Advertisement

ಹಣ, ಆಸ್ತಿಗಿಂತ ಮಕ್ಕಳೇ ಮುಂದಿನ ಸಂಪತ್ತು : ಮಾಣಿಲ ಶ್ರೀ

03:40 AM Jul 05, 2017 | Team Udayavani |

ವಿಟ್ಲ: ಚಿಕ್ಕಂದಿನಲ್ಲೇ ಭಜನೆ, ಆರಾಧನೆ, ವಿವಿಧ ಶ್ಲೋಕಗಳ ಪಠಣ, ದೇವಸ್ಥಾನ, ಧಾರ್ಮಿಕ ಕೇಂದ್ರಗಳಿಗೆ ಸಾಗಿ ಶ್ರದ್ಧೆ, ಭಕ್ತಿ, ನಂಬಿಕೆಯಿಂದ ನಡೆದುಕೊಳ್ಳುವುದರಿಂದ ಸಂಸ್ಕಾರ ದೊರೆಯುತ್ತದೆ. ಪರಿಣಾಮವಾಗಿ ಜೀವನ ಉದ್ದೀಪನವಾಗುತ್ತದೆ. ಮಕ್ಕಳೇ ಮುಂದಿನ ಸಂಪತ್ತು ಎಂಬ ನೆನಪು ಜಾಗೃತವಾಗಿರಬೇಕು ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಅವರು  ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ 48 ದಿನಗಳ ಸಾಮೂಹಿಕ ಶ್ರೀ  ಲಕ್ಷ್ಮೀ ಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

Advertisement

ನಿವೃತ್ತ ಮುಖ್ಯೋಪಾಧ್ಯಾಯ, ಚಲನಚಿತ್ರ ನಟ ವಿಟ್ಲ ಮಂಗೇಶ್‌ ಭಟ್‌ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಉಮೇಶ್‌ ಬೆಂಗಳೂರು, ಭಾಸ್ಕರ ಸಾಲ್ಯಾನ್‌, ಪ್ರಕಾಶ್‌ ಬೆಂಗಳೂರು, ವಸಂತ ಬೆಂಗಳೂರು, ಯೋಗೀಶ್‌, ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ವನಿತಾ ವಿ.ಶೆಟ್ಟಿ,  ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿಗಳಾದ ಉಮೇಶ್‌ ಪಿ.ಕೆ. ನಾಗಲಚ್ಚಿಲು, ಮಂಜು ವಿಟ್ಲ, ಚಂದ್ರಶೇಖರ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ಗೀತಾ ಪುರುಷೋತ್ತಮ ಸ್ವಾಗತಿಸಿ, ವಂದಿಸಿದರು. ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀ  ಪೂಜೆ,  ಶ್ರೀ ನಾಗದೇವರ ಪೂಜೆ, ಗೋಮಾತಾ ಪೂಜೆ, ಬಾಲಭೋಜನ, ಕನಕಧಾರಾ ಯಾಗ, ನವಗ್ರಹ ಶಾಂತಿ, ಸಾಮೂಹಿಕ ಕುಂಕುಮಾರ್ಚನೆ, ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ, ಮಹಾಪೂಜೆ, ವಾಯನದಾನ, ಅನ್ನಸಂತರ್ಪಣೆ ಸೇವೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next