Advertisement

ನಾಳೆಯಿಂದ ಚಂದನದಲ್ಲಿ 5-9ನೇ ತರಗತಿ ಮಕ್ಕಳಿಗೆ ಸಂವೇದ ತರಗತಿ

10:28 PM Jan 11, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದು ಮತ್ತು ಕಲಿಕೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಚಂದನ ವಾಹಿನಿಯಲ್ಲಿ “ಸಂವೇದ- ಇ ಕಲಿಕಾ’ ಕಾರ್ಯಕ್ರಮ ಆರಂಭಿಸುತ್ತಿದೆ.

Advertisement

ಜ.13ರಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ 5ರಿಂದ 9ನೇ ತರಗತಿ ವರೆಗಿನ ಮಕ್ಕಳಿಗೆ “ಸಂವೇದ- ಇ ಕಲಿಕಾ’ ಕಾರ್ಯಕ್ರಮ ಆರಂಭವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ 5 ದಿನ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಪ್ರಸಾರ ಮಾಡಲಾಗುತ್ತದೆ. ತರಗತಿವಾರು ಮತ್ತು ವಿಷಯವಾರು ವೇಳಾಪಟ್ಟಿಯನ್ನು ಪ್ರತಿವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಪ್ರಕಟಿಸಲಿದೆ ಎಂದು ನಿರ್ದೇಶಕಿ ವಿ. ಸುಮಂಗಲ ತಿಳಿಸಿದ್ದಾರೆ.

ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿದ್ದ ವೇಳೆ ಮಕ್ಕಳು ಪಾಠದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚಂದನವಾಹಿನಿಯಲ್ಲಿ ಬೋಧನಾ ತರಗತಿಗಳನ್ನು ಮೊದಲ ಬಾರಿಗೆ ಆರಂಭಿಸಲಾಗಿತ್ತು. ಇದೀಗ, ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ 1ರಿಂದ 9ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಲಿಕೆಯನ್ನು ನಿರಂತರವಾಗಿ ಮುಂದುವರಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ವೀಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಶಿಕ್ಷಕರ ಜವಾಬ್ದಾರಿ ಏನು?
ಶಾಲೆಗಳ ಶಿಕ್ಷಕರು ವೇಳಾಪಟ್ಟಿಯನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ತಲುಪಿಸಬೇಕು. ನಂತರ ಮಕ್ಕಳೊಂದಿಗೆ ಸಂವಹನ ಸಾಧಿಸಿ, ನಿಗದಿತ ದಿನ ಮತ್ತು ಸಮಯದಂದು ತಮ್ಮ ವಿದ್ಯಾರ್ಥಿಗಳು ವೀಡಿಯೋ ಪಾಠಗಳನ್ನು ವೀಕ್ಷಿಸುವಂತೆ ಪ್ರಚಾರ ನೀಡಬೇಕು. ಶಿಕ್ಷಕರು ಸಹ ಪಾಠಗಳನ್ನು ವೀಕ್ಷಿಸಿ ಅದಕ್ಕೆ ಅನುಗುಣವಾಗಿ ಪೂರಕ ಕಲಿಕಾ ಚಟುವಟಿಕೆಗಳು ಮತ್ತು ಮೌಲ್ಯಮಾಪನ ಚಟುವಟಿಕೆಗಳನ್ನು ಆಯೋಜಿಸಿ ನಿರ್ವಹಿಸಬೇಕು. ಪ್ರತಿ ವಿದ್ಯಾರ್ಥಿಯು ನಿರ್ವಹಿಸಿದ ಚಟುವಟಿಕೆಗಳನ್ನು ಇಲಾಖೆ ನೀಡಿರುವ ನಿರ್ದೇಶನದಂತೆ ಮೌಲ್ಯಮಾಪನ ಮಾಡಬೇಕು. ಪ್ರತಿ 15 ದಿನಗಳಿಗೊಮ್ಮೆ ವಿದ್ಯಾರ್ಥಿಗಳ ಕಲಿಕೆ ಬಗ್ಗೆ ಡಿಎಸ್‌ಇಆರ್‌ಟಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:ಗೂಗಲ್‌ ಸಂಸ್ಥೆಯ ಜಿ-ಮೇಲ್‌ ಆ್ಯಪ್‌ ಸಾವಿರ ಕೋಟಿ ಡೌನ್‌ಲೋಡ್‌!

Advertisement

ಶಾಲೆ ಸ್ಥಗಿತಗೊಳಿಸುವ ಅಧಿಕಾರ ಡಿಸಿ ಗಳಿಗೆ
ಪ್ರತ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ಆಯಾ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಾಲೆಗಳನ್ನು ಸ್ಥಗಿತಗೊಳಿಸುವ ಅಧಿಕಾರ ನೀಡಲಾಗಿದೆ. ಶಾಲೆಗಳಲ್ಲಿ ಭೌತಿಕ ತರಗತಿಗಳು ನಡೆಯದ ಸಂದರ್ಭದಲ್ಲಿ ಪರ್ಯಾಯ ಶೈಕ್ಷಣಿಕ ಕ್ರಮಗಳನ್ನು ನಿರ್ವಹಿಸಲು ಶಿಕ್ಷಣ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂವೇದ- ಇ ಕ್ಲಾಸ್‌ ಕಲಿಕಾ ಕಾರ್ಯಕ್ರಮ ವೇಳಾಪಟ್ಟಿ
ವಾರ 8ರಿಂದ 8.30 8.30ರಿಂದ 9 9ರಿಂದ9.30 9.30ರಿಂದ10 3ರಿಂದ 3.30 3.30ರಿಂದ 4 4ರಿಂದ 4.30 5ರಿಂದ 5.30 5.30ರಿಂದ 6

ಜ.13 ಗುರುವಾರ 9ನೇ ತರಗತಿ ಗಣಿತ 9ನೇ ತರಗತಿ ಸಮಾಜ ವಿಜ್ಞಾನ 8ನೇ ತರಗತಿ ಕನ್ನಡ 8ನೇ ತರಗತಿ ಗಣಿತ 5ನೇ ತರಗತಿ ಕನ್ನಡ 6ನೇ ತರಗತಿ ಗಣಿತ 6ನೇ ತರಗತಿ ಸಮಾಜ ವಿಜ್ಞಾನ 7ನೇ ತರಗತಿ ಗಣಿತ 7ನೇ ತರಗತಿ ಹಿಂದಿ

ಜ.14 ಶುಕ್ರವಾರ 9ನೇ ತರಗತಿ ಕನ್ನಡ 9ನೇ ತರಗತಿ ಗಣಿತ 8ನೇ ತರಗತಿ ಸಮಾಜ ವಿಜ್ಞಾನ 8ನೇ ತರಗತಿ ವಿಜ್ಞಾನ 5ನೇ ತರಗತಿ ಇಂಗ್ಲಿಷ್‌ 6ನೇ ತರಗತಿ ವಿಜ್ಞಾನ 6ನೇ ತರಗತಿ ಕನ್ನಡ 7ನೇ ತರಗತಿ ವಿಜ್ಞಾನ 7ನೇ ತರಗತಿ ಗಣಿತ

Advertisement

Udayavani is now on Telegram. Click here to join our channel and stay updated with the latest news.

Next