-ಡಾ.ಎಸ್.ಎಲ್.ಭೈರಪ್ಪ, ಖ್ಯಾತ ಕಾದಂಬರಿಕಾರರು
Advertisement
ಇಂದು ಸಂಶೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ಅದರಲ್ಲಿ ಅರ್ಧಟೊಳ್ಳಿರಬಹುದು, ಉಳಿದರ್ಧ ಗಟ್ಟಿಯಿರ ಬಹುದು. ಅದರೆ, ಸಂಶೋಧನಾ ವಿದ್ವತ್ತಿನ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಡಾ.ಎಂ.ಚಿಮೂರವರು ಪ್ರಾಮಾಣಿಕ ಸಂಶೋಧನೆಯ ಪ್ರತೀಕ ವಾಗಿದ್ದಾರೆ. ಸಂಶೋಧನೆಯಲ್ಲಿ ಆತ್ಮ ವಂಚನೆ ಮಾಡಿ ಕೊಳ್ಳುತ್ತಿರಲಿಲ್ಲ. ತಾವು ಹೇಳಿದ್ದಕ್ಕೆ ಬದ್ಧರಾಗಿದ್ದರು. ಯಾರನ್ನೋ ಮೆಚ್ಚಿಸಲಿಕ್ಕಾಗಿ ಮಾತನಾಡುತ್ತಿರಲಿಲ್ಲ. ಒಮ್ಮೆ ಶೂನ್ಯ ಸಂಪಾದನೆಯ ಬಗ್ಗೆ ಕೃತಿ ಪ್ರಕಟವಾಗಿದ್ದಾಗ ಚಿದಾನಂದ ಮೂರ್ತಿಯವರು ಪ್ರತಿಕ್ರಿಯಿಸಿ, ಈ ಸಂಶೋಧನಾ ಕೃತಿಯಲ್ಲಿ ಸಂಶೋಧನೆಯೇ ಶೂನ್ಯ ಎಂದಿದ್ದರು. ಅಷ್ಟು ಹೇಳುವುದಕ್ಕೆ ಅವರಿಗೆ ಮಾತ್ರ ಸಾಧ್ಯವಿತ್ತು. ಏಕೆಂದರೆ ಅವರ ನಾಲಿಗೆ, ಮನಸ್ಸು ಮತ್ತು ಹೃದಯಕ್ಕೆ ಸಂಬಂಧ ಇಟ್ಟುಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ನನ್ನ ಮತ್ತು ಅವರ ವಿಚಾರದ ಧಾರೆಯಲ್ಲಿ ವ್ಯತ್ಯಾಸವಿತ್ತು. ಆದರೆ, ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಯಾವುದೇ ಬೇಧಭಾವ ಹುಟ್ಟಿಲ್ಲ. -ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ
-ಡಾ.ಸಿದ್ದಲಿಂಗಯ್ಯ, ಖ್ಯಾತ ಕವಿ ಚಿಮೂ ಅವರಿಗೆ ತಮ್ಮ ಕಾರ್ಯದ ಬಗ್ಗೆ ನಿಷ್ಠೆ, ಬದ್ಧತೆ ಹಾಗೂ ಪ್ರಾಮಾಣಿಕತೆ ಇತ್ತು. ಯಾರನ್ನೋ ಮೆಚ್ಚಿಸಲು ಸಂಶೋಧನಾ ಕಾರ್ಯ ಮಾಡುತ್ತಿರಲಿಲ್ಲ. ಕನ್ನಡದ ಕೆಲಸ ಎಂದರೆ ಚಿದಾನಂದ ಮೂರ್ತಿ ಎಂದು ಹೇಳುತ್ತಿದ್ದ ಕಾಲವೂ ಒಂದಿತ್ತು. ನಾಲ್ಕನೇ ಅಖೀಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಇವರೇ ಆಗಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಸಮಿತಿಯ ಸದಸ್ಯರೂ ಆಗಿದ್ದರು. ನೇಪಾಳದ ಕಠ್ಮಂಡುವಿನಲ್ಲಿ ಕೆಲವು ಬೀದಿಗೆ, ಸಾರಿಗೆ ಬಸ್‌ಗಳಿಗೆ ಜಂಗಮ ಪದ ಬಳಕೆ ಮಾಡುತ್ತಿದ್ದ ಮಾಹಿತಿಯನ್ನು ಚಿದಾನಂದ ಮೂರ್ತಿಯವರಿಗೆ ನೀಡಿದ್ದೆ. ನಂತರ ಅವರು ಅಲ್ಲಿಗೆ ಹೋಗಿ ಅಲ್ಲಿದ್ದ ಕನ್ನಡ ಶಿಲಾಶಾಸನವನ್ನು ಪತ್ತೆ ಮಾಡಿ, ಅದರ ಮೇಲೆ ಲೇಖನವನ್ನು ಬರೆದಿದ್ದರು. ಯಾವುದೇ ಕನ್ನಡ ಕೆಲಸ ಬಂದಾಗಲೆಲ್ಲ ದೂರವಾಣಿ ಮೂಲಕ ಹೇಳುತ್ತಿದ್ದರು. ಯಾವುದೇ ಹೊಸ ವಿಷಯವಾಗಲಿ ಅಥವಾ ತಮ್ಮ ಸಂಶೋಧನೆಯೇ ಆಗಲಿ, ಹತ್ತಾರು ಜನರಿಂದ ಖಚಿತ ಪಡಿಸಿಕೊಳ್ಳುತ್ತಿದ್ದರು. ತಮ್ಮ ನಿಲುವಿಗೆ ಯಾವಾಗಲೂ ಬದ್ಧರಾಗಿರುತ್ತಿದ್ದರು.
-ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿ
Related Articles
-ಚಿಮೂ
Advertisement