Advertisement

ಮಕ್ಕಳ ಸ್ಕಾಲರ್‌ಶಿಪ್‌ಗೆ ಜನಸ್ಪಂದನ ಟ್ರಸ್ಟ್‌ನಿಂದ ನೆರವು

03:02 PM Feb 22, 2022 | Team Udayavani |

ತಿಪಟೂರು: ಎನ್‌ಎಂಎಂಎಸ್‌ ಮಕ್ಕಳ ಪ್ರತಿಭೆಗೆ ಸಿಗುವ ಪುರಸ್ಕಾರವಾಗಿದ್ದು, ತಾಲೂಕಿನಲ್ಲಿ ಎನ್‌ಎಂಎಂಎಸ್‌ ಪರೀಕ್ಷೆಗೆ ಒಳಪಡುವ ಎಲ್ಲಮಕ್ಕಳಿಗೂ ಜನಸ್ಪಂದನ ಟ್ರಸ್ಟ್‌ನಿಂದ ಸಂಬಂಧಿಸಿದಕಂಪನಿಗೆ ಹಣ ಪಾವತಿಸಿ ಸ್ಕಾಲರ್‌ಶಿಪ್‌ಪಡೆದುಕೊಳ್ಳಲು ನೆರವು ನೀಡಲಾಗುತ್ತಿದೆ ಎಂದುಜನಸ್ಪಂದನ ಟ್ರಸ್ಟ್‌ನ ಅಧ್ಯಕ್ಷ ಸಿ.ಬಿ. ಶಶಿಧರ್‌ ತಿಳಿಸಿದರು.

Advertisement

ನಗರದ ಠಾಗೂರ್‌ ವಿದ್ಯಾಸಂಸ್ಥೆಯಲ್ಲಿ ನಡೆದ8ನೇ ತರಗತಿ ಮಕ್ಕಳಿಗೆ ವಾರ್ಷಿಕ 12 ಸಾವಿರ ರೂ.ವಿದ್ಯಾರ್ಥಿ ವೇತನ ನೀಡುವ ಎನ್‌ಎಂಎಂಎಸ್‌(ನ್ಯಾಷನಲ್‌ ಮೀನ್ಸ್‌ ಕಮ್‌ ಮೆರಿಟ್‌ ಸ್ಕಾಲರ್‌ಶಿಪ್‌) ಪರೀಕ್ಷೆಗೆ ಉಚಿತ ಆನ್‌ಲೈನ್‌ ಮತ್ತು ಆಫ್ಲೈನ್‌ ತರಗತಿ ಉದ್ಘಾಟಿಸಿ, ಟಿಕ್‌ ಎಕ್ಸಾಮ್‌ ಆ್ಯಪ್‌ಬಿಡುಗಡೆಗೊಳಿಸಿ ನಂತರ ಮಾತನಾಡಿದಅವರು, ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಿದ್ದು,ಸಮಾಜದ ಪ್ರಗತಿಗೆ ಹಾಗೂ ಉತ್ತಮ ಭವಿಷ್ಯಕ್ಕೆಶಿಕ್ಷಣ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿಜನಸ್ಪಂದನ ಟ್ರಸ್ಟ್‌ ಪ್ರತಿಭಾವಂತ ಮಕ್ಕಳಿಗೆಪ್ರೋತ್ಸಾಹ, ಉತ್ತಮ ಅಂಕಗಳನ್ನು ಪಡೆದವರಿಗೆಮುಂದಿನ ವಿದ್ಯಾಭ್ಯಾಸಕ್ಕೆ ಧನ ಸಹಾಯಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದು,ಅದರಂತೆ ಎನ್‌ಎಂಎಂಎಸ್‌ ಪರೀಕ್ಷೆಗೆ ಮಕ್ಕಳಸಿದ್ಧತೆಗಾಗಿ ಟಿಕ್‌ ಎಕ್ಸಾಂ ಕಂಪನಿಯು ಆ್ಯಪ್‌ ಹೊರತಂದಿದೆ ಎಂದರು.

