Advertisement

ಮಕ್ಕಳ ದಿನಾಚರಣೆ 2019; “ಮಕ್ಕಳ ಮುಖದಲ್ಲಿ ನಗು ತಂದ ಮಕ್ಕಳ ದಿನ”

12:38 PM Nov 18, 2019 | Nagendra Trasi |

ಎಲ್ಲೆಡೆ ಮಕ್ಕಳ ದಿನಾಚರಣೆಯನ್ನು ಆಚರಿಸುವುದನ್ನು ನೋಡುವಾಗ ಎಲ್ಲರಿಗೂ ಒಂದು ಕ್ಷಣ ತಮ್ಮ ಬಾಲ್ಯದ ದಿನಗಳು ನೆನೆದು ಕಿರಿಯರಾಗುತ್ತಾರೆ. ಹಿರಿಯರೂ ಕೂಡಾ ಮಕ್ಕಳ ದಿನಾಚರಣೆಯನ್ನು ತಾವು ಹೇಗೆ ಆಚರಿಸುತ್ತಿದ್ದೇವು ಎಂದು ಮೆಲಕು ಹಾಕುತ್ತಾರೆ. ಶಿಕ್ಷಕರಂತೂ ನವೆಂಬರ್ 1ರಿಂದಲೇ ಶಾಲೆಗಳಲ್ಲಿ ಮಕ್ಕಳ ದಿನ ಆಚರಿಸಲು ಎಲ್ಲಾ ರೀತಿಯ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನೂ ಮಕ್ಕಳ ಖುಷಿಯನ್ನು ಕೇಳುವಂತೆಯೇ ಇಲ್ಲ ಬಿಡಿ.

Advertisement

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಾದ್ಯಂತ ನವೆಂಬರ್ 14 ರಂದು ಮಕ್ಕಳ ದಿನಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಪುಟಾಣಿಗಳೆಲ್ಲ ಶಾಲೆಗೆ ಹೋಗಿ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.

ಅಂದು ಪುಟಾಣಿಗಳು ನೃತ್ಯ, ಸಂಗೀತ, ನಾಟಕ, ಆಟ ಎಂದೆಲ್ಲಾ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಿ ಸಂತೋಷ ಪಡುತ್ತಾರೆ. ಶಾಲೆಗಳಲ್ಲಿ ಕೆಲವು ಗಂಟೆಗಳ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ರಜೆ ನೀಡಲಾಗುತ್ತದೆ.ಮಕ್ಕಳ ದಿನಾಚರಣೆಯಂದು ಕೇವಲ ಮಕ್ಕಳು ಮಾತ್ರವಲ್ಲ ಶಿಕ್ಷಕರು ಕೂಡ ಸಂತೋಷದಿಂದ ದಿನ ಕಳೆಯುತ್ತಾರೆ.

ಪ್ರತಿ ಮಗುವು ಮುಗ್ಧತೆ, ಕ್ಷಮಾಗುಣ, ಸ್ನೇಹ, ಕಾಳಜಿ, ಕ್ರಿಯಾಶೀಲತೆ ಮತ್ತು ಅಪರಿಮಿತ ಪ್ರೀತಿಯ ಪ್ರತೀಕವಾಗಿರುತ್ತಾರೆ. ಒಂದು ಮಗು ಕನಸು ಕಂಡರೆ ಅದರಿಂದಾಗಿ ಇಡೀ ರಾಜ್ಯವು ಪ್ರಗತಿ ಕಾಣುತ್ತದೆ ಹಾಗಾಗಿ ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಬೇಕು, ಭವಿಷ್ಯದ ಬಗ್ಗೆ       ಕನಸುನ್ನು ಕಾಣುವಂತೆ ಪೋತ್ಸಹಿಸಬೇಕು.

ಪ್ರತಿಯೊಬ್ಬರೊಳಗೂ ಒಂದು ಮಗುವಿನ ಮನಸ್ಸಿರುತ್ತದೆ ಅದನ್ನು ಎಂದಿಗೂ ಸಾಯುವುದಕ್ಕಾಗಲಿ, ಖಿನ್ನವಾಗುವುದಕ್ಕಾಗಲಿ ಬಿಡಬಾರದು. ಮಕ್ಕಳಂತ ಮನಸ್ಸಿರುವುದರಿಂದ ಯಾವಾಗಲೂ ಖುಷಿಯಿಂದ ಇರಬಹುದು. ಮಕ್ಕಳೊಂದಿಗೆ ಮಕ್ಕಳಾಗಿ ಇರಬೇಕು ಆಗ ನೋಡುವ ಪ್ರಪಂಚ ಇನ್ನಷ್ಟು ಸುಂದರವಾಗಿ ಕಾಣುತ್ತದೆ.

Advertisement

ರಮ್ಯ.ಬಿ

ಎಂ.ಜಿ.ಎಂ.ಕಾಲೇಜು

ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next