Advertisement

ಅರುಣಾಚಲದ 15 ಸ್ಥಳಗಳಿಗೆ “ಚೀನಾ ನಾಮಕರಣ’: ಮತ್ತೊಮ್ಮೆ ಕುಟಿಲ ನೀತಿ ಪ್ರದರ್ಶಿಸಿದ ಚೀನಾ

10:55 AM Dec 31, 2021 | Team Udayavani |

ನವದೆಹಲಿ: ಮತ್ತೂಂದು ದೇಶದ ನೆಲವನ್ನು ಅತಿಕ್ರಮಿಸಿ ತನ್ನದು ಎಂದು ಹೇಳಿ ಕುತ್ಸಿತ ಬುದ್ಧಿ ಪ್ರದರ್ಶಿಸುವ ಚೀನಾ ಮತ್ತೂಂದು ನಾಟಕವಾಡಿದೆ. ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳು ತನ್ನದು ಎಂದು ವಾದಿಸುವ ಡ್ರ್ಯಾಗನ್‌, 15 ಸ್ಥಳಗಳು ತನಗೇ ಸೇರಿದ್ದು ಮತ್ತು ಆ ಎಲ್ಲಾ ಸ್ಥಳಗಳಿಗೆ ಪುನರ್‌ ನಾಮಕರಣ ಮಾಡಿದೆ. ಮ್ಯಾಂಡ್ರಿಯನ್‌ ಭಾಷೆಯ ಹೆಸರುಗಳನ್ನು ಇರಿಸಲಾಗಿರುವ ಬಗ್ಗೆ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ.

Advertisement

ಇದನ್ನೂ ಓದಿ:ಭಾರತ: 24ಗಂಟೆಯಲ್ಲಿ 16,764 ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 1,270ಕ್ಕೆ ಏರಿಕೆ

ಹೆಸರು ಬದಲಾವಣೆ ಮಾಡಿಕೊಳ್ಳಲಾಗಿರುವ ಸ್ಥಳಗಳ ಪೈಕಿ ಎಂಟು ಜನ ವಸತಿ ಪ್ರದೇಶಗಳು, ನಾಲ್ಕು ಪರ್ವತಗಳು, ಎರಡು ನದಿಗಳು ಸೇರಿವೆ. 2017ರಲ್ಲಿ ಕೂಡ ಚೀನಾ ಅರುಣಾಚಲ ಪ್ರದೇಶದ ಆರು ಸ್ಥಳಗಳ ಹೆಸರು ಬದಲಾವಣೆಗೆ ಮುಂದಾಗಿತ್ತು.

ಚೀನಾದ ಪ್ರಕಾರ ಅರುಣಾಚಲ ಪ್ರದೇಶದ 90 ಸಾವಿರ ಚದರ ಕಿಮೀ ವ್ಯಾಪ್ತಿ ಆ ದೇಶಕ್ಕೆ ಸೇರಿದೆ. ಅದನ್ನು ಟಿಬೆಟ್‌ನ ದಕ್ಷಿಣ ಭಾಗದ “ಝಂಗ್ನಾನ್‌’ ಎಂದು ಈಗಾಗಲೇ ಹೆಸರಿಸಿದೆ. ಆದರೆ, ಕೇಂದ್ರ ಸರ್ಕಾರ ಇಂಥ ವಾದವನ್ನು ಈಗಾಗಲೇ ತಿರಸ್ಕರಿಸಿದ್ದು, ಒಟ್ಟು ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವೇ ಆಗಿದೆ ಎಂದು ಹಿಂದಿನ ಹಲವು ಸಂದರ್ಭಗಳಲ್ಲಿ ಪ್ರತಿಪಾದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next