Advertisement

ಮಕ್ಕಳು ಉನ್ನತ ಶಿಕ್ಷಣ ಪಡೆದಾಗ ಗುರಿ ಸಾಧಿಸಲು ಸಾಧ್ಯ: ನರೇಶ್‌ ದೇವಾಡಿಗ

02:07 PM Sep 05, 2021 | Team Udayavani |

ನವಿಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿ ವತಿಯಿಂದ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಪ್ರಭಾಕರ ದೇವಾಡಿಗ ಅವರ ನೇತೃತ್ವದಲ್ಲಿ 2020-2021ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ತರಗತಿಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಅಲ್ಲದೆ ಔದ್ಯೋಗಿಕ ಶಿಕ್ಷಣ ಮತ್ತು ಪದವಿ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.

Advertisement

ದೇವಾಡಿಗ ಸಂಘ ಮುಂಬಯಿ ಉಪಾಧ್ಯಕ್ಷ ನರೇಶ್‌ ದೇವಾಡಿಗ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಶಾ ಪಿ. ದೇವಾಡಿಗ ಸಾನಾ³ಡ, ಆಶಾ ದೇವಾಡಿಗ ನೆರೂಲ್‌ ಮತ್ತು ಪೂರ್ಣಿಮಾ ಡಿ. ದೇವಾಡಿಗ ಪ್ರಾರ್ಥನೆ ನೆರವೇರಿಸಿದರು. ಸಂಘದ ಮಾಜಿ ಅಧ್ಯಕ್ಷ ಎಸ್‌. ಪಿ. ಕರ್ಮರನ್‌, ಸಂಘದ ಮಹಿಳಾ ಉಪಾಧ್ಯಕ್ಷೆ ಪೂರ್ಣಿಮಾ ಡಿ. ದೇವಾಡಿಗ, ಸಮಿತಿಯ ಮಹಿಳಾ ಉಪಾಧ್ಯಕ್ಷೆ ಶಾಂತಾ ಎಸ್‌. ದೇವಾಡಿಗ, ಸುನಂದಾ ಕರ್ಮರನ್‌, ನ್ಯಾಯವಾದಿ ಪ್ರಭಾಕರ ದೇವಾಡಿಗ ಸಹಕರಿಸಿದರು.

ಕಾರ್ಯಕ್ರಮದ ಆಯೋಜಕರನ್ನು ಶ್ಲಾಘಿಸಿ ಹೆಚ್ಚು ಅಂಕಗಳಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ನರೇಶ್‌ ದೇವಾಡಿಗ ಅವರು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಸಂಘ-ಸಂಸ್ಥೆಗಳಲ್ಲಿ ನಡೆಯಬೇಕು. ಅದರಲ್ಲಿ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಭಾಗವಹಿಸಬೇಕು. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಬೆಳೆದು ತಮ್ಮ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಅನೇಕ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ಅನುಕೂಲ ಆಗುತ್ತಿದ್ದು, ಆದಷ್ಟು ಉನ್ನತ ಶಿಕ್ಷಣ ಪಡೆದು ಉತ್ತಮ ಗುರಿ ಸಾಧಿಸುವಲ್ಲಿ ವಿದ್ಯಾರ್ಥಿಗಳು ಮತ್ತು$ಅವರ ಪಾಲಕರು ಕಾಳಜಿ ವಹಿಸಬೇಕು ಎಂದರು.

ಇದನ್ನೂ ಓದಿ:ತೆರೆ ಮೇಲೆ ಬರುತ್ತಿದೆ ಮಿಂಚಿ ಮರೆಯಾದ ರಾನು ಮಂಡಲ್‌ ಜೀವನ ಚರಿತ್ರೆ:ನಟಿ ಇಶಿಕಾ ಹೇಳಿದ್ದೇನು?

ಸಂಘದ ಮಾಜಿ ಅಧ್ಯಕ್ಷ ಎಸ್‌. ಪಿ. ಕರ್ಮರನ್‌ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಲ್ಲಿ ಭವಿಷ್ಯದ ಜೀವನ ಸುಗಮವಾಗುತ್ತದೆ. ವಿದ್ಯಾರ್ಥಿಗಳು ಸಂಘದ ಮುಂದಿನ ಭವಿಷ್ಯವಾಗಿದ್ದು, ತಮ್ಮ ಶಿಕ್ಷಣದ ಜತೆಯಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ನ್ಯಾಯವಾದಿ ಪ್ರಭಾಕರ ದೇವಾಡಿಗ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭ ಕೋರಿದರು. ಹಿರಿಯರು ಹಗಲಲ್ಲಿ ದುಡಿದು ರಾತ್ರಿ ಶಾಲೆ, ಕಾಲೇಜು ಪೂರೈಸಿ ಜೀವನದಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಈಗಿನ ಕಾಲದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದ್ದು, ವಿದ್ಯಾರ್ಥಿಗಳು ಅದರ ದುರುಪಯೋಗ ಮಾಡಬಾರದು. ಅಲ್ಲದೆ ಸಂಘದಲ್ಲಿ ಸದಸ್ಯರು ಮಾಡಿದ ಸೇವೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಪೂರ್ಣಿಮಾ ಡಿ. ದೇವಾಡಿಗ, ಹಿರಿಯ ಸದಸ್ಯ ಚಂದ್ರಶೇಖರ ದೇವಾಡಿಗ ಶುಭ ಹಾರೈಸಿದರು. ಮಾಜಿ ಕೋಶಾಧಿಕಾರಿ ದಯಾನಂದ ದೇವಾಡಿಗ, ಸಂಘದ ಸ್ಥಳೀಯ ಸಮಿತಿ ಸದಸ್ಯರಾದ ಭೋಜ ದೇವಾಡಿಗ, ಚಂದ್ರಶೇಖರ ದೇವಾಡಿಗ, ಸುರೇಶ್‌ ದೇವಾಡಿಗ ಬಾರಕೂರು, ಹರಿಶ್ಚಂದ್ರ ದೇವಾಡಿಗ, ದೇವಾಡಿಗ ಭವನದ ವ್ಯವಸ್ಥಾಪಕ ಜಾರಪ್ಪ ದೇವಾಡಿಗ, ಮಹಿಳಾ ಸದಸ್ಯೆಯರಾದ ಸುನಂದಾ ಕರ್ಮರನ್‌, ಧನವತಿ ದೇವಾಡಿಗ, ಶಾಂತಾ ಪಿ. ದೇವಾಡಿಗ, ಶಾಂತಾ ದೇವಾಡಿಗ, ಆಶಾ ದೇವಾಡಿಗ, ವೈಷ್ಣವಿ ದೇವಾಡಿಗ, ತನ್ವಿ ಡಿ. ದೇವಾಡಿಗ, ಸ್ವಾತಿ ದೇವಾಡಿಗ, ವಿಮಲಾ ದೇವಾಡಿಗ, ಧನುಷ್‌ ಎನ್‌. ದೇವಾಡಿಗ, ರೋಹನ್‌ ಡಿ. ದೇವಾಡಿಗ, ಕಾರ್ತಿಕ್‌ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ನ್ಯಾಯವಾದಿ ಪ್ರಭಾಕರ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next