Advertisement

ಡೋಕ್ಲಾಮ್ ಸಮೀಪ ಎರಡು ಗ್ರಾಮಗಳನ್ನು ನಿರ್ಮಿಸುತ್ತಿದೆ ಚೀನಾ: ಇಲ್ಲಿದೆ ಚಿತ್ರಗಳು

09:30 AM Jan 14, 2022 | Team Udayavani |

ಹೊಸದಿಲ್ಲಿ: ಭೂತಾನ್ ಭೂಪ್ರದೇಶದೊಳಗೆ ಚೀನಾ ಕನಿಷ್ಠ ಎರಡು ದೊಡ್ಡ ಅಂತರ್ ಸಂಪರ್ಕಿತ ಹಳ್ಳಿಗಳನ್ನು ನಿರ್ಮಿಸುತ್ತಿದೆ ಎಂದು ಉಪಗ್ರಹ ಚಿತ್ರಗಳನ್ನು ಆಧರಿಸಿ ಎನ್ ಡಿಟಿವಿ ವರದಿ ಮಾಡಿದೆ.

Advertisement

ಇವುಗಳು ಡೋಕ್ಲಾಮ್ ಪ್ರಸ್ಥಭೂಮಿಯಿಂದ 30 ಕಿಮೀಗಿಂತ ಕಡಿಮೆ ದೂರದಲ್ಲಿವೆ. 2017 ರಲ್ಲಿ ಈ ಜಾಗದಲ್ಲಿ ಭಾರತೀಯ ಸೈನಿಕರು ಚೀನಾದ ರಸ್ತೆ ನಿರ್ಮಾಣ ಚಟುವಟಿಕೆಯನ್ನು ದೈಹಿಕವಾಗಿ ನಿರ್ಬಂಧಿಸಿದಾಗ ಭಾರತ ಮತ್ತು ಚೀನಾ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ:ಗೆಲ್ಲಲು ಉತ್ತಮ ಮಾರ್ಗ ಹುಡುಕಿ..: ಡಿಆರ್ ಎಸ್ ನಿರ್ಧಾರಕ್ಕೆ ಕೊಹ್ಲಿ ತೀವ್ರ ಅಸಮಾಧಾನ

ಅಂದಿನಿಂದ, ಡೋಕ್ಲಾಮ್ ಸಂಘರ್ಷ ಸ್ಥಳದಿಂದ ಕೇವಲ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಅಕ್ಷದಿಂದ ರಸ್ತೆ ನಿರ್ಮಾಣ ಚಟುವಟಿಕೆಯನ್ನು ಪುನರಾರಂಭಿಸಲು ಚೀನಾ ಭಾರತೀಯ ಸ್ಥಾನಗಳನ್ನು ಬೈಪಾಸ್ ಮಾಡಿದೆ.

Advertisement

ಕಳೆದ ವರ್ಷ ನವೆಂಬರ್‌ನಲ್ಲಿ ಮೊದಲ ಬಾರಿಗೆ ಹೊಸ ಸೈಟ್‌ಗಳನ್ನು ಗುರುತಿಸಿದ ಇಂಟೆಲ್ ಲ್ಯಾಬ್‌ನ ಪ್ರಮುಖ GEOINT ಸಂಶೋಧಕ ಡೇಮಿಯನ್ ಸೈಮನ್ ಪ್ರಕಾರ, ಇದು “ಚೀನಾ ಮತ್ತು ಭೂತಾನ್‌ನಿಂದ ವಿವಾದಿತ ಪ್ರದೇಶದಲ್ಲಿ ನಡೆಯುತ್ತಿರುವ ನಿರ್ಮಾಣ ಮತ್ತು ಅಭಿವೃದ್ಧಿ ಚಟುವಟಿಕೆಯ ಪುರಾವೆಯಾಗಿದೆ ಎಂದು ಚಿತ್ರಗಳು ತೋರಿಸುತ್ತವೆ. ಹಲವು ‘ಗುಡಿಸಲು-ತರಹದ’ ರಚನೆಗಳು  ಗೋಚರಿಸುತ್ತವೆ, ಇನ್ನೂ ಹೆಚ್ಚಿನವು ನಿರ್ಮಾಣ ಹಂತದಲ್ಲಿದೆ”.

ಇದನ್ನೂ ಓದಿ:ವರದಕ್ಷಿಣೆ ಪದದ ವ್ಯಾಪ್ತಿ ವಿಸ್ತಾರವಾಗಲಿ: ಸುಪ್ರೀಂಕೋರ್ಟ್‌ ಕೋರ್ಟ್‌

ಇನ್ನೂ ಹೆಚ್ಚಿನ ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದು ಚಿತ್ರಗಳಿಂದ ಸ್ಪಷ್ಟವಾಗಿದೆ.  ಭಾರೀ ಯಂತ್ರೋಪಕರಣಗಳು ಮತ್ತು ಇನ್ನಷ್ಟು ಸಮತಟ್ಟು ಜಾಗಗಳ ನಿರ್ಮಾಣ ನಡೆಯುತ್ತಿರುವುದನ್ನು ಗಮನಿಸಲಾಗಿದೆ. ಇದು ಅಭಿವೃದ್ಧಿ ಹೊಂದಿದ ರಸ್ತೆಗೆ ಸಂಪರ್ಕ ಹೊಂದಿದೆ. ಈ ವಸಾಹತುಗಳು ಮಿಲಿಟರಿ ಪಡೆಗಳನ್ನು ನಿಲ್ಲಿಸುವ ಉದ್ದೇಶ ಅಥವಾ, ಕಡಿಮೆ ಬಲ ಹೊಂದಿರುವ ದೇಶದಗಳ ಪ್ರದೇಶವನ್ನು ಆಕ್ರಮಿಸುವ ಉದ್ದೇಶದಿಂದ ಮಾಡಲಾಗಿದೆಯೇ ಎನ್ನುವುದನ್ನು ಈ ಹಂತದಲ್ಲಿ ಅಂದಾಜಿಸುವುದು ಕಷ್ಟ ಎಂದು ವರದಿ ತಿಳಿಸಿದೆ.

ಭೂತಾನ್ ಮತ್ತು ಚೀನಾ ನಾಲ್ಕು ದಶಕಗಳಿಂದ ಗಡಿ ಮಾತುಕತೆ ನಡೆಸುತ್ತಿವೆ. ಆದರೆ ಆರಂಭದಿಂದಲೂ ಭೂತಾನ್ ಭಾರತಕ್ಕೆ ಮಿತ್ರದೇಶವಾಗಿದೆ. ಹೀಗಾಗಿ ಚೀನಾದ ಈ ಕೆಲಸಗಳು ಭಾರತಕ್ಕೂ ಪ್ರಭಾವ ಬೀರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next