ಬೀಜಿಂಗ್: ಗಡಿಯಲ್ಲಿ ಪದೇ ಪದೇ ತಂಟೆ ಮಾಡುತ್ತಿರುವ ಚೀನಾ ಈಗ ಮತ್ತೊಂದು ಪ್ರಯತ್ನದಲ್ಲಿದೆ. ಡೋಕ್ಲಾಮ್ ನಿಂದ ಕೆಲವೇ ಕಿ.ಮೀ ದೂರದಲ್ಲಿ ಭೂತಾನ್ ಭೂ ಪ್ರದೇಶದಲ್ಲಿ ಹಳ್ಳಿಯೊಂದನ್ನು ನಿರ್ಮಿಸಿದೆ.
ಚೀನಾದ ಸಿಜಿಟಿಎನ್ ನ್ಯೂಸ್ ನ ಹಿರಿಯ ಪತ್ರಕರ್ತ ಈ ಬಗ್ಗೆ ಟ್ವೀಟ್ ಮಾಡಿದ್ದು, ಚೀನಾ ನಿರ್ಮಿಸಿರುವ ಹಳ್ಳಿಯ ಚಿತ್ರಗಳು ಮತ್ತು ಅದರ ಸ್ಥಳ ಮಾಹಿತಿಯನ್ನೂ ನೀಡಿದ್ದಾರೆ.
2017ರಲ್ಲಿ ಡೋಕ್ಲಾಮ್ ನಲ್ಲಿ ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷ ನಡೆದಿತ್ತು. ಚೀನಾ ನೂತನವಾಗಿ ನಿರ್ಮಿಸಿರುವ ಹಳ್ಳಿ ಭೂತಾನ್ ಭೂ ಪ್ರದೇಶದ ಎರಡು ಕಿ.ಮೀ ದೂರದಲ್ಲಿದೆ. ಭಾರತ ಮತ್ತು ಭೂತಾನ್ ಪ್ರದೇಶವನ್ನು ಕಬಳಿಸುವ ಚೀನಾದ ಮತ್ತೊಂದು ಹುನ್ನಾರದಂತೆ ಇದು ಕಾಣುತ್ತಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ಟ್ರಕ್ ಗೆ ಗುದ್ದಿದ ಕಾರು: ಆರು ಮಕ್ಕಳು ಸೇರಿ 14 ಮಂದಿ ಸ್ಥಳದಲ್ಲೇ ಸಾವು
Related Articles
ಡೋಕ್ಲಾಮ್, ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿರುವ ಸಮಯದಲ್ಲಿ ಚೀನಾ ಭೂತಾನ್ ಭೂಪ್ರದೇಶದಲ್ಲಿ ಹೊಸ ಹಳ್ಳಿ ರಚಿಸಿರುವುದು ಭಾರತಕ್ಕೆ ಮುಂದಿನ ದಿನಗಳಲ್ಲಿ ಆತಂಕಕಾರಿಯಾಗಿ ಪರಿಣಮಿಸಬಹುದು ಎಂದು ಅಂದಾಜಿಸಲಾಗಿದೆ.