Advertisement

ಮಕ್ಕಳೇ, ಕತೆ ಕೇಳುತ್ತೀರಾ?

11:26 AM Feb 17, 2018 | Team Udayavani |

ಕತೆಗಳು ಮಕ್ಕಳ ಕಲ್ಪನಾಶಕ್ತಿಯನ್ನು, ಸೃಜನಶೀಲತೆಯನ್ನು ಹೆಚ್ಚಿಸುತ್ತವೆ ಎಂದು  ಹೇಳುತ್ತಾರೆ. ಹಿಂದೆಲ್ಲಾ ಕತೆ ಹೇಳಲು ಮನೆಯಲ್ಲಿ  ಅಜ್ಜನೋ, ಅಜ್ಜಿಯೋ ಇರುತ್ತಿದ್ದರು. ಅಳುವ ಮಗುವನ್ನು ಸಮಾಧಾನಿಸಲೂ ಕತೆ, ಊಟ ಮಾಡಿಸಲೂ ಕತೆ, ಮಲಗಿಸಲೂ ಕತೆಯೇ ಬೇಕು. ಆದರೀಗ ಮೈಕ್ರೋ ಕುಟುಂಬಗಳಲ್ಲಿ ಕತೆ ಹೇಳುವವರೇ ಇಲ್ಲ. ಹಾಗೆಂದು ಸುಮ್ಮನೆ ನಿರಾಶರಾಗಬೇಕಿಲ್ಲ.

Advertisement

ಮಕ್ಕಳಿಗೆ ಕತೆ ಹೇಳುವ ಕಾರ್ಯಕ್ರಮವೊಂದು ನಗರದಲ್ಲಿ ಏರ್ಪಾಡಾಗಿದೆ. ಪರಂಪರಾ ಸಾಂಸ್ಕೃತಿಕ ಸಂಘ ಇದನ್ನು ಆಯೋಜಿಸಿದೆ. ದೊಡ್ಡವರು ಮಕ್ಕಳನ್ನು ಕರೆದುಕೊಂಡು ಈ ಕಾರ್ಯಕ್ರಮಕ್ಕೆ ಹಾಜರಾಗಬಹುದು. ಲೇಖಕರಾದ ಜಿ.ಎಸ್‌. ಸತ್ಯಮೂರ್ತಿಯವರು ಮಕ್ಕಳಿಗೆ ಚಂದ ಚಂದದ ಕತೆ ಹೇಳಲಿದ್ದಾರೆ. ಅಂದು ಕತೆ ಕೇಳಲು ತಾವರೆಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೆಲ್ಲರೂ ಹಾಜರಿರುತ್ತಾರೆ.

ಎಲ್ಲಿ?: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾವರೆಕೆರೆ
 

Advertisement

Udayavani is now on Telegram. Click here to join our channel and stay updated with the latest news.

Next