Advertisement

ಪ್ರವಾಸ ದಿಂದ ಮಕ್ಕಳ ಮಾನಸಿಕ ಸಾಮರ್ಥ್ಯ ವೃದ್ಧಿ: ಮೇತ್ರಿ

11:54 AM Jan 05, 2018 | Team Udayavani |

ಅಫಜಲಪುರ: ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಮಕ್ಕಳ ಬುದ್ಧಿ ಶಕ್ತಿ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಪ್ರವಾಸ ಹೋಗುವುದರಿಂದ ಮಕ್ಕಳ ಮಾನಸಿಕ ಸಾಮರ್ಥ್ಯ ವೃದ್ಧಿಯಾಗಿ ಹೆಚ್ಚಿನ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಜಿಪಂ ಕಲಬುರಗಿ, ಅಫಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನವತಿಯಿಂದ 2017-18ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿ ಅವರ ಮಾತನಾಡಿದರು.

ಪ್ರೌಢಶಾಲಾ ಮಕ್ಕಳಿಗೆ ಪ್ರವಾಸ ಹಮ್ಮಿಕೊಂಡಿದ್ದು ಒಳ್ಳೆಯ ವಿಚಾರವಾಗಿದೆ. ಪ್ರೌಢಶಾಲಾ ಮಟ್ಟದಲ್ಲಿ ಇತಿಹಾಸದಲ್ಲಿ ಬರುವ ಸ್ಥಳ, ಸ್ಮಾರಕಗಳು, ಕೋಟೆ ಕೊತ್ತಲುಗಳನ್ನು ಖುದ್ದಾಗಿ ತೋರಿಸಿ ಅವುಗಳ ಸಂಪೂರ್ಣ ಇತಿಹಾಸವನ್ನು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಇದರಿಂದ ಮಕ್ಕಳು ಪುಸ್ತಕದಲ್ಲಿ ನೋಡಿದ ಸ್ಥಳಗಳನ್ನು ಖುದ್ದಾಗಿ ನೋಡಿ ಅನುಭವಿಸುತ್ತಾರೆ. ಅಲ್ಲದೆ ಅವುಗಳ ಸಂಪೂರ್ಣ ಮಾಹಿತಿ ಅರಿತುಕೊಳ್ಳುತ್ತಾರೆ. ಹೀಗಾಗಿ ಪ್ರವಾಸದಿಂದ ಹೆಚ್ಚಿನ ಅನುಕೂಲಗಳಾಗಲಿದೆ ಎಂದು ಹೇಳಿದರು.

ಬಿಇಒ ವಸಂತ ರಾಠೊಡ ಮಾತನಾಡಿ, ತಾಲೂಕಿ ನಿಂದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಒಟ್ಟು 203 ಮಕ್ಕಳು ಆಯ್ಕೆಯಾಗಿದ್ದಾರೆ. ಪ್ರವಾಸಕ್ಕಾಗಿ ಈಶಾನ್ಯ ಸಾರಿಗೆಯ
ನಾಲ್ಕು ಬಸ್‌ ಬಳಸಿಕೊಳ್ಳಲಾಗುತ್ತಿದೆ. ರಾಜ್ಯದ ಐತಿಹಾಸಿಕ ಸ್ಥಳಗಳಾದ ಮೈಸೂರು, ಮೇಲುಕೋಟೆ, ಶ್ರವಣಬೆಳಗೋಳ, ಹಂಪಿ, ಬೇಲೂರು, ಹಳೇಬೀಡು, ಆಲಮಟ್ಟಿ ಸೇರಿದಂತೆ ಅನೇಕ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸಲಾಗುತ್ತದೆ ಎಂದು ಹೇಳಿದರು.

ಮುಖಂಡರಾದ ಶಿವಪುತ್ರಪ್ಪ ಕರೂರ, ಮಲ್ಲಿನಾಥ ಪಾಟೀಲ, ಬಿ.ವೈ. ಪಾಟೀಲ, ಕಲ್ಯಾಣರಾವ ಬಿರಾದಾರ, ದೇವೇಂದ್ರ ಜಮಾದಾರ, ಅಂಜು ಕುಲಕರ್ಣಿ, ಸಿದ್ದು ಹಳಗೋ, ಶರಣಬಸಪ್ಪ ಪಡಶೇಟ್ಟಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ದೊಡ್ಮನಿ, ಮುಖ್ಯಗುರು ಮಹಾದೇವಪ್ಪ ತಾಂಬೆ ಸೇರಿದಂತೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next