ಚೀಲೂರು: ಇಲ್ಲಿನ ಗ್ರಾಪಂ ಅಧ್ಯಕ್ಷೆ ಶೋಭಾ ವಿರುದ್ಧ ವಿದ್ಯುತ್ ಸಾಮಗ್ರಿ ಖರೀದಿಅವ್ಯವಹಾರದ ಆರೋಪ ಕೇಳಿ ಬಂದಿದ್ದು,ಅಧ್ಯಕ್ಷರಿಗೆ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸದಂತೆ ತಾಕೀತು ಮಾಡಿದ ಪ್ರಸಂಗ ಚೀಲೂರು ಗ್ರಾಪಂ ಆವರಣದಲ್ಲಿ ನಡೆದಿದೆ.
ಮರಳವಾಡಿ ಹೋಬಳಿಯ ಚೀಲೂರು ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯಸಭೆಯನ್ನು ಕರೆಯಲಾಗಿತ್ತು. ಈ ಹಿನ್ನೆಲೆಯಲ್ಲಿಸಭೆಗೆ ಆಗಮಿಸಿದ ಸದಸ್ಯ ಲಕ್ಷ್ಮಣ್ ಗೌಡಅವರು, ಅಧ್ಯಕ್ಷರ ವಿರುದ್ಧ ವಿದ್ಯುತ್ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ನಡೆಸಿದಆರೋಪ ಹೊರಿಸಿದರು.
ಪಂಚಾಯಿತಿ ನಿಯಮದ ಪ್ರಕಾರ ಯಾವುದೇ ಸದಸ್ಯರು, ಅಧ್ಯಕ್ಷರು ಅಥವಾ ಯಾವುದೇ ವ್ಯಕ್ತಿಯ ವಿರುದ್ಧ ಅವ್ಯವಹಾರದ ಆರೋಪ ಕೇಳಿಬಂದರೆ ಆ ವಿಷಯ ಚರ್ಚೆ ನಡೆಸುವಾಗ ಆವ್ಯಕ್ತಿ ಸಭೆಯ ಅಧ್ಯಕ್ಷತೆ ವಹಿಸುವಂತಿಲ್ಲ ಎಂಬನಿಯಮದಂತೆ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಬಾರದು ಎಂದು ಆಗ್ರಹಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷೆ,ಆರೋಪಗಳಿಗೆ ಈ ಹಿಂದಿನ ಪಿಡಿಒದಯಾನಂದ ಸಾಗರ್ ಅವರು ಉತ್ತರಿಸಬೇಕು. ನನ್ನ ಗಮನಕ್ಕೆ ತಾರದೇ ಹಲವಾರು ಕೆಲಸ ಮಾಡಿದ್ದಾರೆ ಎಂದು ಸಮಜಾಯಿಸಿ ನೀಡಲೆತ್ನಿಸಿದರು. ಈ ವೇಳೆಸದಸ್ಯ ರವಿಕುಮಾರ್, ಲಕ್ಷ್ಮಣ್ ಗೌಡ ಹಾಗೂ ಬಿ.ಎಂ. ರಾಜು ಅವರು, ಪಿಡಿಒ ಅವರು ತಪ್ಪು ಮಾಡಿರುವುದಕ್ಕೆ ಶಿಕ್ಷೆ ಆಗಿದೆ.
ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ನೀವು ಸಹಿ ಮಾಡದೆಯಾವುದೇ ಕೆಲಸ ನಡೆಯುವುದಿಲ್ಲ, ಹೀಗಿರುವಾಗ ಪಿಡಿಒ ಅವರೊಬ್ಬರೇ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಹೇಳಿದರೆನಂಬುವುದು ಹೇಗೆ ಎಂದು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸದಂತೆ ಆಗ್ರಹ: ಪಿಡಿಒ ಶಿವಮಾದನಾಯ್ಕ ಅವರು ಸದಸ್ಯರಅಭಿಪ್ರಾಯಗಳನ್ನು ಆಲಿಸಿದರು. 21ಸದಸ್ಯರ ಪೈಕಿ 15ಮಂದಿ ಸದಸ್ಯರು ಶೋಭಾಅಧ್ಯಕ್ಷತೆ ವಹಿಸದಂತೆ ಆಗ್ರಹಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುಧಾ ನಾಗೇಶ್, ಸದಸ್ಯ ಹೊನ್ನಗಿರಿಗೌಡ, ಸಂತೋಷ್,ಕೃಷ್ಣಮೂರ್ತಿ, ನೋದ ತಿಮ್ಮಪ್ಪ, ಬಿ.ಎಂ. ರಾಜು, ಗೀತಾ ರಾಜು, ಪಿಡಿಒಶಿವಮಾದನಾಯ್ಕ, ಲೆಕ್ಕಸಹಾಯಕ ಕುಮಾರ್ ಮೊದಲಾದವದ್ದರು.