Advertisement

ಮಕ್ಕಳಲ್ಲಿ ಕಾನೂನು ಅರಿವು ಅಗತ್ಯ

05:25 PM Sep 23, 2018 | Team Udayavani |

ಸಿರುಗುಪ್ಪ: ಸ್ವಾಭಿಮಾನದಿಂದ ಕೂಡಿದ ಸ್ವಾವಲಂಬನೆ ಜೀವನ ಕಟ್ಟಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ. ಇಂದಿನ ಮಕ್ಕಳೇ ದೇಶದ ಆಸ್ತಿಯಾಗಿದ್ದು, ನಿಮ್ಮ ಉತ್ತಮ ಜೀವನ ಹಾಗೂ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾನೂನು ಸಾಕ್ಷರತೆಯ ಅರಿವು ಪಡೆದುಕೊಳ್ಳುವುದು ಇಂದಿನ ಜೀವನದಲ್ಲಿ ಅತ್ಯವಶ್ಯ ಎಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಧನೇಶ್‌ ಎಂ. ಶಿವಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ತಾಲೂಕು ಕಾನೂನು
ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವುದರೊಳಗೆ ಪೋಷಕರು ಮದುವೆ ಮಾಡಲು ಮುಂದಾಗುತ್ತಿದ್ದು, ಬಾಲ್ಯ ವಿವಾಹ ಕಾನೂನು ಬಾಹಿರವಾಗಿದೆ. ಹೆಣ್ಣು ಮಕ್ಕಳು ಪೋಷಕರ ಮಾತು ಕೇಳದೆ ಬಾಲ್ಯವಿವಾಹ ಮಾಡಿಕೊಳ್ಳಬಾರದು.

ವಯಸ್ಸಾಗುವವರೆಗೆ ನಿಮ್ಮ ಉತ್ತಮ ಜೀವನ ರೂಪಿಸಿಕೊಳ್ಳಲು ಉನ್ನತ ಶಿಕ್ಷಣ ಪಡೆಯುವುದರ ಕಡೆ
ಹೆಚ್ಚಿನ ಗಮನಹರಿಸಬೇಕೆಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಜನಸಾಮಾನ್ಯರಿಗೂ ಕಾನೂನಿನ ನೆರವು
ದೊರೆಯಬೇಕೆನ್ನುವ ಉದ್ದೇಶದಿಂದ ಸರ್ವೋತ್ಛ ನ್ಯಾಯಾಲಯದ ಆದೇಶದಂತೆ ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೆ ಕಾನೂನು ಸೇವಾ ಪ್ರಾಧಿಕಾರ ಸಮಿತಿ ಮೂಲಕ ಆರ್ಥಿಕ ದುರ್ಬಲರು, ಮಹಿಳೆಯರು ಕಾನೂನಿನ ನೆರವು ಪಡೆಯಬಹುದು ಎಂದು ತಿಳಿಸಿದರು.

ಗ್ರೇಡ್‌-2 ತಹಶೀಲ್ದಾರ್‌ ಬಿ.ಮಲ್ಲೇಶಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಚನ್ನಪ್ಪ ಪಾಟೀಲ್‌, ದೈಹಿಕ ಶಿಕ್ಷಣ ಪರೀವಿಕ್ಷಕ ವಿಜಯರಂಗರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸ, ಕಾರ್ಯದರ್ಶಿ ಮಂಜುನಾಥಗೌಡ, ಹಿರಿಯ ವಕೀಲರಾದ ಎಚ್,ಕೆ,ಮಲ್ಲಿಕಾರ್ಜುನಸ್ವಾಮಿ ವೀರಣ್ಣ ಪತ್ತಾರ್‌, ಎ.ಶಿವರುದ್ರಗೌಡ, ಬಿ.ಜಿ.ಸುಧಾಕರರೆಡ್ಡಿ, ದೇಶನೂರು
ಮಂಜುನಾಥ್‌, ಕೆ.ವೀರೇಶಗೌಡ, ಮಲ್ಲಿಗೌಡ ಸೇರಿದಂತೆ ಇತರೆ ವಕೀಲರು, ವಸತಿ ನಿಲಯದ ವಿದ್ಯಾರ್ಥಿನಿಯರು
ಪಾಲ್ಗೊಂಡಿದ್ದರು.

Advertisement

ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವುದರೊಳಗೆ ಪೋಷಕರು ಮದುವೆ ಮಾಡಲು ಮುಂದಾಗುತ್ತಿದ್ದು, ಬಾಲ್ಯ ವಿವಾಹ ಕಾನೂನು ಬಾಹಿರವಾಗಿದೆ. ಹೆಣ್ಣು ಮಕ್ಕಳು ಪೋಷಕರ ಮಾತು ಕೇಳದೆ ಬಾಲ್ಯವಿವಾಹ ಮಾಡಿಕೊಳ್ಳಬಾರದು. ವಯಸ್ಸಾಗುವವರೆಗೆ ನಿಮ್ಮ ಉತ್ತಮ ಜೀವನ ರೂಪಿಸಿಕೊಳ್ಳಲು ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಗಮನಹರಿಸಬೇಕು.
 ಧನೇಶ ಎಂ.ಶಿವಪ್ಪ, ಜೆಎಂಎಫ್‌ಸಿ ನ್ಯಾಯಾಧೀಶರು.

Advertisement

Udayavani is now on Telegram. Click here to join our channel and stay updated with the latest news.

Next