Advertisement

ಮಕ್ಕಳ ಭವಿಷ್ಯ:ಮೇ-ಅಗಸ್ಟ್‌ 

12:34 PM Jun 16, 2018 | |

ರಾಶಿಯ ಆಧಾರದ ಮೇಲೆ, ಜನ್ಮದಿನಾಂಕದ ಲೆಕ್ಕಾಚಾರದ ಮೇಲೆ ಮಕ್ಕಳ ಭವಿಷ್ಯ ತಿಳಿಯುವ ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ ಹೇಗಿರುತ್ತೆ ಎಂಬ ವಿವರಣೆ. ನಿಮ್ಮ ಮಗು ಕೂಡ ಇಲ್ಲಿರುವ ವಿವರಣೆಯ ಗುಣ ಹೊಂದಿರಬಹುದು; ಗಮನಿಸಿ..

Advertisement

ಮೇ
 ಕಾಲಿಗೆ ಚಕ್ರ ಕಟ್ಟಿಕೊಂಡ ಥರಾ ಮನೆಯೆಲ್ಲಾ ರೌಂಡ್‌ ಹೊಡೆಯೋದು ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸ್ಪೆಷಾಲಿಟಿ. ಅಷ್ಟೆಲ್ಲ ಸುತ್ತಿದ್ರೂ ಸುಸ್ತಾಯ್ತು ಅನ್ನಲ್ಲ. ಮನೇಲಿ ಇರೋದಕ್ಕಿಂತ ಹೊರಗೆ ಇರೋದನ್ನೇ ತುಂಬಾ ಇಷ್ಟ ಪಡುತ್ತವೆ. ಕಲಿಕೆಯಲ್ಲಿ ವಿಪರೀತ ಕುತೂಹಲ, ಆಸಕ್ತಿ. ಜತೆಗೆ ಸ್ವಲ್ಪ ಸೋಂಬೇರಿತನವೂ ಇರುತ್ತೆ. ಸ್ವಲ್ಪ ಪೊಸೆಸೀವ್‌ ನೆಸ್‌. ನಮ್ಮ ಅಪ್ಪ-ಅಮ್ಮನೇ ಗ್ರೇಟು. ಮುಂದೆ ನಾನು ಅಪ್ಪನ ಥರಾನೇ, ಇಲ್ಲಾ ಅಂದ್ರೆ ಅಮ್ಮನ ಥರಾನೇ ಆಗ್ತೀನೆ ಅಂತ ಹಟ ಹಿಡಿಯುತ್ತವೆ. ಅತಿ ಭಾವುಕತೆ ಈ ಮಕ್ಕಳ ನೆಗೆಟಿವ್‌ ಪಾಯಿಂಟ್‌. ತುಂಬ ಚಿಕ್ಕ ವಿಷಯಕ್ಕೂ ಅರ್ಧ ಗಂಟೆ, ಅತ್ತುಬಿಡ್ತವೆ. ಬೈಕ/ಕಾರ್‌ ನಲ್ಲಿ ಇಂಥವರು ಇಲ್ಲೇ ಕೂತ್ಕೊàಬೇಕು ಅಂತ ಕೂಡ ಹೇಳುವ ಗುಣ ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳದ್ದು

ಜೂನ್‌
 ಈ ತಿಂಗಳಲ್ಲಿ ಹುಟ್ಟಿದ ಮಕ್ಕಳು ಎಂಥ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳಲ್ಲ.
ಅರೆ, ಈ ಮಗೂಗೆ ಸಿಟ್ಟೇ ಬರಲ್ವ ಅನ್ಕೋಬೇಕು, ಹಾಗಿರ್ತವೆ. ಯಾವುದೇ ಕೆಲಸ ಆಗ್ಲಿ;
ಮನಸ್ಸು ಬಂದ್ರೆ ಮಾತ್ರ ಮಾಡ್ತವೆ. ಸ್ವಾರಸ್ಯ ಏನಪಾ ಅಂದ್ರೆ, ಏಕಕಾಲಕ್ಕೆ ಎರಡೂ¾ರು
ಕೆಲಸ ಮಾಡೋಕೆ ಹೋಗ್ತವೆ. ಅಂದ್ರೆ ಓದೋಕೆ ಕೂತಾಗ ಕೂಡ ಲೈಟ್‌ ಮ್ಯೂಸಿಕ್‌ ಇರಲಿ ಅನ್ನೋದು; ಟಿ.ವಿ. ನೋಡಿಕೊಂಡೇ ಹೋಂ ವರ್ಕ್‌ ಮುಗಿಸೋದು…ಹೀಗೆಲ್ಲಾ ಇರುತ್ತೆ ವರ್ತನೆ. ಜತೆಗೆ, ನಾನು ಅವರ ಥರಾ ಆಗಬೇಕು, ಇವರ ಥರಾ ಆಗಬೇಕು ಅಂತ ಕನಸು ಕಾಣೋದು; ಅದನ್ನೇ ಅಪ್ಪ-ಅಮ್ಮ, ಬಂಧುಗಳ ಜತೆ ಹೇಳಿಕೊಳ್ಳೋದು-ಜೂನ್‌ ತಿಂಗಳಲ್ಲಿ ಹುಟ್ಟಿದ ಮಕ್ಕಳ ಇನ್ನೊಂದು ಗುಣ.

