Advertisement

ಮಕ್ಕಳ ದಿನಾಚರಣೆ 2019; ಬಾಲ್ಯವೆಂದರೆ ಹೂವಿನ ಹಾಗೆ…

12:39 PM Nov 18, 2019 | Nagendra Trasi |

ಪ್ರತಿಯೊಬ್ಬರೂ ಮತ್ತೆ ಮತ್ತೆ ಬಯಸುವುದು ಬಾಲ್ಯವನ್ನು. ಅದರ ಸೌಂದರ್ಯವೇ ಬೇರೆ. ನಾವೆಲ್ಲರೂ ಬಾಲ್ಯ ಸಹಜ ತುಂಟಾಟಗಳನ್ನು  ಮಾಡಿರುತ್ತೇವೆ. ಅದೇ ನಮ್ಮ ಬಾಲ್ಯವನ್ನು ಅಂದ ಗೊಳಿಸಿರುವುದು.

Advertisement

ಪ್ರತಿವರ್ಷ ‘ ಮಕ್ಕಳ ದಿನಾಚರಣೆ ‘ ಬಂದಾಗ ನನ್ನ ಬಾಲ್ಯದ ದಿನಗಳು ಕಣ್ಮುಂದೆ ಬರುತ್ತವೆ. ಶಾಲಾ ದಿನಗಳಲ್ಲಿ ಮಕ್ಕಳ ದಿನಾಚರಣೆ ಬಂತು ಎಂದರೆ ಅಂದಿನ ಖುಷಿಯೇ ಬೇರೆ.  ನಾವೆಲ್ಲಾ ಹೊಸ ಬಟ್ಟೆ ಧರಿಸಿ ಶಾಲೆಗೆ ಹೋಗುತ್ತಿದ್ದೇವು. ನಮಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ನಾವೂ ಮುಗ್ಧವಾಗಿ ನೃತ್ಯ ಮಾಡುತ್ತಿದ್ದೇವು. ಅದನ್ನು ನೆನೆಸಿಕೊಂಡರೆ ಈಗಲೂ ನಗುವುಕ್ಕಿ ಬರುತ್ತದೆ. ಆದರೆ ಆಗ ಅದೇ ನಮಗೊಂದು ಹೆಮ್ಮೆ ತರುತ್ತಿತ್ತು.

ಈಗಲೂ ಮಕ್ಕಳ ದಿನಾಚರಣೆ ಬಂದಾಗ ನಮ್ಮ ಶಾಲೆಗೆ ಹೋಗಿ ಬರುತ್ತೇನೆ. ಅಲ್ಲಿ ಪುಟ್ಟ ಪುಟ್ಟ ಮಕ್ಕಳು ಮುಗ್ಧವಾಗಿ ನೃತ್ಯ ಮಾಡುವಾಗ ಮನಸ್ಸು ಗರಿಗೆದರಿ ಕುಣಿಯುತ್ತದೆ. ಬಾಲ್ಯವೆಂದರೆ ಹೂವಿನ ಹಾಗೆ. ಒಂದು ದಿನ ಮಾತ್ರ ನನ್ನ ಜೀವನ ಎಂದು ಗೊತ್ತಿದ್ದರೂ ನಗುತ್ತಲೇ ಇರುತ್ತದೆ. ಆದರೆ ಹೂವಿನ ಅಂದ ಮಾತ್ರ ಅದು ಅಳಿದರೂ ಉಳಿದಿರುತ್ತದೆ.

*ಟಿ. ವರ್ಷಾ ಪ್ರಭು,

ಪ್ರಥಮ ಎಂಸಿಜೆ

Advertisement

ಎಸ್. ಡಿ. ಎಮ್ ಕಾಲೇಜು, ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next