ಮಕ್ಕಳು ಅಳುತ್ತಾ “ಹೇಳಿದ ಕೆಲಸ ಮಾಡದೇ ಹೋದರೆ ಶಿಕ್ಷಕಿ ಶಿಕ್ಷೆ ನೀಡುವರು. ಸ್ವರ್ಗದ ಮಣ್ಣು ಸಿಗದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ’ ಎಂದು ಹಠ ಹಿಡಿದರು..! ಪೋಷಕರು ಮರುದಿನ ಶಾಲೆಗೆ ತಾವು ಬರುವುದಾಗಿ ಭರವಸೆಯಿತ್ತರು. ಮಾರನೇ ದಿನ ಪೋಷಕರೆಲ್ಲರೂ ಒಟ್ಟಾಗಿ ಶಿಕ್ಷಕಿಯ ಬಳಿ ತೆರಳಿದರು.
ಅಂದು ಶಾಲೆಯಲ್ಲಿ ತರಗತಿಗೆ ಬಂದ ಶಿಕ್ಷಕಿಗೆ ಮಕ್ಕಳನ್ನು ಪರೀಕ್ಷಿಸುವ ಮನಸ್ಸಾಯಿತು. ಅವರು ಮಕ್ಕಳಿಗೆ “ನಾಳೆ ಬರುವಾಗ ಸ್ವರ್ಗದ ಮಣ್ಣನ್ನು ತನ್ನಿ’ ಎಂದು ಹೇಳಿದರು. ಮಕ್ಕಳಿಗೆ ಸ್ವರ್ಗದಿಂದ ಮಣ್ಣು ತರುವುದು ಹೇಗೆಂದು ತಿಳಿಯಲಿಲ್ಲ. ಅವರೆಲ್ಲರೂ ತಮ್ಮ ಪೋಷಕರ ಬಳಿ ಹೋಗಿ ಶಿಕ್ಷಕಿ ಹೇಳಿದ್ದನ್ನು ಹೇಳಿದರು. ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದಿತು. ಸತ್ತ ನಂತರವಷ್ಟೇ ಸ್ವರ್ಗಕ್ಕೆ ಹೋಗಲು ಸಾಧ್ಯ, ಶಿಕ್ಷಕಿಯದೇನು ಹುಚ್ಚಾಟ ಎಂದು ಅವರು ಸಿಟ್ಟು ಮಾಡಿಕೊಂಡರು.
ಮಕ್ಕಳು ಅಳುತ್ತಾ “ಹೇಳಿದ ಕೆಲಸ ಮಾಡದೇ ಹೋದರೆ ಶಿಕ್ಷಕಿ ಶಿಕ್ಷೆ ನೀಡುವರು. ಸ್ವರ್ಗದ ಮಣ್ಣು ಸಿಗದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ’ ಎಂದು ಹಠ ಹಿಡಿದರು..! ಪೋಷಕರು ಮರುದಿನ ಶಾಲೆಗೆ ತಾವು ಬರುವುದಾಗಿ ಭರವಸೆಯಿತ್ತರು.
ಮಾರನೇ ದಿನ ಪೋಷಕರೆಲ್ಲರೂ ಒಟ್ಟಾಗಿ ಶಿಕ್ಷಕಿಯ ಬಳಿ ತೆರಳಿದರು. ಆದರೆ ಶಿಕ್ಷಕಿ ನೇರವಾಗಿ ತರಗತಿಗೆ ತೆರಳಿ “ಸ್ವರ್ಗದ ಮಣ್ಣನ್ನು ಯಾರೂ ತರಲಿಲ್ಲವೆ?’ ಎಂದು ಕೇಳಿದರು. ಮಕ್ಕಳು “ಇಲ್ಲಾ…’ ಎಂದು ಹೇಳಿದರು. ಆದರೆ ಒಬ್ಬ ಬಾಲಕ ಮುಂದೆ ಬಂದು, “ಟೀಚರ್ ನಾನು ತಂದಿದ್ದೇನೆ’ ಎಂದು ಕೈಲಿದ್ದ ಚೀಲವನ್ನು ತೋರಿಸಿದನು! ಪೋಷಕರೆಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತರು.
ಒಬ್ಬ ಪೋಷಕ ಆ ಹುಡುಗನ ಕೈಲಿದ್ದ ಚೀಲದಲ್ಲಿದ್ದ ಮಣ್ಣನ್ನು ಮುಟ್ಟಿ “ಇದು ಸಾಮಾನ್ಯ ಮಣ್ಣು. ಇದು ಎಲ್ಲಿ ಬೇಕಾದರೂ ಸಿಗುತ್ತೆ. ಇದನ್ನು ಸ್ವರ್ಗದ ಮಣ್ಣು ಎಂದು ಹೇಗೆ ಹೇಳುತ್ತೀಯಾ!?’ ಎಂದು ಕೇಳಿದರು. ಅವರ ಪ್ರಶ್ನೆಗೆ ಉತ್ತರಿಸು ಎಂದು ಟೀಚರ್ ಹೇಳಿದಾಗ ಹುಡುಗ ಹೇಳಿದ: “ಟೀಚರ್ ಈ ಮಣ್ಣು ನನ್ನ ತಾಯಿಯ ಕಾಲಿನ ಕೆಳಗಿದ್ದ ಮಣ್ಣು’.
ಅವನ ಮಾತು ಕೇಳಿ ಪೋಷಕರ ಕಣ್ಣುಗಳು ಒದ್ದೆಯಾದವು. ಅವರು ಆ ಹುಡುಗನ ಮೈದಡವಿ, ಶಿಕ್ಷಕಿಯ ಕ್ಷಮೆಯಾಚಿಸಿ ವಾಪಸ್ ಹೋದರು.
— ಉಮ್ಮೆ ಅಸ್ಮ ಕೆ. ಎಸ್.