Advertisement
ಆಟೋಟದಲ್ಲಿ ಮಿಂಚಿದರು: ಅವರೆಲ್ಲರೂ ಮನೆಯಿಲ್ಲದೆ ಅಲೆಮಾರಿ ಜೀವನ ಸಾಧಿಸುವ ಮಕ್ಕಳು, ಊರೂರು ಸುತ್ತುತ್ತಾ ಬದುಕು ಸಾಗಿಸುವ ಪುಟಾಣಿಗಳು ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದರು. ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ(ಆರ್‌ಎಲ್‌ಎಚ್‌ಪಿ)ಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಚರಿಸಲಾದ ವಿವಿಧ ಆಟೋಟ ಸ್ಪರ್ಧೆಗಳು ಎಲ್ಲರ ಗಮನ ಸೆಳೆಯಿತು.
Related Articles
Advertisement
ಮಾಧ್ಯಮಿಕ ವಿಭಾಗದಲ್ಲಿ ಎಂ.ರಾಜು(ಪ್ರ), ರವಿತೇಜ(ದ್ವಿ) ಹಾಗೂ ದರ್ಶನ್(ತೃ) ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಸಾಯಿರಂಗ ಶಾಲೆಯ ಗೌತಮ್, ಯುವರಾಜ್ ಹಾಗೂ ಪುಟ್ಟವೀರಮ್ಮ ಶಾಲೆಯ ಮೋನಿಶಾ ಮೊದಲ 3 ಬಹುಮಾನ ತಮ್ಮದಾಗಿಸಿಕೊಂಡರು. ಈ ವೇಳೆ ಮೈಸೂರು ಅಮಿಟಿರೌಂಡ್‌ಟೇಬಲ್ ಇಂಡಿಯಾದ ಅಧ್ಯಕ್ಷ ಅನಿರುದ್ಧ, ಪ್ರದೇಶ ಚೇರ್ಮನ್, ಮಯೂರ್ ಇದ್ದರು.
ಕಾಗದದ ದೋಣಿ ಬಿಟ್ಟರು: ರಾಜ್ಯ ಸರ್ಕಾರ ಮೈಸೂರು ನಗರದ ರಸ್ತೆಗಳಲ್ಲಿರುವ ಗುಂಡಿ ಮುಚ್ಚಬೇಕೆಂದು ಒತ್ತಾಯಿಸಿ ಮಕ್ಕಳು ರಸ್ತೆಯಲ್ಲಿನ ಗುಂಡಿಗಳಿಗೆ ನೀರು ತುಂಬಿ ಕಾಗದದ ದೋಣಿ ಬಿಟ್ಟು ಆಟವಾಡಿದರು. ನಗರದ ಪ್ರಜಾnವಂತ ನಾಗರಿಕ ವೇದಿಕೆ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಮಹಾರಾಜ ಕಾಲೇಜು ಮೈದಾನದ ಪಕ್ಕದ ರಸ್ತೆಯ ಗುಂಡಿಗಳಿಗೆ ನೀರು ತುಂಬಿ ಕಾಗದದ ದೋಣಿ ತೇಲಿಬಿಟ್ಟರು.
ಪ್ರಜಾವಂತ ನಾಗರಿಕ ವೇದಿಕೆ ಅಧ್ಯಕ್ಷ ಜಗದೀಶ್ ಕಡಕೊಳ, ಕೆಎಂಪಿಕೆ ಚಾರಿಟಬಲ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿಜೆಪಿ ಮುಖಂಡ ಜೋಗಿಮಂಜು, ರಾಜೇಶ್, ಶ್ರೀಕಾಂತ್ ಕಶ್ಯಪ್, ಮೋಹನ್, ರಾಜಶೇಖರ್, ಮಕ್ಕಳಾದ ಶೀತಲ್, ಸಂಜನಾ, ರಮ್ಯಾ, ರಾಜೇಶ, ಗಗನ್ ಇದ್ದರು.