Advertisement

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

12:29 AM Oct 03, 2023 | Team Udayavani |

ಇಟಾನಗರ: ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಇರುವ ಭಾರತ-ಚೀನ ಗಡಿಯಲ್ಲಿ ಇಂಡೊ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌(ಐಟಿಬಿಪಿ)ನ ಗಡಿ ಪೋಸ್ಟ್‌ ಗಳಲ್ಲಿ ಕಣ್ಗಾವಲು ಮತ್ತು ಮಾಹಿತಿ ಸಂಗ್ರಹಣೆಗಾಗಿ ಗುಪ್ತಚರ ಇಲಾಖೆಯ ಅಧಿಕಾರಿಗಳ ತಂಡವನ್ನು ಹೆಚ್ಚುವರಿಯಾಗಿ ನೇಮಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ. ಬಾರ್ಡರ್‌ ಇಂಟಿಲಿಜೆನ್ಸ್‌ ಪೋಸ್ಟ್‌(ಬಿಐಪಿ)ಗಳ ಸ್ಥಾಪನೆಯ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಗಡಿಯಲ್ಲಿ ಚೀನೀ ಸೇನೆಯ ಹೆಚ್ಚುತ್ತಿರುವ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next