Advertisement

ಚಿಂಪಾಂಜಿ ಅಣ್ಣ-ತಮ್ಮನ ಸಮ್ಮಿಲನ- ವೀಡಿಯೋ ವೈರಲ್

12:01 AM Jun 07, 2022 | Team Udayavani |

ಪ್ರಾಣಿಗಳಿಗೂ ಮನುಷ್ಯರಂತೆ ಭಾವನೆ ಗಳಿರುತ್ತವೆ ಎಂಬ ಮಾತು ಈ ವೀಡಿಯೋದಿಂದ ಮತ್ತೆ ಸಾಬೀತಾಗಿದೆ. ಎರಡು ಚಿಂಪಾಂಜಿಗಳು ಓಡಿ ಬಂದು ತಬ್ಬಿಕೊಳ್ಳುತ್ತವೆ.

Advertisement

ಸುಮಾರು ಹೊತ್ತಾದರೂ ಅವುಗಳ ಆಲಿಂಗನ ನಿಲ್ಲುವುದೇ ಇಲ್ಲ. ಇಂಥದ್ದೊಂದು ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಂದ ಹಾಗೆ ವೀಡಿಯೋದಲ್ಲಿರುವ ಚಿಂಪಾಂಜಿಗಳೆರೆಡು ಅಣ್ಣ-ತಮ್ಮ.

ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡೂ ಚಿಂಪಾಂಜಿಗಳನ್ನು ಬೇರೆ ಬೇರೆ ಸ್ಥಳಗಳಿಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಎರಡೂ ಚಿಂಪಾಂಜಿಗಳು ಚೇತರಿಸಿಕೊಂಡ ಅನಂತರ ಅವುಗಳನ್ನು ಮತ್ತೆ ಒಂದು ಮಾಡಲಾಗಿದೆ. ಸಾಕಷ್ಟು ದಿನ ಒಬ್ಬರನ್ನೊಬ್ಬರು ಕಾಣದ ಚಿಂಪಾಂಜಿಗಳು ಚೇತರಿಸಿಕೊಂಡು ಬಂದ ಅನಂತರ ತಬ್ಬಿಕೊಂಡ ವೀಡಿಯೋ ನೆಟ್ಟಿಗರನ್ನು ಭಾವುಕಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next