Advertisement

ಚೀನ ಗಡಿಯಲ್ಲಿ ಭಾರತದಿಂದ ಮೂಲ ಸೌಕರ್ಯ ವೃದ್ಧಿ

04:03 AM Jun 19, 2021 | Team Udayavani |

ಹೊಸದಿಲ್ಲಿ : ಯಾರನ್ನು ನಂಬಿದರೂ ಚೀನ ಮತ್ತು ಪಾಕಿಸ್ಥಾನಗಳನ್ನು ನಂಬಬಾರದು ಎಂಬುದು ಭಾರತ ಕಂಡುಕೊಂಡಿರುವ  ಸತ್ಯ. ಗಾಲ್ವಾನ್‌ ಘರ್ಷಣೆಯ ಅನಂತರ ಭಾರತ- ಚೀನ ನಡುವೆ 11 ಸುತ್ತು ಮಾತುಕತೆ ನಡೆದಿವೆ. ಆದರೂ ವೈಮನಸ್ಸು ಕಡಿಮೆಯಾಗಿಲ್ಲ. ಹೀಗಾಗಿಯೇ ಭಾರತವು ಚೀನದ ಗಡಿಯಲ್ಲಿ ಮೂಲ ಸೌಕರ್ಯ ವೃದ್ಧಿ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ.

Advertisement

ರಸ್ತೆಗಳು, ಸುರಂಗಗಳು, ಸೇತುವೆಗಳ ನಿರ್ಮಾಣ ಕಾಮಗಾರಿ ತುರ್ತಾಗಿ ನಡೆಯುತ್ತಿದೆ. ಈಗ ಹಿಮಾಲಯ ತಪ್ಪಲಿನಲ್ಲಿ ತಡೆಯಲಾಗದಂಥ ಪ್ರತಿಕೂಲ ವಾತಾವರಣವಿದೆ. ಆದರೂ ಭಾರತವು ಛಲಬಿಡದ ತ್ರಿವಿಕ್ರಮನಂತೆ ಕಾಮಗಾರಿಗಳನ್ನು ಮುಂದುವರಿಸಿದೆ.

ವರ್ಷದ ಹಿಂದೆಯೇ ಆರಂಭ
ಈ ಕಾಮಗಾರಿಗಳು ಈಗ ಆರಂಭವಾದದ್ದಲ್ಲ. ಗಾಲ್ವಾನ್‌ನಲ್ಲಿ ಚೀನ ಮೋಸ ಮಾಡಿದ ಬಳಿಕ ಸಮರೋಪಾದಿಯಲ್ಲಿ ಕಾಮಗಾರಿ ಆರಂಭವಾಗಿದೆ. ಈಗಲೂ ಈ ಭಾಗದಲ್ಲಿ ಭಾರತದ 50ರಿಂದ 60 ಸಾವಿರ ಸೇನಾ ಸಿಬಂದಿ ಕಾವಲು ಕಾಯುತ್ತಿದ್ದಾರೆ.

ಭಾರೀ ಪ್ರಮಾಣದಲ್ಲಿ ರಸ್ತೆ ನಿರ್ಮಾಣ
ಕಳೆದ ಒಂದು ವರ್ಷದಲ್ಲಿ ಬಿಆರ್‌ಒ 1,200 ಕಿ.ಮೀ. ರಸ್ತೆ, 2,850 ಕಿ.ಮೀ. ಸಫೇì ಸಿಂಗ್‌ ಕಾಮಗಾರಿಗಳನ್ನು ನಡೆಸಿದೆ. ಈ ಪೈಕಿ 165 ಕಿ.ಮೀ. ರಸ್ತೆಯನ್ನು ರಾಜಸ್ಥಾನದಲ್ಲಿ ನಿರ್ಮಿಸಿದ್ದರೆ ಉಳಿದೆಲ್ಲವೂ ಚೀನ ಗಡಿಯಲ್ಲೇ ಆಗಿವೆ. ಬಿಆರ್‌ಒ ಒಟ್ಟು 61 ರಸ್ತೆ ನಿರ್ಮಾಣ ನಡೆಸಿದ್ದು, 45 ಪೂರ್ಣಗೊಂಡಿವೆ.

ಏಕೆ ಈ ರಸ್ತೆ?
- ಶೀಘ್ರದಲ್ಲಿ ಸೇನಾಪಡೆಗಳನ್ನು ರವಾನಿಸಲು
- ಶಸ್ತ್ರಾಸ್ತ್ರ ಹೊತ್ತ ವಾಹನಗಳ ಓಡಾಟಕ್ಕೆ
- ಸೇನೆಗೆ ಬೇಕಾದ ಅಗತ್ಯ ವಸ್ತುಗಳ ಸಾಗಾಟಕ್ಕೆ

Advertisement

12 ರಸ್ತೆಗಳ ನಿರ್ಮಾಣ
ಕಳೆದ ಗುರುವಾರವಷ್ಟೇ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ಭಾರತ-ಚೀನ ಗಡಿಯಲ್ಲಿ ನಿರ್ಮಾಣ ಮಾಡಲಾಗಿರುವ 12 ರಸ್ತೆಗಳನ್ನು ವಚ್ಯುವಲ್‌ ಆಗಿ ಉದ್ಘಾಟಿಸಿದ್ದರು. ಈ ರಸ್ತೆಗಳನ್ನು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ನಿರ್ಮಾಣ ಮಾಡಿದೆ. ಇದಲ್ಲದೆ 20 ಕಿ.ಮೀ. ಉದ್ದದ ಕಿಮಿನ್‌-ಪೊಟಿನ್‌ ದ್ವಿಪಥ ರಸ್ತೆ, ಅರುಣಾಚಲ ಪ್ರದೇಶದಲ್ಲಿ ಒಂಬತ್ತು, ಲಡಾಖ್‌ ಮತ್ತು ಜಮ್ಮು -ಕಾಶ್ಮೀರ ದಲ್ಲಿ ತಲಾ ಒಂದು ರಸ್ತೆಗಳಿಗೆ ಚಾಲನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next