Advertisement
ಕಮ್ಯುನಿಟಿ ಕನೆಕ್ಟ್ಸಾಫ್ಟ್ವೇರ್ ಉದ್ಯೋಗಿ ಸಂಪತ್ ರಾಮಾನುಜಂ ಮತ್ತು ಪತ್ನಿ ಶ್ರೀದೇವಿ ಸಂಪತ್, ನಾಲ್ಕು ವರ್ಷಗಳಿಂದ ಅನ್ವಯ ಫೌಂಡೇಶನ್ ಎಂಬ ಎನ್‌ಜಿಓ ನಡೆಸುತ್ತಿದ್ದಾರೆ. ಸಂಸ್ಥೆಯ “ಕಮ್ಯುನಿಟಿ ಕನೆಕ್ಟ್’ ಕಾರ್ಯಕ್ರಮದ ಭಾಗವಾಗಿ, ಈ ಪಿಕ್‌ನಿಕ್ ಅನ್ನು ಆಯೋಜಿಸಲಾಗಿತ್ತು. ಕೆ.ದೊಮ್ಮಸಂದ್ರ ಸರ್ಕಾರಿ ಶಾಲೆಯ 5ನೇ ತರಗತಿಯ 6 ಪುಟಾಣಿಗಳು, ಒಂದಿಡೀ ದಿನವನ್ನು ವೈಟ್‌ಫೀಲ್ಡ್ ಬಳಿ, ಹೂಡಿಯ ಐಟಿ ಕಂಪನಿಯೊಂದರಲ್ಲಿ ಕಳೆದರು. ಸಾಫ್ಟ್ವೇರ್ ಕಂಪನಿಯೊಂದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡರು.
ಐಟಿ ಹಬ್ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ನೂರಾರು ಕಂಪನಿಗಳಿವೆ. ಬಹುಮಹಡಿ ಕಟ್ಟಡದ ಆ ಆಫೀಸ್ ಒಳಕ್ಕೆ ಒಮ್ಮೆಯಾದರೂ ಹೋಗಬೇಕೆಂಬ ಆಸೆ ಹಲವರಿಗಿರುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೂ ಆ ಕುತೂಹಲ, ಆಸೆ ಇತ್ತು. ಜುಲೈ 30, ಸೋಮವಾರ ಬೆಳಗ್ಗೆ 9.30ಕ್ಕೆಲ್ಲ ಮಕ್ಕಳು ಐಟಿ ಕಂಪನಿಯಲ್ಲಿದ್ದರು. ಐಟಿ ಕಂಪನಿಯ ಸಿಬ್ಬಂದಿಯೂ ಇವರನ್ನು ಖುಷಿಯಿಂದ ಬರಮಾಡಿಕೊಂಡರು. ಶಾಲೆಯಲ್ಲಿ ಒಂದೆರಡು ಕಂಪ್ಯೂಟರ್‌ಗಳನ್ನಷ್ಟೇ ನೋಡಿದ್ದ ಮಕ್ಕಳು ಅಲ್ಲಿನ ದೊಡ್ಡ ಸರ್ವರ್ ರೂಮ್‌ಗಳನ್ನು ನೋಡಿ ಕಣ್ ಕಣಿºಟ್ಟರು. ಅಲ್ಲಿನವರ ಆತ್ಮವಿಶ್ವಾಸ, ಮಾತಿನ ಶೈಲಿ ನೋಡಿ ಮೋಡಿಗೊಳಗಾಗಿ, ಮುಂದೆ ನಾವೂ ಇದೇ ರೀತಿ ದೊಡ್ಡ ಕೆಲಸಕ್ಕೆ ಸೇರುತ್ತೇವೆ ಅಂತ ಅವರಲ್ಲಿ ಕನಸನ್ನು ಹಂಚಿಕೊಂಡರು. ಕಂಪನಿಯ ಸಿಬ್ಬಂದಿಯ ಜೊತೆಗೆ ಕೆಫೆಟೇರಿಯಾದಲ್ಲಿ ಊಟ, ಕೇರಂ, ಬಿಲಿಯರ್ಡ್ಸ್ ಆಟ ಕೂಡ ಆಡಿದರು. ಸಂಜೆ 4 ಗಂಟೆಗೆ ಅಲ್ಲಿಂದ ಹೊರಬಂದಾಗ ಮಕ್ಕಳಲ್ಲಿ ಕನಸಿನ ಕಾಮನಬಿಲ್ಲೊಂದು ಮೂಡಿತ್ತು ಅಂತಾರೆ ಸಂಪತ್ ರಾಮಾನುಜಂ. ಚೆನ್ನಾಗಿ ಓದಿದರೆ ಏನೇನೆಲ್ಲಾ ಅವಕಾಶಗಳು ಜೊತೆಯಾಗುತ್ತವೆ ಎಂಬ ಕನಸು, ಗುರಿಯನ್ನು ಅವರಲ್ಲಿ ಮೂಡಿಸುವುದೇ ಈ ಪಿಕ್‌ನಿಕ್‌ನ ಉದ್ದೇಶ. ನಾನ್ ಕನ್ನಡಿಗ ಟು ನಾನು ಕನ್ನಡಿಗ
ಅನ್ವಯ ಫೌಂಡೇಶನ್‌ನ ಸಂಪತ್ ರಾಮಾನುಜಂ ಮೂಲತಃ ತಮಿಳುನಾಡಿನವರು. 14 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಅವರಿಗೆ ಕನ್ನಡ ಗೊತ್ತೇ ಇರಲಿಲ್ಲವಂತೆ. ಅವರಿವರಿಂದ ಕನ್ನಡ ಕಲಿತ ಸಂಪತ್ ಈಗ ಬೇರೆಯವರಿಗೂ ಕನ್ನಡ ಕಲಿಸಲು ನಿರ್ಧರಿಸಿದ್ದಾರೆ. “ನಾನ್ ಕನ್ನಡಿಗ ಟು ನಾನು ಕನ್ನಡಿಗ’ ಎಂಬ ವಾರಾಂತ್ಯದ ಕನ್ನಡ ಕ್ಲಾಸ್ ಕಳೆದ ತಿಂಗಳಷ್ಟೇ ಶುರುವಾಗಿದೆ. 7ರಿಂದ 70 ವರ್ಷದ, ಬೇರೆ ಬೇರೆ ಉದ್ಯೋಗದಲ್ಲಿರುವ 75ಕ್ಕೂ ಹೆಚ್ಚು ಅನ್ಯಭಾಷಿಕರು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿದ್ದಾರೆ. ವಿವಿಧ ಚಟುವಟಿಕೆಗಳ ಮೂಲಕ ಓದಲು, ಬರೆಯಲು, ಮಾತಾಡಲು, ಕಲಿಸಲಾಗುತ್ತದೆ. ವಿಶೇಷವೆಂದರೆ, ಈ ತರಗತಿ ನಡೆಯುವುದು ಯಾವುದೋ ಎಸಿ ರೂಮ್‌ನಲ್ಲಲ್ಲ. ಬದಲಿಗೆ ಸರ್ಕಾರಿ ಶಾಲೆಯೊಂದರಲ್ಲಿ! ಯಾಕೆಂದರೆ, ಹೆಚ್ಚಿನವರಿಗೆ ತಮ್ಮ ಎಸಿ ಕೋಣೆಯ ಹೊರಗೊಂದು ಜಗತ್ತಿದೆ ಎಂದು ಗೊತ್ತೇ ಇರುವುದಿಲ್ಲ. ಹಾಗಾಗಿ ಈ ತರಗತಿಯೂ ಇದೂ ಕೂಡ ಕಮ್ಯುನಿಟಿ ಕನೆಕr…ನ ಒಂದು ಭಾಗವೇ.
Related Articles
-ಸಂಪತ್ ರಾಮಾನುಜಂ, ಅನ್ವಯ ಸ್ಥಾಪಕ, 9663033699
Advertisement