ಬೆಳಗಾವಿ: ಕೊರೊನಾ ಹಾವಳಿಯಿಂದಾಗಿ ಶಾಲೆಗಳಿಗೆ ರಜೆ ಇದ್ದಿದ್ದರಿಂದ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಪುಟ್ಟ ಪುಟ್ಟ ಮಕ್ಕಳು ತಮ್ಮ ಮನೆ ಮುಂದೆಯೇ ಗಣರಾಜ್ಯೋತ್ಸವದಂದು ತಿರಂಗಾ ಧ್ವಜಾರೋಹಣ ನೆರವೇರಿಸುವ ಮೂಲಕ ದೇಶ ಪ್ರೇಮ ಮೆರೆದರು.
ಅಥಣಿ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಪುಟ್ಟ ಮಕ್ಕಳು ಸೇರಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಲೆಗಳಿಗೆ ರಜೆ ಇದ್ದಿದ್ದರಿಂದ ಗಣರಾಜ್ಯೋತ್ಸವ ಆಚರಿಸಲು ಶಾಲೆಯಲ್ಲಿ ಅವಕಾಶ ಇಲ್ಲದ್ದಕ್ಕೆ ಮಕ್ಕಳೆಲ್ಲ ತಿರಂಗಾ ಧ್ವಜ ಹಾರಿಸಿ ದೇಶ ಪ್ರೇಮ ಮೆರೆದರು.
ಇದನ್ನೂ ಓದಿ:ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ
ಉಗಾರ ಖುರ್ದ ಗ್ರಾಮದಲ್ಲಿರುವ ಮಕ್ಕಳೇ ತಮ್ಮ ಮನೆ ಎದುರಿನ ಶೆಡ್ ನಲ್ಲಿ ತಿರಂಗಾ ಧ್ವಜ ಹಾರಿಸಿ ರಾಷ್ಟ್ರಗೀತೆ ಹೇಳಿ ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವದಲ್ಲಿ ಜಮ್ ನಗರದ “ಪಾಗ್ಡಿ”ಯಲ್ಲಿ ಕಂಗೊಳಿಸಿದ ಪ್ರಧಾನಿ