Advertisement

ಒಳ ಉಡುಪುಗಳಿಗೆ ಪುರುಷರೇ ಮಾಡೆಲ್‌ !

08:19 PM Mar 05, 2023 | Team Udayavani |

ಒಳ ಉಡುಪುಗಳ ಮಾರ್ಕೇಟಿಂಗ್‌ಗಾಗಿ ಮಹಿಳಾ ರೂಪದರ್ಶಿಗಳನ್ನು ಬಳಸಿಕೊಳ್ಳುವಂತಿಲ್ಲ ಎನ್ನುವ ನಿರ್ಬಂಧದಿಂದಾಗಿ, ಪುರುಷರೇ ಮಹಿಳೆಯರ ಒಳ ಉಡುಪುಗಳನ್ನು ಧರಿಸಿ, ಮಾರ್ಕೆಟಿಂಗ್‌ ಮಾಡುವ ಪರಿಸ್ಥಿತಿ ಚೀನದಲ್ಲಿ ಎದುರಾಗಿದೆ. ಇದರಿಂದ ಪುರುಷ ರೂಪದರ್ಶಿಗಳ ಫೋಟೋ ಜಾಲತಾಣದಲ್ಲಿ ವೈರಲ್‌ ಆಗಿವೆ.

Advertisement

ಹೌದು, ವಿಶಿಷ್ಟ ವಿನ್ಯಾಸಗಳ ಒಳ ಉಡುಪುಗಳನ್ನು ಧರಿಸಿ, ಮಹಿಳಾ ರೂಪದರ್ಶಿಗಳು ಮಾಡುವ ಲೈವ್‌ಸ್ಟ್ರೀಮ್‌ ಅನ್ನು ಸರ್ಕಾರ ನಿಷೇಧಿಸಿದೆ.

ಈ ಹಿನ್ನೆಲೆ ಒಳ ಉಡುಪುಗಳ ಮಾರಾಟ ಸಂಸ್ಥೆಯೊಂದು ತನ್ನ ಪುರುಷ ರೂಪದರ್ಶಿಗಳಿಗೆ ರೇಷ್ಮೆ ನಿಲುವಂಗಿ ಸೇರಿದಂತೆ ಮಹಿಳೆಯರ ವಿವಿಧ ಉಡುಪುಗಳನ್ನು ಧರಿಸಿ, ಲೈವ್‌ಸ್ಟ್ರೀಮ್‌ ಮಾಡಿದೆ.

ಈ ವಿಡಿಯೋ ಮತ್ತು ಫೋಟೋಗಳಿಗೆ ಜಾಲತಾಣದಲ್ಲಿ ಭಾರೀ ಪ್ರತಿಕೆಯ ವ್ಯಕ್ತವಾಗಿದ್ದು, ಕೆಲವರು ಇದು ಮಹಿಳಾ ರೂಪದರ್ಶಿಗಳ ಉದ್ಯೋಗ ಕಸಿಯುವ ಕ್ರಮ ಎಂದರೆ, ಮತ್ತೂ ಹಲವರು ಈ ಪ್ರಸ್ತಾಪವೇ ವಿಚಿತ್ರ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next