ಜುಲೈ
 ಹೊಡೆದ್ರೆ ಹೊಡೆಸ್ಕೊಳ್ತವೆ. ಬೈತೀರಾ? ಬೈಸ್ಕೋತವೆ. ಗೆಟ್‌ ಔಟ್‌ ಅಂದ್ರೆ-ಮನೆಯಿಂದ ಹೊರಗೆ ಹೋಗಿ ಸಪ್ಪೆ ಮೋರೆಯಲ್ಲಿ ನಿಂತುಬಿಡ್ತವೆ. ಯಾರೊಂದಿಗೆ ಬೇಕಾದ್ರೂ ಫ್ರೆಂಡಿÏಪ್‌ ಬೆಳೆಸಿಕೊಳ್ತವೆ. ತುಂಬಾ ಹಾರ್ಡ್‌ ವರ್ಕ್‌ ಮಾಡ್ತವೆ ನಿಜ. ಆದ್ರೆ ಉಡಾಫೆ ವರ್ತನೆಯಿಂದ ಬೈಸಿಕೊಳ್ತವೆ. ಸ್ಕೂಲಲ್ಲಿ, ಜತೆಗಿದ್ದವರು ಹೊಡೆದ್ರೆ ಹೊಡೆಸಿಕೊಂಡು ಬರ್ತವೇ ವಿನಃ ತಿರುಗಿ ಬಾರಿಸೋದಿಲ್ಲ. ಸೇಡು ತೀರಿಸ್ಕೋಬೇಕು ಅನ್ನೋ ಹಟ ಜುಲೈನಲ್ಲಿ ಹುಟ್ಟುವ ಮಕ್ಕಳಿಗೆ ಇರೋದಿಲ್ಲ. ಜತೆಗಿರುವ ಹಿರಿ, ಕಿರಿಯರ
ನಡವಳಿಕೆಯನ್ನು ಹುಶಾರಾಗಿ ಗಮನಿಸ್ತಾ ಇರ್ತವೆ. ಅಗತ್ಯ ಬಂದಾಗ- ನೀವು ಮಾಡ್ತಿರೋದು ಸರಿಯಲ್ಲ ಎಂದು ಜಡ್ಜ್ ಥರಾ ತೀರ್ಪು ಕೊಡ್ತವೆ!
 ಹಳೆಯ ಫ್ರೆಂಡ್ಸ್‌, 
ಯಾವತ್ತೋ ತಿಂದಿದ್ದ ರವೆ ಉಂಡೆ, ಅಜ್ಜಿ ಹೇಳಿದ್ದ ಕತೆ, ಚಿಕ್ಕಪ್ಪ ಕೊಟ್ಟ ಏಟು, ಹಳೆಯ ಮೊಬೈಲ್ನ ಕಲರ್‌, ನಾಯಿಮರಿ ಸತ್ತ ಸಂದರ್ಭ, ಒಂದನೇ ಕ್ಲಾಸಲ್ಲಿ ನೋಡಿದ್ದ ಸಿನಿಮಾ ಹೀಗೆ ಪ್ರತಿಯೊಂದನ್ನೂ ನೆನಪಿಟ್ಟಿರ್ತವೆ. ವಿಪರೀತ ಸೆಂಟಿಮೆಂಟ್‌. ಮನೆಗೆ ನೆಂಟರು ಬಂದ್ರೆ- ಅವರು ನನ್ನ ಜತೆಗೇ ಇರಲಿ ಅಂತ ಹಟ ಹಿಡೀತವೆ. ಮನೇಲಿ ಯಾರಿಗಾದ್ರೂ ಹುಶಾರಿಲ್ಲ ಅಂದ್ರೆ ವಿಪರೀತ ಕೇರ್‌ ತಗೊಳ್ಳೋದು; ಇನ್ನೊಬ್ಬರ ಸಂಕಟಕ್ಕೆ ಕರಗುವುದು – ಇದೆಲ್ಲಾ  ಜುಲೈನಲ್ಲಿ ಹುಟ್ಟಿದ ಮಕ್ಕಳ ಹೆಚ್ಚುಗಾರಿಕೆ.

ಆಗಸ್ಟ್‌
 ಈ ತಿಂಗಳಲ್ಲಿ ಹುಟ್ಟಿದ ಮಕ್ಕಳಿಗೆ ವಿಪರೀತ ಆತ್ಮವಿಶ್ವಾಸ, ಮುಳ್ಳನ್ನು
ಮುಳ್ಳಿಂದ್ಲೇ ತೆಗೀಬೇಕು ಅನ್ನೋದು ಇವರ ವಾದ. ಸೇಡಿನ ಮನೋಭಾವ ಜಾಸ್ತಿ. ಜತೆಗಿರುವ ಎಲ್ಲರನ್ನೂ ಗುಮಾನಿಯಿಂದ ನೋಡ್ತವೆ. ಯಾರ ಹಂಗಿಗೂ ಒಳಪಡದೆ ಸ್ವತಂತ್ರವಾಗಿರೋಕೆ ಇಷ್ಟಪಡ್ತವೆ. ಹಗಲು ಗನಸಿನಲ್ಲಿ ವಿಹರಿಸೋದು ಜಾಸ್ತಿ.  ಸುಳ್ಳು ಹೇಳ್ಳೋರನ್ನು ಕಂಡರೆ ಮುಲಾಜಿಲ್ಲದೆ ಖಂಡಿಸುತ್ತವೆ. ಒಂದು ಚೌಕಟ್ಟಿಗೆ, ಶಿಸ್ತಿಗೆ ಕಟ್ಟುಪಾಡಿಗೆ ಸಿಕ್ಕಿಬೀಳೊಲ್ಲ. ಭವಿಷ್ಯದಲ್ಲಿ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ  ಅಂದಾಜು ಮಾಡ್ತಾ ಇರ್ತವೆ. ತಮ್ಮನ್ನು ತಾವೇ ಮಹಾನ್‌ ಸಾಹಸಿ ಎಂದು ಹೊಗಳಿಕೊಂಡು ಖುಷಿಪಡ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next