Advertisement

ಒಂದೂವರೆ ಲಕ್ಷಕ್ಕೆ ಮಹೀಂದ್ರಾ ಜೀಪ್‌! ಜಾಲತಾಣಗಳಲ್ಲಿ ಬಾರಿ ಮೆಚ್ಚುಗೆ

01:16 AM Apr 20, 2021 | Team Udayavani |

ಮಲಪ್ಪುರಂ: “ಅಪ್ಪಾ, ಅಪ್ಪಾ ನಂಗೆ ಆಟವಾಡಲು ಜೀಪು ಕೊಡ್ಸಪ್ಪಾ’ ಎಂದು ಸಣ್ಣ ಮಕ್ಕಳು ಅಪ್ಪನಿಗೆ ದುಂಬಾಲು ಬೀಳುವುದು ಸಾಮಾನ್ಯ. ಅಂಗಡಿಗೆ ಹೋಗಿ ಬೇಕಾದ್ದನ್ನು ಅಪ್ಪ ತಂದೇ ತರುತ್ತಾನೆ ಎನ್ನುವುದು ಮಕ್ಕಳಿಗೂ ಗೊತ್ತು.

Advertisement

ಆದರೆ ಕೇರಳದ ಮಲಪ್ಪುರಂ ಜಿಲ್ಲೆಯ ಅರಿಕೋಡೆಯ ಶಕೀರ್‌ ಎಂಬವರು ತನ್ನ ಮಕ್ಕಳಿಗೆ ಮಹೀಂದ್ರಾ ಜೀಪ್‌ ಮಾದರಿಯಲ್ಲಿ ಆಟಿಕೆ ವಾಹನ ನಿರ್ಮಿಸಿದ್ದಾರೆ. ಅದು ಈಗ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದಿದೆ.

1 ಸಾವಿರ ವ್ಯಾಟ್‌ನ ಮೋಟರ್‌ ಅನ್ನು ಜೀಪ್‌ ಪ್ರತಿಕೃತಿಗೆ ಅಳವಡಿಸಿದ್ದಾರೆ. ಅದರಲ್ಲಿ ಪವರ್‌ ಸ್ಟಿಯರಿಂಗ್‌, ಒಂಬತ್ತು ಮ್ಯಾನ್ಯುವಲ್‌ ಗಿಯರ್‌ ಬಾಕ್ಸ್‌, ತೆಗೆದು ಮರು ಜೋಡಿಸಬಲ್ಲ ಹೆಡ್‌ಲೈಟ್‌ಗಳು ಇವೆ. ಮಕ್ಕಳಾದರೆ ಒಟ್ಟು ಎಂಟು ಮಂದಿ ಕೂರಲು ಸಾಧ್ಯವಾಗುತ್ತದೆ. ಐದರಿಂದ ಆರು ವರ್ಷಗಳ ಹಿಂದೆ 1.5 ಲಕ್ಷ ರೂ. ವೆಚ್ಚದಲ್ಲಿ ಅದನ್ನು ಸಿದ್ಧಪಡಿಸಿದ್ದಾರೆ. ಅದು 60-70 ಕಿಮೀ ದೂರದ ವರೆಗೆ ಸಂಚರಿಸುವ ಸಾಮರ್ಥ್ಯ ಅದಕ್ಕಿದೆಯಂತೆ. ಮಲಯಾಳದಲ್ಲಿ ಒಟ್ಟು 15 ನಿಮಿಷಗಳ ವಿವರಣೆಯೂ ಜೀಪ್‌ನ ಬಗ್ಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next