ಟ್ರಸ್ಟ್‌ನಿಂದ ತರಬೇತಿ ಕಾರ್ಯಕ್ರಮ: ಆ್ಯಪ್‌ಗೆ ಹಣ ಪಾವತಿಸಬೇಕಿದ್ದು, ತಾಲೂಕಿನಲ್ಲಿ ಹೆಸರುನೋಂದಾಯಿಸಿಕೊಂಡ ಎಲ್ಲ ಮಕ್ಕಳ ಪರವಾಗಿಜನಸ್ಪಂದನ ಟ್ರಸ್ಟ್‌ ಕಂಪನಿಗೆ ಹಣ ಪಾವತಿಸಿಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಿ ಎಲ್ಲಮಕ್ಕಳಿಗೂ ಸ್ಕಾಲರ್‌ಶಿಪ್‌ ಪಡೆದುಕೊಳ್ಳಲು ಟ್ರಸ್ಟ್‌ನೆರವಾಗುತ್ತಿದೆ. ಎನ್‌ಎಂಎಂಎಸ್‌ ಪರೀಕ್ಷೆಎಷ್ಟೋ ಮಕ್ಕಳಿಗೆ ತಿಳಿದಿಲ್ಲ. ಕಳೆದ ವರ್ಷ ತಾಲೂಕಿನಲ್ಲಿ ಕೇವಲ 11 ವಿದ್ಯಾರ್ಥಿಗಳು ಮಾತ್ರಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ವರ್ಷ ಗುರಿಯನ್ನು ಹೆಚ್ಚಿಸಬೇಕೆಂಬ ಇಚ್ಛೆಯಿಂದಟ್ರಸ್ಟ್‌ನಿಂದ ಈ ತರಬೇತಿ ಕಾರ್ಯಕ್ರಮಆಯೋಜನೆ ಮಾಡಿ ಅರಿವು ಮೂಡಿಸಲಾಗುತ್ತಿದ್ದು, ಫೆ.23ರಂದು ಹೋಬಳಿ ಕೇಂದ್ರವಾದನೊಣವಿನಕೆರೆಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮಅಂಕ ಪಡೆದು ಉತ್ತೀರ್ಣರಾದ ಗ್ರಾಮೀಣಪ್ರದೇಶದ ಹೆಣ್ಣು ಮಕ್ಕಳಿಗೆ ಟ್ರಸ್ಟ್‌ ವತಿಯಿಂದಸ್ಕಾಲರ್‌ಶಿಪ್‌ ನೀಡುವ ಮೂಲಕ ಪ್ರೋತ್ಸಾಹಿÓಲಾಗುವುದು ಎಂದು ತಿಳಿಸಿದರು.

ಟ್ರಸ್ಟ್‌ ಕಾರ್ಯ ಶ್ಲಾಘನೀಯ: ಟಿಕ್‌ ಎಕ್ಸಾಮ್‌ಕಂಪನಿಯ ಮನೋಜ್‌ಕುಮಾರ್‌ ಮಾತನಾಡಿ, ನಮ್ಮ ಸಂಸ್ಥೆ ಐಎಎಸ್‌ನಂತಹ ಉನ್ನತ ತರಬೇತಿ ನೀಡುತ್ತಿದ್ದು ಜೊತೆಯಲ್ಲಿ ಗ್ರಾಮೀಣ ಭಾಗದಮಕ್ಕಳಿಗೆ ಅನುಕೂಲವಾಗಲೆಂದು ಎನ್‌ಎಂಎಂಎಸ್‌ ತರಬೇತಿ ನೀಡಲಾಗುತ್ತಿದೆ. ಇದಕ್ಕೆಪ್ರತಿ ವಿದ್ಯಾರ್ಥಿಗೆ 500 ರೂ. ವೆಚ್ಚ ತಗುಲಲಿದ್ದು,ಇದನ್ನು ಜನಸ್ಪಂದನ ಟ್ರಸ್ಟ್‌ನಿಂದ 350ಕ್ಕೂ ಹೆಚ್ಚುವಿದ್ಯಾರ್ಥಿಗಳ ವೆಚ್ಚನ್ನು ಭರಿಸುತ್ತಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮ: ಜನಸ್ಪಂದನ ಟ್ರಸ್ಟ್‌ನ ಅಲ್ಲಾಬಕಾಶ್‌ ಮಾತನಾಡಿ, ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿಯನ್ನುಸಾಧಿಸಬೇಕೆಂಬ ಉದ್ದೇಶದಿಂದ ಜನಸ್ಪಂದನಟ್ರಸ್ಟ್‌ ಅಧ್ಯಕ್ಷರಾದ ಶಶಿಧರ್‌ ವಿದ್ಯಾರ್ಥಿಗಳಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದರಲ್ಲಿಎನ್‌ಎಂಎಂಎಸ್‌ ಸ್ಕಾಲರ್‌ಶಿಪ್‌ ಒಂದಾಗಿದ್ದು,8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನ ಪಡೆದುಕೊಂಡುಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸ್ಕಾಲರ್‌ಶಿಪ್‌ ಪಡೆದುಕೊಳ್ಳಬೇಕು ಎಂದರು. ಆರ್‌ವೈಟಿಯ ಸೈಯದ್‌ ಸಾದತ್‌ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

Advertisement

ಜನಸ್ಪಂದನ ಟ್ರಸ್ಟ್‌ನ ಶರತ್‌ ಕಲ್ಲೇಗೌಡನಪಾಳ್ಯ, ಸಂತೋಷ್‌, ಅಭಿ,ಜಯಂತ್‌, ಚಂದ್ರಶೇಖರ್‌, ಆರ್‌ವೈಟಿಯ ಲೋಕೇಶ್‌, ತಾಸೀನ್‌ ಶರಿಫ್, ಜುನೇದ್‌,ಶಾಹಿದ್‌, ಕೈಫ್, ಸಲ್ಮಾ, ಆಮ್ರಿàನ್‌, ಹಮೀದಾಷವಾಜ್‌, ವಸೀಲ್‌, ಶಿಕ್ಷಕರಾದ ವನಜಮ್ಮ,ಸೋಮಶೇಖರ್‌ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next