Advertisement
ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.ಉಡುಪಿ ಜಿಲ್ಲೆಯಲ್ಲಿ ನಿತ್ಯ 10 ಸಾವಿರ ಡೋಸ್ ಲಸಿಕೆ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಸೂಕ್ತ ಚಿಕಿತ್ಸೆಗೆ ಕ್ರಮ, ಉಡುಪಿಯ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮರಳಿ ಸರಕಾರ ವಶಕ್ಕೆ ಪಡೆಯುವುದಕ್ಕೂ ನಿರ್ಣಯಿಸಲಾಗಿದೆ.
ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸಿಆರ್‌ಎಸ್ ನಿಧಿಯಡಿ ಆಮ್ಲಜನಕ ಉತ್ಪಾದನ ಘಟಕಗಳನ್ನು ಸ್ಥಾಪಿಸಿ ಜುಲೈ ಅಂತ್ಯದೊಳಗೆ ಆರಂಭಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ 30 ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಐಸಿಯು ಹಾಸಿಗೆಗಳನ್ನು ಅಭಿವೃದ್ಧಿಪಡಿಸಬೇಕು. ಇವುಗಳ ಕನಿಷ್ಠ ಐದು ಮಕ್ಕಳ ಹಾಸಿಗೆ ಆಗಿರಬೇಕು. ಈ ಎಲ್ಲ ಪ್ರಕ್ರಿಯೆಗಳು ಇನ್ನೆರಡು ತಿಂಗಳಲ್ಲಿ ಪೂರ್ಣ ಗೊಳ್ಳಬೇಕು ಎಂದು ಸಚಿವರು ಸೂಚಿಸಿದರು. 3-4 ತಿಂಗಳಲ್ಲಿ ಲಸಿಕೆ ಪೂರ್ಣ
ಹೆಚ್ಚು ಸಂಖ್ಯೆಯಲ್ಲಿ ಲಸಿಕೆ ವಿತರಿಸುವ ಮೂಲಕ ಮೂರ್‍ನಾಲ್ಕು ತಿಂಗಳೊಳಗೆ ಈ ಪ್ರಕ್ರಿಯೆ ಮುಗಿಸಬಹುದು. 10 ಲಕ್ಷ ಜನಸಂಖ್ಯೆಗೆ 20 ಲಕ್ಷ ಡೋಸ್ ಲಸಿಕೆ ಅಗತ್ಯವಿದೆ.
Related Articles
ಕರಾವಳಿಗೆ ಸಂಬಂಧಿಸಿ ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಸ್ಪಂದನ ಘಟಕ (ಎಸ್‌ಡಿಆರ್‌ಎಫ್) ಗಳೆರಡೂ ಮಂಗಳೂರಿನಲ್ಲಿ ಇರುವುದರಿಂದ ಎಸ್‌ಡಿ ಆರ್‌ಎಫ್ ಘಟಕವನ್ನು ಉಡುಪಿಗೆ ಸ್ಥಳಾಂತ ರಿಸುವುದಾಗಿ ಬೊಮ್ಮಾಯಿ ಪ್ರಕಟಿಸಿದರು.
Advertisement