಲಾಗುತ್ತಿದೆ. ಕೋವಿಡ್‌ ಸೋಂಕು ಹೆಚ್ಚಾದರೆ ಇವುಗಳ ಮಾಹಿತಿಗಳನ್ನೂ ಕಲೆ ಹಾಕುವುದು ಕಷ್ಟವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ದೇಶದಲ್ಲಿ ಈವರೆಗೆ 78332 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಒಟ್ಟು 4634 ಮಂದಿ ಮೃತಪಟ್ಟಿದ್ದಾರೆ.

Advertisement

ಆದರೆ ಸದ್ಯ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಮತ್ತೆ ಕೋವಿಡ್‌ ಹರಡಲಿದೆಯೇ? ಅಥವಾ ಈಗಾಗಲೇ ಇದು ಹರಡಿದೆಯೇ ಎಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ. ಈ ಸಂಶಯದ ಕಾರಣ ವುಹಾನ್‌ನಲ್ಲಿ ಈಗಾಗಲೇ ಚೀನ ಸರಕಾರ 1 ಕೋಟಿಗೂ ಹೆಚ್ಚಿನ ಮಂದಿಗೆ ಕಡ್ಡಾಯ ಕೋವಿಡ್‌ ಪರೀಕ್ಷೆಯನ್ನು ಮಾಡಿಸಿದೆ. ಜತೆಗೆ ಕಡ್ಡಾಯ ಸುರಕ್ಷತೆ ಕ್ರಮಗಳು, ಹಾಟ್‌ಸ್ಪಾಟ್‌ಗಳಲ್ಲಿ ಜನಸಂದಣಿ ಸೇರುವುದನ್ನು ನಿಷೇಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next