Advertisement

ಮಕ್ಕಳ ಶಾಲಾ ದಾಖಲಾತಿ ಪ್ರಾರಂಭೋತ್ಸವ

04:27 PM Jun 27, 2021 | Team Udayavani |

ಆಲಮೇಲ: ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆ ಶಾಲೆಯಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ಬೀಳಗಿ ಹೇಳಿದರು. ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2021-22ನೇ ಸಾಲಿನ ದಾಖಲಾತಿ ಪ್ರಾರಂಭೋತ್ಸವದಲ್ಲಿ ಮಾತನಾಡಿದರು.

Advertisement

ಮಕ್ಕಳ ದಾಖಲಾತಿ ಪ್ರಾರಂಭವಾಗಿದ್ದು, ಅರ್ಹ ವಯಸ್ಸಿನ ಎಲ್ಲ ಮಕ್ಕಳು ಶಾಲೆಗೆ ದಾಖಲೆ ಮಾಡಿಕೊಳ್ಳಲು ಅಂಗನವಾಡಿ ಅರ್ಹ ಮಕ್ಕಳು ಮತ್ತು ಪಪಂಯಲ್ಲಿರುವ ಶಿಕ್ಷಣ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಮಾಹಿತಿ ಪಡೆದು ಜನವಸತಿಯ ಎಲ್ಲ ನಾಗರಿಕರಿಗೆ ಶಾಲಾ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿರುವ ಬಗ್ಗೆ ವ್ಯಾಪಕ ಮಾಹಿತಿ ನೀಡಿ ದಾಖಲಾತಿ ಹೆಚ್ಚಿಸಿ ಆದಷ್ಟು ಬೇಗ ಪೂರ್ಣಗೊಳಿಸಿ. ಇಲಾಖೆ ಆದೇಶತೆ ಶಿಕ್ಷಕರು ಶಾಲೆಗಳು ಆರಂಭಗೊಳ್ಳಲು ಕೈಕೊಳ್ಳಬೇಕಾದ ಪೂರ್ವ ಸಿದ್ಧತಾ ಕ್ರಮಗಳು ಮಾಡಿಕೊಂಡಿರಬೇಕು. ಆನ್‌ಲೈನ್‌ ತರಗತಿಗೆ ಅವಶ್ಯಕವಿರುವ ತಂತ್ರಜ್ಞಾನ ಸಾಧನಗಳ ತರಗತಿವಾರು ವಿದ್ಯಾರ್ಥಿಗಳು ಸಮೀಕ್ಷೆ ಮಾಡಿ ಇಲಾಖೆ ನೀಡಿರುವ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳಿ ಎಂದರು.

ಪಟ್ಟಣದಲ್ಲಿ ಬರುವಂತಹ ಶಾಲೆಗಳಿಗೆ ಸಂಬಂಧಿಸಿದ ದಾಖಲಾತಿ ಪ್ರಕ್ರಿಯೆಗಳ ಪರಿಶೀಲನೆಗಾಗಿ ಸಂದರ್ಶನ ನೀಡಿ ಸಂಬಂಧಿಸಿದ ಎಸ್‌ಡಿಎಂಸಿ ಅಧ್ಯಕ್ಷರು, ಪಪಂ ಅಧ್ಯಕ್ಷರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಜತೆ ಶಾಲೆಯ ಅಭಿವೃದ್ಧಿ ಮತ್ತು ದಾಖಲಾತಿ ಬಗ್ಗೆ ಚರ್ಚಿಸಿ ಮಕ್ಕಳ ದಾಖಲಾತಿ ಮಾಡಲು ವಿನಂತಿಬೇಕು ಎಂದು ಹೇಳಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಸ್‌.ಕೆ. ಗುಗ್ಗರಿ, ಆಲಮೇಲದ ಸಿಆರ್‌ಪಿಗಳಾದ ಎಸ್‌.ಎಂ. ಕೂಡಗಿ, ಮರ್ತೂರ, ವಿ.ಡಿ. ಬಮ್ಮನಳ್ಳಿ, ಮುಖ್ಯ ಶಿಕ್ಷಕ ಹಣಮಂತ ಅಗಸರ, ಗಣೇಶ ನಗರ ಶಾಲೆಯ ಎಸ್‌ ಡಿಎಂಸಿ ಅಧ್ಯಕ್ಷ ಶ್ರೀಶೈಲ ಮಠಪತಿ ಹಾಗೂ ಪಟ್ಟಣದ ಸರಕಾರಿ ಅನುದಾನ ಶಾಲೆಯ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next