Advertisement

ಶಾಲೆ ಬಿಡದಂತೆ ಮಕ್ಕಳ ಮನವೊಲಿಕೆ

05:46 PM Jan 11, 2022 | Shwetha M |

ಮುದ್ದೇಬಿಹಾಳ: ಶಾಲೆಗೆ ಗೈರು ಹಾಜರಾದ ಮತ್ತು ಶಾಲೆ ಬಿಟ್ಟ ಮಕ್ಕಳು ನಿಯಮಿತವಾಗಿ ಶಾಲೆಗೆ ಹೋಗುವ ಮೂಲಕ ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸಿ ಶಿಕ್ಷಣದ ಮಹತ್ವ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಗೌಡ ಮಿರ್ಜಿ ಸಲಹೆ ನೀಡಿದರು.

Advertisement

ಸೋಮವಾರ ತಂಗಡಗಿ ಬಳಿ ಇರುವ ಕೃಷ್ಣಾ ನದಿ ಸೇತುವೆ ಹತ್ತಿರದಿಂದ ಅಮರಗೋಳಕ್ಕೆ ಹೋಗುವ ರಸ್ತೆ ಮಧ್ಯೆ ತಾಯಿಯೊಂದಿಗೆ ಬಟ್ಟೆ ತೊಳೆಯಲು ನದಿಗೆ ಬಂದಿದ್ದ ಮಕ್ಕಳನ್ನು ಮಾತನಾಡಿಸಿದ ಅವರು, ಶಾಲೆ ಬಿಡಿಸಿ ಮಕ್ಕಳನ್ನು ಕೆಲಸಕ್ಕೆ ಕರೆ ತರದಂತೆ, ಅದರಲ್ಲೂ ಅಪಾಯಕಾರಿ ಸ್ಥಳವಾಗಿರುವ ನದಿಗೆ ಮಕ್ಕಳನ್ನು ಕರೆ ತರಲೇಬಾರದಂತೆ ಆ ಮಕ್ಕಳ ತಾಯಿಗೆ ತಿಳಿವಳಿಕೆ ನೀಡಿ ನಾಳೆಯಿಂದಲೇ ಮಕ್ಕಳನ್ನು ಶಾಲೆಗೆ ಬರುವಂತೆ ತಿಳಿಸಿದರು.

ಇದಕ್ಕೂ ಮುನ್ನ ಆ ಮಕ್ಕಳು ತಾವು ನಿತ್ಯ ಶಾಲೆಗೆ ಹೋಗುತ್ತಿದ್ದು ಇವತ್ತೂಂದು ದಿನ ಬಿಟ್ಟಿದ್ದೇವೆ, ಇನ್ನು ಮುಂದೆ ನಿತ್ಯವೂ ಶಾಲೆಗೆ ಹೋಗುತ್ತವೆ ಎಂದು ತಿಳಿಸಿದರು. ತಂಗಡಗಿ ವಲಯದ ಸಿಆರ್‌ಪಿ ಎಂ.ಎ. ತಳ್ಳಿಕೇರಿ ಇದ್ದರು. ನಂತರ ಮಿರ್ಜಿ ಅವರು ಅಮರಗೋಳದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಲು ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next