ಹಾವೇರಿ: ಕೊರೊನಾದಿಂದ ಬಂದ್‌ಆಗಿದ್ದ ಹಿರಿಯ ಪ್ರಾಥಮಿಕ ಶಾಲೆಗಳುಒಂದೂವರೆ ವರ್ಷದ ಬಳಿಕ ಸೋಮವಾರಆರಂಭಗೊಂಡಿದ್ದರಿಂದ ಶಾಲೆಗಳಿಗೆ ಜೀವ ಕಳೆಬಂದಂತಾಗಿದೆ. 6ರಿಂದ 8ನೇ ತರಗತಿ ವರೆಗೆ ಭೌತಿಕ ತರಗತಿಗಳು ಶುರುವಾಗಿದ್ದು, ಜಿಲ್ಲೆಯಎಲ್ಲ ಶಾಲೆಗಳಲ್ಲಿ ಮೊದಲ ದಿನ ವಿದ್ಯಾರ್ಥಿಗಳನ್ನುಸಂಭ್ರಮದಿಂದ ಸ್ವಾಗತಿಸಲಾಯಿತು.
ವಿದ್ಯಾರ್ಥಿಗಳಿಗೆ ಸ್ವಾಗತಕೋರುವ ರಂಗೋಲಿಚಿತ್ತಾರ ಬಿಡಿಸಿ, ಮಕ್ಕಳಿಗೆ ಹೂವು, ಸಿಹಿ ನೀಡಿಶಿಕÒಕರು ಆತ್ಮೀಯವಾಗಿ ಸ್ವಾಗತ ಕೋರಿದರು.ಕಳೆದಆ.23ರಿಂದ9ರಿಂದ12ನೇತರಗತಿವರೆಗೆಶುರುವಾಗಿದ್ದು, ಸೋಮವಾರದಿಂದ ಹಿರಿಯಪ್ರಾಥಮಿಕ ಶಾಲೆಗಳೂ ಆರಂಭಗೊಂಡಂತಾಗಿದೆ.
ಜಿಲ್ಲೆಯಲ್ಲಿ 6ರಿಂದ 8ನೇ ತರಗತಿವರೆಗೆ 81ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು,ಮೊದಲ ದಿನ ಶೇ.40ಕ್ಕೂ ಹೆಚ್ಚು ವಿದ್ಯಾರ್ಥಿಗಳುಆಗಮಿಸಿದ್ದರು. ಗ್ರಾಮೀಣ ಭಾಗದಲ್ಲಿಶೇ.50ರಷ್ಟು ವಿದ್ಯಾರ್ಥಿಗಳ ಹಾಜರಾತಿಯಿತ್ತು.
ಜೂನ್ ಬಳಿಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆನಡೆಸಿ ಆನ್‌ಲೈನ್ ತರಗತಿ ನಡೆಸಲಾಗುತ್ತಿತ್ತು.ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಮೂರುತಿಂಗಳ ಬಳಿಕ ಶಾಲೆ ಶುರುವಾಗಿದ್ದು, ಮಕ್ಕಳುಸಂಭ್ರಮದಿಂದಲೇ ಶಾಲೆಗೆಆಗಮಿಸಿದರು. ನಗರಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಸಂಖ್ಯೆ ಕಡಿಮೆಯಿತ್ತು.
ಮಕ್ಕಳಿಗೆ ಸಂಭ್ರಮದ ಸ್ವಾಗತ: ಮೊದಲದಿನ ಮಕ್ಕಳು ಸಂಭ್ರಮದಿಂದಲೇ ಶಾಲೆಗೆಆಗಮಿಸಿದರು. ಶಾಲೆಗಳು ರಂಗೋಲಿ, ತಳಿರುತೋರಣಗಳಿಂದಕಂಗೊಳಿಸುತ್ತಿದ್ದು,ಕಳೆದಎರಡುದಿನಗಳಿಂದ ಶಾಲಾ ಆವರಣ, ಕೊಠಡಿಗಳಿಗೆಸ್ಯಾನಿಟೈಸ್ ಮಾಡಿ ಸಿದ್ಧಗೊಳಿಸಲಾಗಿತ್ತು.ಎಲ್ಲ ಮಕ್ಕಳು ಮಾಸ್ಕ್ ಧರಿಸಿ ಶಾಲೆಗೆಆಗಮಿಸಿದರು. ಮೊದಲ ದಿನ ಮಕ್ಕಳಿಗೆ ಪುಸ್ತಕನೀಡಿ, ಶಾಲೆಯಲ್ಲಿ ಕೋವಿಡ್ ನಿಯಮಯಾವ ರೀತಿ ಪಾಲಿಸಬೇಕು ಎಂಬುದನ್ನುತಿಳಿಸಲಾಯಿತು. ಪ್ರವೇಶ ದ್ವಾರದಲ್ಲೇ ಪ್ರತಿವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್‌ಸ್ಕ್ರೀನಿಂಗ್ ಮಾಡಲಾಯಿತು.
15ರಿಂದ 20 ಮಕ್ಕಳಿಗೆ ಒಂದು ತರಗತಿಕೋಣೆಯಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದ್ದು,ಮಕ್ಕಳ ಸಂಖ್ಯೆ ಹೆಚ್ಚಿರುವ ಕಡೆ ಪ್ರತ್ಯೇಕಕೋಣೆಗಳಲ್ಲಿ ಕೂರಿಸಿದರು. ಆನ್‌ಲೈನ್‌ಪಾಠ ಮಾಡಿ ಬೇಸತ್ತಿದ್ದ ಶಿಕÒಕರು ಕೂಡಸಂಭ್ರಮದಿಂದಲೇ ಮಕ್ಕಳನ್ನು ಸ್ವಾಗತಿಸುತ್ತಿದ್ದದೃಶ್ಯ ಎಲ್ಲ ಶಾಲೆಗಳಲ್ಲಿ ಕಂಡುಬಂದವು.