Advertisement
ತೆಂಡುಲ್ಕರ್ ಹೆಸರು ಉಳಿಸುತ್ತಾರಾ ಅರ್ಜುನ್?ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇತ್ತೀಚಿಗೆ ಕ್ರಿಕೆಟ್ ವಲಯದಲ್ಲಿ ಸದ್ದು ಮಾಡುತ್ತಿದ್ದಾರೆ. ಸಚಿನ್, ವಿಶ್ವ ಕ್ರಿಕೆಟ್ ಕಂಡ ಅಪ್ರತಿಮ ಆಟಗಾರ. ಕ್ರಿಕೆಟ್ ದೇವರೆಂದೇ ಅಭಿಮಾನಿಗಳಿಂದ ಕರೆಸಿಕೊಂಡವರು. ಅಪ್ಪನ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡಿರುವ ಅರ್ಜುನ್ ಕೂಡ ಇತ್ತೀಚೆಗೆ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚುತ್ತಿದ್ದಾನೆ. ಎಡಗೈ ಬ್ಯಾಟ್ಸ್‌ಮನ್ ಹಾಗೂ ಮಧ್ಯಮ ವೇಗಿ ಆಗಿದ್ದು, ಕೂಚ್ ಬೆಹರ್, ಅಂ-18 ಸೇರಿದಂತೆ ವಿವಿಧ ಟೂರ್ನಿಯಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಾರಲು ರೆಡಿಯಾಗುತ್ತಿದ್ದಾರೆ. ಆದರೆ, ಈತ ಅಪ್ಪನಂತೆ ಸಕ್ಸಸ್ ಕಾಣಾ¤ರಾ ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ.
“ದಿ ವಾಲ್’ ಎಂದೇ ಖ್ಯಾತಿ ಪಡೆದ ರಾಹುಲ್ ದ್ರಾವಿಡ್ ವಿಶ್ವ ಮೆಚ್ಚಿದ ಕಲಾತ್ಮಕ ಹಾಗೂ ಅದ್ಭುತ ಕ್ರಿಕೆಟಿಗ. ಇವರ ಮಗ ಸುಮಿತ್ ದ್ರಾವಿಡ್ ಕೂಡ ಇತ್ತೀಚೆಗೆ ಮುಗಿದ 14 ವರ್ಷದೊಳಗಿನವರ ಶಾಲಾ ಟೂರ್ನಿಯಲ್ಲಿ 150 ರನ್ ಬಾರಿಸುವ ಮೂಲಕ ಸದ್ದು ಮಾಡಿದ್ದಾರೆ. ಇದರಿಂದ ಸುಮಿತ್ ಮೇಲೆ ಬಹಳ ನಿರೀಕ್ಷೆಗಳು ಹೆಚ್ಚಿವೆ. ಸ್ಟೀವ್ ವಾ ಪುತ್ರ ಆಸ್ಟೀನ್
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ, ಕ್ರಿಕೆಟ್ ಲೋಕದಲ್ಲಿ ತನ್ನ ಹೆಸರು ಅಚ್ಚಳಿಯದಂಥ ಸಾಧನೆ ಮಾಡಿದ್ದಾರೆ. ಸ್ಟೀವಾ ಪುತ್ರ ಆಸ್ಟೀನ್ ವಾ ಕೂಡ ಕ್ರಿಕೆಟರ್. ದೇಶಿ ಟೂರ್ನಿಗಳಲ್ಲಿ ಅದ್ಭುತ ಆಟದ ಮೂಲಕ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಅಂ-19 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಟ್ಸ್‌ಮನ್ ಆಗಿರುವ ಆಸ್ಟೀನ್ ಅಪ್ಪನ ಹಾದಿ ತುಳಿಯುತ್ತಿದ್ದಾರೆ.
Related Articles
ಭಾರತ ತಂಡದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಒಂದು ಸಮಯದಲ್ಲಿ ತಂಡದ ಅವಿಭಾಜ್ಯ ಅಂಗವಾಗಿದ್ದರು. ಜೋಶಿ ರಣಜಿ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಗಳಿಸಿರುವ ಹೆಗ್ಗಳಿಕೆ ಹೊಂದಿದ್ದಾರೆ. ಇಂತಹ ಹಿನ್ನೆಲೆಯ ಜೋಶಿಯವರ ಪುತ್ರ ಆರ್ಯನ್ ಜೋಶಿ, ಬ್ಯಾಟ್ಸ್‌ಮನ್ ಆಗಿ ಶಾಲಾ ಮತ್ತು ಕ್ಲಬ್ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಮುಂದೆ ಭಾರತ ತಂಡದಲ್ಲಿ ಆಡುವ ಭರವಸೆ ಮೂಡಿಸಿದ್ದಾರೆ.
Advertisement
ಚಂದ್ರಪಾಲ್ ಮಗ ಬ್ಯಾಟ್ಸ್ಮನ್ವೆಸ್ಟ್ವಿಂಡೀಸ್ನ ಮಾಜಿ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಒಂದು ಕಾಲದಲ್ಲಿ ತಂಡಕ್ಕೆ ಆಪತಾºಂಧವನಾಗಿದ್ದರು. ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಬಲ್ಲ ಆಟಗಾರನಾಗಿದ್ದವರು. ಚಂದ್ರಪಾಲ್ ಪುತ್ರ ತರೈನಾರಾಯಣ್ ಈಗಾಗಲೇ ವೆಸ್ಟ್ ವಿಂಡೀಸ್‌ನ ಸ್ಥಳೀಯ ಕ್ರಿಕೆಟ್ ಟೂರ್ನಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅಂ-19 ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಇವರು ಕೂಡ ಅಪ್ಪನಂತೆ ಕ್ರಿಕೆಟ್ ಜಗತ್ತಿನಲ್ಲಿ ಬೆಳೆಯುತ್ತಾರಾ ನೋಡಬೇಕಿದೆ. ಆ್ಯಂಟಿನಿ ಮಗ ಕೂಡ ಕ್ರಿಕೆಟರ್
ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡಿದ ಮೊದಲ ಕರಿಯ ಜನಾಂಗದ ಕ್ರಿಕೆಟಿಗ ಎಂಬ ಖ್ಯಾತಿ ಮಖಾಯಿ ಆ್ಯಂಟಿನಿ ಅವರದು. ಈಗ ಅವರ ಪುತ್ರ ತಂಡೋ ಆ್ಯಂಟನಿ ಕೂಡ ಅಪ್ಪನಂತೆ ಎದುರಾಳಿ ತಂಡದ ಆಟಗಾರರನ್ನು ನಡುಗಿಸಬಲ್ಲ ಮಧ್ಯಮ ವೇಗದ ಬೌಲರ್ ಆಗಿದ್ದಾರೆ. ಈತ ಸದ್ಯ ನ್ಯೂಜಿಲೆಂಡಿನಲ್ಲಿ ನಡೆಯುತ್ತಿರುವ ಅಂ-19 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿದ್ದಾರೆ. ದೇವಲಾಪುರ ಮಹದೇವಸ್ವಾಮಿ